ವಿದ್ಯುತ್ ಬಿಲ್‌ನಲ್ಲಿ ಹೆಸರು ಬದಲಾವಣೆ ಈಗ ಮತ್ತಷ್ಟು ಸುಲಭ; ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…

ಮಂಗಳೂರು: ವಿದ್ಯುತ್ ಬಿಲ್‌ನಲ್ಲಿನ ಹೆಸರು ಬದಲಾವಣೆ ಈಗ ಮತ್ತಷ್ಟು ಸುಲಭಗೊಳಿಸಿದ್ದು, ಮನೆಯಲ್ಲೇ ಕುಳಿತುಕೊಂಡು ವಿದ್ಯುತ್ ಬಿಲ್‌ನಲ್ಲಿ ಹೆಸರು ಬದಲಾವಣೆ ಮಾಡಿಕೊಳ್ಳಬಹುದು. ಇಂಧನ ಇಲಾಖೆ ಹೊಸ ಲಿಂಕ್ ಬಿಡುಗಡೆ ಮಾಡಿದ್ದು, ಆನ್‌ಲೈನ್ ಲಿಂಕ್ ಮೂಲಕ ಹೆಸರು ಬದಲಾವಣೆ ಮಾಡಿಕೊಳ್ಳಬಹುದು.

ಈಗಾಗಲೇ ಐದು ಸಾವಿರ ಗ್ರಾಹಕರು ಈ ಸೌಲಭ್ಯ ಪಡೆದುಕೊಂಡಿದ್ದಾರೆ. ಬೇರೆ ಹೆಸರಿನಲ್ಲಿ ಇರುವ ಬಿಲ್ಡಿಂಗ್ ಖರೀದಿ ಮಾಡಿ ವಿದ್ಯುತ್ ಹೆಸರು ಬದಲಾವಣೆಗೆ ಬೆಸ್ಕಾಂ ಕಚೇರಿಗೆ ಅಲೆಯಬೇಕಿತ್ತು. ಆದರೆ ಈಗ ಹೊಸ ಲಿಂಕ್ ಮೂಲಕ ವಿದ್ಯುತ್ ಬಿಲ್‌ನಲ್ಲಿ ಹೆಸರು ಬದಲಾವಣೆ ಮಾಡಿಕೊಳ್ಳಬಹುದು.


bescom.co.in ವೆಬ್‌ಸೈಟ್‌ಗೆ ಲಾಗಿನ್ ಆಗಿ ಅಪ್ಲೈ ಮಾಡಬಹುದು. ಜನಸ್ನೇಹಿ ವಿದ್ಯುತ್ ಸೇವೆಗಳು ವಿಭಾಗದ ಅಡಿಯಲ್ಲಿ ಓನರ್‌ಶಿಪ್ ನೇಮ್ ಚೆಂಜ್‌ಗೆ ಲಾಗಿನ್ ಆಗಬೇಕು. ನಂತರ ಅಗತ್ಯ ವಿವರಗಳನ್ನ ಭರ್ತಿ ಮಾಡಿ ದಾಖಲೆಗಳನ್ನ ಅಪ್ಲೋಡ್ ಮಾಡಬೇಕು.

ಬೇಕಾಗಿರುವ ದಾಖಲೆಗಳು:

  • ಆಧಾರ್ ಕಾರ್ಡ್
  • ಮಾರಾಟ ಪತ್ರ
  • ತೆರಿಗೆ ಪಾವತಿ ಪತ್ರ
  • ಹಿಂದಿನ ಮಾಲೀಕರಿಂದ ಎನ್‌ಒಸಿ
  • ಇತ್ತೀಚಿನ ಕರೆಂಟ್ ಬಿಲ್
  • ವಿದ್ಯುತ್ ಪೂರೈಕೆ ಒಪ್ಪಂದ
  • ನಷ್ಟ ಪರಿಹಾರ ಬಾಂಡ್
  • ಫೋಟೋ
error: Content is protected !!