ಸುರತ್ಕಲ್: ಪಣಂಬೂರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ(ರಿ.) ಕೃಷ್ಣಾಪುರ 7ನೇ ವಿಭಾಗ, ಸಭಾಭವನ ನಿರ್ಮಾಣ ಸಮಿತಿ ನೂತನವಾಗಿ ನಿರ್ಮಿಸಿರುವ ವಿಶ್ವಬ್ರಾಹ್ಮಣ ಸಭಾಭವನದ ಉದ್ಘಾಟನಾ ಸಮಾರಂಭವು ದಿನಾಂಕ 01-05-2026 ನೇ ಶುಕ್ರವಾರದಂದು ಪೂರ್ವಹ್ನ ಗ೦ಟೆ 7:30ಕ್ಕೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸಭಾಭವನ ಉದ್ಘಾಟನಾ ಕಾರ್ಯಕ್ರಮದ ದೀಪಪ್ರಜ್ವಲನೆ ಹಾಗೂ ಆಶೀರ್ವಚನವನ್ನು ಶ್ರೀಮತ್ ಆನೆಗುಂದಿ ಮಹಾಸ೦ಸ್ಥಾನ ಸರಸ್ವತೀ ಪೀಠ, ಕಟಪಾಡಿ ಪಡುಕುತ್ಯಾರು ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ ಹಾಗೂ ವಿಶ್ವಬ್ರಾಹ್ಮಣ ಮಹಾಸ೦ಸ್ಥಾನ ಮಠ, ಅರಕಲಗೂಡು ತಾಲೂಕು, ಹಾಸನ ಜಿಲ್ಲೆ ಪರಮಪೂಜ್ಯ ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮಿ ನೇರವೇರಿಸಲಿದ್ದಾರೆ.
ಉದ್ಘಾಟನಾ ಸಮಾರಂಭದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಣಂಬೂರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ.ರಿ ಕೃಷ್ಣಾಪುರ ಇದರ ಅಧ್ಯಕ್ಷರಾದ ಸುಧಾಕರ ಆಚಾರ್ಯ ಕುತ್ತೆತ್ತೂರು ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಗ್ರಂಥಾಲಯದ ಉದ್ಘಾಟನೆಯನ್ನು ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ನೆರವೇರಿಸುವರು. ವಿಶೇಷ ಅಹ್ವಾನಿತರಾಗಿ ಪದ್ಮಶ್ರೀ ಪುರಸ್ಕೃತರು, ಮಾಜಿ ಆಯುಕ್ತರು ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಕರ್ನಾಟಕ ಸರಕಾರ, ಡಾ. ಕೆ.ಎನ್ ರಾಜಣ್ಣ, ವಿಶ್ವನಾಥ ದೇವಸ್ಥಾನ ಕೃಷ್ಣಾಪುರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ಕೆ.ಸಿ ನಾಗೇಂದ್ರ ಭಾರಧ್ವಜ್, ಪಣಂಬೂರು ನಂದನೇಶ್ವರ ದೇವಸ್ಥಾನ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ದೇವದತ್ತ ಶರ್ಮ ಅವರುಗಳು ಶುಭಾಶಂಸನೆಗೈಯಲಿರುವರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಥಬೀದಿ ಮಂಗಳೂರು ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನ ಆಡಳಿತಾಧಿಕಾರಿ ಕೆ. ಉಮೇಶ್ ಆಚಾರ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ರಿ. ಮಂಗಳೂರು ತಾಲೂಕು ಯೋಜನಾಧಿಕಾರಿ ಸುರೇಂದ್ರ, ಮಂಗಳೂರು ಸೂಪರಿಂಟೆಂಡೆಂಟ್ ಇಂಜಿನಿಯರ್ ಗೋಕುಲ್ ದಾಸ್, ದ.ಕ ಜಿಲ್ಲೆ ಬಿಜೆಪಿ ಉಪಾಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಮಂಗಳೂರು ಎಸ್.ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ.ಲಿ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ, ಮಂಗಳೂರು ವಿಶ್ವಕರ್ಮ ಸಹಕಾರ ಬ್ಯಾಂಕ್.ಲಿ ಅಧ್ಯಕ್ಷ ಡಾ. ಎಸ್. ಆರ್ ಹರೀಶ್ ಆಚಾರ್ಯ, ಮಂಗಳೂರು ಗೋಲ್ಡ್ ಫಿಂಚ್ ಯುವ ಉದ್ಯಮಿ ಈಶ್ವರ್ ಪ್ರಸಾದ್ ಶೆಟ್ಟಿ, ದ.ಕ ಜಿಲ್ಲೆ- ಉಡುಪಿ ಜೆಲ್ಲೆ ವಿಶ್ವಕರ್ಮ ಒಕ್ಕೂಟ.ರಿ ಅಧ್ಯಕ್ಷರಾದ ಮಧುಆಚಾರ್ಯ, ನಿಕಟಪೂರ್ವ ಮನಪಾ ಸದಸ್ಯೆ ಲಕ್ಷ್ಮೀ ಶೇಖರ್ ದೇವಾಡಿಗ, ಸುರತ್ಕಲ್ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ.ರಿ ಅಧ್ಯಕ್ಷರಾದ ಭುವನೇಶ್ ಶಿಬರೂರು, ಕಾಟಿಪಳ್ಳ ವಿಶ್ವಬ್ರಾಹ್ಮಣ ಯುವಬಳಗ ಅಧ್ಯಕ್ಷರಾದ ಯಶವಂತ ಆಚಾರ್ಯ ಹಾಗೂ ಸ್ಥಳೀಯ ಕೂಡವಳಿಕೆ ಮೊಕ್ತೇಸರರು ಉಪಸ್ಥಿತರಿರುವರು.

ಉದ್ಘಾಟನಾ ಸಮಾರಂಭದ ಸಭಾಕಾರ್ಯಕ್ರಮದಲ್ಲಿ ಮಹಾದಾನಿಗಳಾದ ಪಿ.ಕೆ ದಾಮೋದರ ಆಚಾರ್ಯ ಹೊಸಬೆಟ್ಟು ಮತ್ತು ಸುಮತಿ ದಾಮೋದರ ಆಚಾರ್ಯ ಹೊಸಬೆಟ್ಟು, ಪದ್ಮಶ್ರೀ ಪುರಸ್ಕೃತರಾದ ಡಾ.ಕೆ.ಎನ್ ರಾಜಣ್ಣ, ಪಿಎಚ್ ಡಿ ಪಧವಿ ಭಾಜನರಾದ ಡಾ.ರೋಹಿತ್ ಆಚಾರ್ಯ, ಕ್ಲಿನಿಕಲ್ ಯೋಗ ಮತ್ತು ಯೋಗಥೆರಪಿ ಸ್ವರ್ಣಪದಕ ವಿಜೇತೆ ಡಾ.ಗಣ್ಯಶ್ರೀಗೆ ಗೌರವ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮಗಳು:
ದಿನಾಂಕ 30-4-2026 ನೇ ಗುರುವಾರ ಸಂಜೆ 5:40ರಿಂದ ಶಿಲ್ಪಿಪೂಜೆ, ಸಭಾಭವನ ಪರಿಗ್ರಹ, ವಾಸ್ತುಹೋಮ, ರಾಕ್ಷೋಘ್ನ, ಸುದರ್ಶನ ಹೋಮ, ದಿನಾಂಕ 01-05-2026 ನೇ ಶುಕ್ರವಾರ ಪೂರ್ವಹ್ನ ಘ೦ಟೆ 7:30ಕ್ಕೆ ಪ್ರವೇಶ, ಗಣಪತಿ ಹೋಮ, ಧಾರ್ಮಿಕ ಪೂಜಾ ಕಾರ್ಯಕ್ರಮ. ಪೂರ್ವಹ್ನ ಗ೦ಟೆ 8:30ರಿಂದ ವಿಶ್ವಕರ್ಮ ಕಲಾಪರಿಷತ್ ರಿ ಮಂಗಳೂರು ಇದರ ಯುವಪ್ರತಿಭೆಗಳಿಂದ ಭಜನಾ ಕಾರ್ಯಕ್ರಮ, ಪೂರ್ವಹ್ನ ಗ೦ಟೆ 10:30 ಕ್ಕೆ ಸಭಾ ಕಾರ್ಯಕ್ರಮ ಮತ್ತು ಗೌರವ ಸನ್ಮಾನ, ಮಧ್ಯಾಹ್ನ ಗ೦ಟೆ 1:00ಕ್ಕೆ ಅನ್ನಸಂತರ್ಪಣೆ, ಅಪರಾಹ್ನ ಘ೦ಟೆ 2:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯನಿರ್ದೇಶಕಿ ರತ್ನಕಲಾಲಯ ಮಂಗಳೂರು ಅಕ್ಷತಾ ಬೈಕಾಡಿ ಅವರ ತಂಡದಿಂದ ಭರತನಾಟ್ಯ ಕಾರ್ಯಕ್ರಮ, ಸಂಜೆ ಘ೦ಟೆ4:00 ರಿಂದ ಜಿತೇಶ್ ಸೂರಿಂಜೆ ಅವರ ನಿರ್ದೇಶನದಲ್ಲಿ ಶ್ರೀ ಗಾಯತ್ರಿ ವಿಶ್ವಬ್ರಾಹ್ಮಣ ಯಕ್ಷವೃಂದ ಕೃಷ್ಣಾಪುರ ಇವರಿಂದ ( ಹಿರಣ್ಯಾಕ್ಷ ವಧೆ, ಇಂದ್ರಜಿತ್ ಕಾಳಗ, ತರಣಿಸೇನೆ ಕಾಳಗ) ಯಕ್ಷಗಾನ ಬಯಲಾಟ ಜರುಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.