ಕಾರು-ಬೈಕ್ ಡಿಕ್ಕಿ; ಸವಾರ ಸಾ*ವು, ಸಹಸವಾರೆ ಗಂಭೀರ ಗಾಯ

ಕಾರ್ಕಳ: ಕಾರು ಮತ್ತು ಬೈಕ್ ನಡುವಿನ ಅಪಘಾತದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಕಾರ್ಕಳದ ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ಕ್ರಾಸ್ ಬಳಿ ಶುಕ್ರವಾರ(ಏ.24) ಸಂಜೆ ಸಂಭವಿಸಿದೆ.

ನಿಟ್ಟೆ ಸಮೀಪದ ಬಜಕಳ ನಿವಾಸಿ ನವೀನ್‌ ಚಂದ್ರ ಮೂಲ್ಯ (45) ಮೃತ ಸವಾರ. ಮಗಳು ಪ್ರೇರಣಾ ಮೂಲ್ಯ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ನವೀನ್‌ ಚಂದ್ರ ಅವರು ತನ್ನ ಮಗಳು ಪ್ರೇರಣಾ ಅವರನ್ನು ಸಿಇಟಿ ಪರೀಕ್ಷೆ ಬರೆಯಿಸಿ ಬೈಕ್‌ನಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಾರ್ಕಳದಿಂದ ನಿಟ್ಟೆ ಕಡೆಗೆ ಅತಿವೇಗವಾಗಿ ಬಂದ ಕಾರು ಇವರ ಬೈಕ್‌ಗೆ ಗುದ್ದಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಸವಾರರು ರಸ್ತೆಗೆ ಎಸೆಯಲ್ಪಟ್ಟಿದ್ದು, ತಲೆಗೆ ಗಂಭೀರ ಪೆಟ್ಟು ಬಿದ್ದಿತ್ತು. ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ನವೀನ್‌ ಚಂದ್ರ ಅವರು ಮೃತಪಟ್ಟಿದ್ದಾರೆ.

ಈ ದುರ್ಘಟನೆಗೆ ಕಾರು ಚಾಲಕನ ಬೇಜವಾಬ್ದಾರಿಯುತ ಚಾಲನೆಯೇ ಮುಖ್ಯ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ.

error: Content is protected !!