ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ‌ವೇದಿಕಾ ಎಸ್.‌ ದಾಸ್ ಇವರಿಗೆ ಬೆಳ್ಳಿ ಹಾಗೂ ಕಂಚಿನ ಪದಕಗಳ ಜಯ

ಮಂಗಳೂರು: ಮಲೇಶ್ಯಾದಲ್ಲಿ ಜರಗಿದ ಅಂತರಾಷ್ಟ್ರೀಯ ಮಟ್ಟದ 12 ದೇಶಗಳ ಸ್ಪರ್ಧಾಳುಗಳು ಭಾಗವಹಿಸಿದ್ದ ಕರಾಟೆಯ 10–12 ವರ್ಷದ ಕಲರ್ ಬೆಲ್ಟ್ ಮಹಿಳಾ ವಿಭಾಗ (50 ಕೆ.ಜಿ. ಮೇಲ್ಪಟ್ಟು) ಸ್ಪರ್ಧಿಸಿ, ಕುಮಿಟೆ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ಕಟಾ ವಿಭಾಗದಲ್ಲಿ ಕಂಚಿನ ಪದಕವನ್ನು ಮಂಗಳೂರು ಲೋಕೋಪಯೋಗಿ ಸಹಾಯಕ ಇಂಜಿನಿಯರ್‌ ದಾಸ್‌ ಪ್ರಕಾಶ್‌ ಇವರ ಪುತ್ರಿ, ವೆಸ್ಟನ್‌ ಇನ್ಸ್ಟಯೂಟ್‌ ಆಫ್‌ ಮಾರ್ಷಲ್‌ ಆರ್ಟ್‌ ಅಕಾಡೆಮಿಯಿಂದ ಪ್ರತಿನಿಧಿಸಿರುವ ವೇದಿಕಾ ಎಸ್.‌ ದಾಸ್ ಪಡೆದುಕೊಂಡಿದ್ದಾರೆ. ಬಾಲಕಿಯ ಸಾಧನೆಯನ್ನು ವಿಧಾನಸಭಾ ಸ್ಪೀಕರ್‌ ಯು.ಟಿ.ಖಾದರ್‌ ಅವರು ಗುರುತಿಸಿ ನಗರದಲ್ಲಿ ಅಭಿನಂದಿಸಿದ್ದಾರೆ.

ಮಲೇಶಿಯಾದ ಕ್ವಾಲಾಲಂಪುರದಲ್ಲಿ ಏಪ್ರಿಲ್ 11ರಂದು ನಡೆದ 4ನೇ ಅಂತರರಾಷ್ಟ್ರೀಯ ಶೋಟೋಕಾನ್ ಹಯೈದೆಸು ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಸಾಧನೆ ಮಾಡಿದ್ದಾರೆ. 2024ರಲ್ಲಿ ಕರಾಟೆ ತರಬೇತಿಯನ್ನು ಆರಂಭಿಸಿ, ಕೇವಲ ಒಂದು ವರ್ಷದ ಅವಧಿಯಲ್ಲಿ ಈ ಮಟ್ಟದ ಸಾಧನೆ ಮಾಡಿರುವುದು ವಿಶೇಷವಾಗಿದೆ. ಒಂದು ವರ್ಷದ ಸತತ ಅಭ್ಯಾಸದಿಂದ ಈಗಾಗಲೇ ಯೆಲ್ಲೋ ಬೆಲ್ಟ್‌ ಪಡೆದುಕೊಂಡಿರುವ ವೇದಿಕಾ ಎಸ್‌ .ದಾಸ್‌, ಇವರು ವೆಸ್ಟರ್ನ್‌ ಇನ್ಸ್ಟಿಟ್ಯೂಟ್‌ ಆಫ್‌ ಮಾರ್ಷಲ್‌ ಆರ್ಟ್ಸ್‌ ಅಕಾಡೆಮಿಯಿಂದ ಪ್ರತಿನಿಧಿಸಿದ್ದು, ಇದರ ತರಬೇತುದಾರರಾದ ಕ್ಯೋಶಿ ಸುರೇಂದ್ರ ಬಿ, ಕ್ಯೋಶಿ ವಿಕ್ಟರ್ ಡಿಸೋಜಾ ಹಾಗೂ ಸೆನ್ಸೈ ಅನೀಶ್ ಬಿ ಅವರ ಮಾರ್ಗದರ್ಶನದಲ್ಲಿ ತನ್ನ ಕೌಶಲ್ಯವನ್ನು ಬೆಳೆಸಿಕೊಂಡಿದ್ದಾಳೆ.

ಅಂತರಾಷ್ಟ್ರೀಯ ವೇದಿಕೆಯಲ್ಲಿ ಹಲವು ಸವಾಲುಗಳನ್ನು ಎದುರಿಸಿದ ವೇದಿಕಾ ತನ್ನ ಅನುಭವವನ್ನು ಹೀಗೆ ಹಂಚಿಕೊಂಡಿದ್ದಾರೆ. ನಾನು ನಿರಂತರ ಅಭ್ಯಾಸ ಮತ್ತು ಶಿಸ್ತನ್ನು ಅಳವಡಿಸಿಕೊಂಡೆ. ಕಟಾದಲ್ಲಿನ ಬಿಗಿತವನ್ನು ಹೋಗಲಾಡಿಸಲು ಪ್ರತಿದಿನ ಶ್ವಾಸಕ್ರಿಯೆ ಮತ್ತು ಸ್ಟ್ರೆಚಿಂಗ್ ಕಡೆ ಗಮನ ನೀಡಿದೆ. ಪ್ರತಿ ಚಲನೆಯ ಹಿಂದಿನ ಅರ್ಥವನ್ನು ಆಳವಾಗಿ ಅಭ್ಯಾಸ ಮಾಡುವುದರಿಂದ ತಾಂತ್ರಿಕ ನಿಖರತೆ ಸಾಧ್ಯವಾಯಿತು. ಕುಮಿಟೆಯಲ್ಲಿನ ಭಯ ಮತ್ತು ಆತಂಕವನ್ನು ಗೆಲ್ಲಲು ಹೆಚ್ಚು ಹೆಚ್ಚು ‘ಸ್ಪಾರಿಂಗ್’ ಅಭ್ಯಾಸ ಮಾಡಿದೆ ಮತ್ತು ಎದುರಾಳಿಯ ಚಲನೆಯನ್ನು ಗಮನಿಸುವ ದೃಶ್ಯೀಕರಣ ತಂತ್ರವನ್ನು ಬಳಸಿದೆ ಅನ್ನುತ್ತಾರೆ.

ತರಬೇತುದಾರರ ಪ್ರಕಾರ ಪ್ರದರ್ಶನದ ಸಮಯದಲ್ಲಿ ಸುತ್ತಮುತ್ತಲಿನ ವಾತಾವರಣ ಮತ್ತು ತನ್ನದೇ ಆದ ತಂತ್ರಗಳ ಮೇಲೆ ಏಕಕಾಲದಲ್ಲಿ ಗಮನಹರಿಸುವುದು ಕಷ್ಟಕರ, ನಿರ್ದಿಷ್ಟ ಕಟಾಗಳ ಸವಾಲುಗಳು ಪಿನಾನ್ ಶೋದನ್ ಇದು ಕರಾಟೆಯ ಅಡಿಪಾಯದಂತಿದೆ. ಸರಿಯಾದ ಹ್ಯಾಂಡ್ ಪೊಸಿಷನ್ ಕಾಪಾಡಿಕೊಳ್ಳುವುದು ಮತ್ತು ಸೊಂಟದ ಚಲನೆಯನ್ನು ಕರಗತ ಮಾಡಿಕೊಳ್ಳುವುದು ಆರಂಭಿಕರಿಗೆ ದೊಡ್ಡ ಸವಾಲು. ಕಟಾದಲ್ಲಿನ ಪ್ರತಿಯೊಂದು ಚಲನೆಯು ನಿಜವಾದ ಯುದ್ಧದಲ್ಲಿ ಹೇಗೆ ಬಳಕೆಯಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಸಿಯೆಂಚಿನ್ ಇದು ಸ್ಥಿರತೆ ಮತ್ತು ಹತ್ತಿರದ ಹೋರಾಟದ ಮೇಲೆ ಕೇಂದ್ರೀಕರಿಸುತ್ತದೆ.

ಸಿಯೆಂಚಿನ್‌ನಲ್ಲಿ ಬಳಸುವ “ಶಿಕೊ-ದಾಚಿ” ನಂತಹ ಕೆಳಮಟ್ಟದ ನಿಲುವುಗಳಲ್ಲಿ ಸ್ಥಿರತೆ ಕಾಪಾಡುವುದು ಕಷ್ಟ. ದೀರ್ಘಕಾಲದವರೆಗೆ ಕೆಳಮಟ್ಟದ ನಿಲುವುಗಳಲ್ಲಿ ಆಡಲು ಕಾಲು ಮತ್ತು ಹೊಟ್ಟೆಯ ಸ್ನಾಯುಗಳಲ್ಲಿ ಹೆಚ್ಚಿನ ಬಲ ಬೇಕಾಗುತ್ತದೆ. ಕುಮಿಟೆ ಗೆಲ್ಲುವಲ್ಲಿ ಸಮಯ ಪ್ರಜ್ಞೆ ಮತ್ತು ಮಾನಸಿಕ ನಿಯಂತ್ರಣದ ಪರೀಕ್ಷೆ. ಎದುರಾಳಿಗಿಂತ ಎಷ್ಟು ದೂರದಲ್ಲಿರಬೇಕು ಮತ್ತು ಯಾವಾಗ ದಾಳಿ ಮಾಡಬೇಕು ಎಂಬ ನಿರ್ಧಾರ ಅತ್ಯಂತ ಕಠಿಣ. ಎದುರಾಳಿಯ ದಾಳಿಯನ್ನು ಕ್ಷಣಾರ್ಧದಲ್ಲಿ ಗುರುತಿಸಿ ಪ್ರತಿರೋಧಿಸುವುದು ದೊಡ್ಡ ಸವಾಲು. ಪಂದ್ಯದ ಸಮಯದಲ್ಲಿ ಉಂಟಾಗುವ ಒತ್ತಡ ಮತ್ತು ಆತಂಕವು ಯೋಜಿತ ತಂತ್ರಗಳನ್ನು ಮರೆಸುವಂತೆ ಮಾಡಬಹುದು. ಸರಿಯಾದ ಭಂಗಿ ಮತ್ತು ತೀಕ್ಷ್ಣವಾದ ಕೈಗಳ ಚಲನೆ. ಹೋರಾಟವನ್ನು ಮೊದಲೇ ಕಲ್ಪಿಸಿಕೊಳ್ಳುವುದು ಮತ್ತು ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳುವುದು. ಕ್ಷಣಾರ್ಧದಲ್ಲಿ ತಂತ್ರಗಳನ್ನು ಕಾರ್ಯಗತಗೊಳಿಸಲು ಬೇಕಾದ ವೇಗ ಮತ್ತು ಶಕ್ತಿಯಾಗಿದೆʼ ಅನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

error: Content is protected !!