“ನಾರಿ‌ ಶಕ್ತಿ‌ ವಂದನಾ” ಕಾಯ್ದೆಗೆ ಉಂಟಾಗಿರುವ ಸೋಲು ಪ್ರಜಾಪ್ರಭುತ್ವ ವ್ಯವಸ್ಥೆಯ ಕರಾಳ‌ ದಿನ; ಶಾಸಕ ಕಾಮತ್

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಜೀ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ “ನಾರಿ‌ ಶಕ್ತಿ‌ ವಂದನಾ” ಕಾಯ್ದೆಗೆ ಲೋಕಸಭೆಯಲ್ಲಿ ಸೋಲುಂಟಾಗಿರುವುದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಕರಾಳ‌ ದಿನ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಬೇಸರ ವ್ಯಕ್ತಪಡಿಸಿದರು.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಸ್ವಾತಂತ್ರ್ಯಾ ನಂತರದಿಂದಲೂ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು, ಪ್ರಜಾಪ್ರಭುತ್ವದ ನೈಜ ಉದ್ದೇಶವನ್ನು ಹಾಳುಗೆಡವುದು, ಸರ್ವಾಧಿಕಾರ ಮೆರೆಯುವುದು‌, ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವುದು ಕಾಂಗ್ರೆಸ್ ನ ಸಂಸ್ಕೃತಿಯಾಗಿದೆ. ಮೋದಿಯವರ ನಾರಿಕುಲದ ಬಗೆಗಿನ ಮಹಾ ಸಂಕಲ್ಪದ ನೈಜ ಕಾಳಜಿ ದೇಶದ ಮುಂದೆ ಅನಾವರಣಗೊಂಡಿದ್ದು, ಕಾಂಗ್ರೆಸ್ ನ ಸ್ತ್ರೀ ಕುಲದ ವಿರುದ್ಧದ ಧೋರಣೆ ಸಾಬೀತಾಗಿದೆ ಎಂದರು.

ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮಹಿಳಾ ಮೀಸಲಾತಿಯನ್ನು ಬಲಿಕೊಟ್ಟ ಕಾಂಗ್ರೆಸ್ ಹಾಗೂ ಇತರ ಪಕ್ಷಗಳಿಗೆ ಭವಿಷ್ಯತ್ತಿನಲ್ಲಿ ದೇಶದ ಮಹಿಳಾ‌ಶಕ್ತಿ ತಕ್ಕ ಪಾಠ ಕಲಿಸಲಿದ್ದಾರೆ. ಎಪ್ಪತ್ತು ಕೋಟಿ ಮಹಿಳೆಯರ 33% ಮೀಸಲಾತಿ ಹಕ್ಕನ್ನು ಕಸಿದುಕೊಂಡವರನ್ನು ಇತಿಹಾಸ ಎಂದಿಗೂ ಮರೆಯುವುದಿಲ್ಲ ಎಂದು ಶಾಸಕರು ಹೇಳಿದರು.

error: Content is protected !!