ಹಾವಿನಂತೆ ಬದಲಾಗುತ್ತೆ ಮುಖಭಾವ, ಕಪ್ಪಾಗುತ್ತೆ ಕಣ್ಣು; ಮಾಸ್ಕ್‌ ಮ್ಯಾನ್ ಜಿಮ್ ಕ್ಯಾರಿ ಕಣ್ಣಿನಲ್ಲಿ ಇಲ್ಯುಮಿನಾತಿಯ ರಕ್ತಸಿಕ್ತ ಮುದ್ರೆ!

ಒಂದು ಕಾಲದಲ್ಲಿ ʻದಿ ಮಾಸ್ಕ್’ ಸಿನೆಮಾದಲ್ಲಿ ವಿಚಿತ್ರ ಮುಖಭಾವ ಮಾಡಿ ಜಗತ್ತನ್ನೇ ನಗಿಸುತ್ತಿದ್ದ ಆ ಜಿಮ್ ಕ್ಯಾರಿ ಯಾರಿಗೆ ಗೊತ್ತಿಲ್ಲ ಹೇಳಿ. ಈಗ ಅವನ ಸುತ್ತ ವಿಚಿತ್ರ ಸುದ್ದಿಗಳು ಸುತ್ತಲಾರಂಭಿಸಿದೆ. ಅಸಲಿಗೆ ಜಿಮ್‌ ಕ್ಯಾರಿ ಎನ್ನುವ ಮನುಷ್ಯ ಈ ಭೂಮಿಯ ಮೇಲೆ ಇಲ್ಲ. ಅವನು ನಿಗೂಢವಾಗಿ ಕಣ್ಮರೆಯಾಗಿದ್ದಾನೆ! ಹೀಗೊಂದು ಸುದ್ದಿ ಇಂಟರ್ನೆಟಲ್ಲಿ  ಬಿರುಗಾಳಿ ಎಬ್ಬಿಸಿದೆ.

ಇಲ್ಯುಮಿನಾತಿ ಸೀಕ್ರೆಟ್‌ ಸೊಸೈಟಿಯ ಬಗ್ಗೆ ಅವನು ಬಹಿರಂಗವಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಅವನನ್ನು ಮುಗಿಸಲಾಗಿದೆಯಂತೆ.

ಈಗ ನಮಗೆ ಕಾಣುತ್ತಿರೋದು ಒಬ್ಬ ಮನುಷ್ಯನಲ್ಲ, ಬದಲಿಗೆ ಹಾಲಿವುಡ್‌ನ ಕರಾಳ ಮಾಂತ್ರಿಕ ಶಕ್ತಿಗಳ ಕೈಗೊಂಬೆ! ಸಾರ್ವಜನಿಕ ಸಮಾರಂಭಗಳಲ್ಲಿ ಜಿಮ್ ಕ್ಯಾರಿ ಕಣ್ಣುಗಳು ಅರೆಬರೆಯಾಗಿ ತೆರೆದುಕೊಂಡಿರುತ್ತವೆ, ಮಾತುಗಳಲ್ಲಿ ಏನೋ ಒಂಥರಾ ನಿಗೂಢತೆ ಇರುತ್ತೆ. “ನಾನು ಈಗ ಕೇವಲ ಜಿಮ್ ಕ್ಯಾರಿ ಅಲ್ಲ, ನಾನು ಅಸ್ತಿತ್ವದ ಶೂನ್ಯ” ಅಂತ ಅವರು ಹೇಳ್ತಿರೋದರ ಹಿಂದೆ ಏನೋ ರಹಸ್ಯವಿರಬಹುದೇ? ಇನ್ಸ್ಟಾಗ್ರಾಂ ರೀಲ್ಸ್‌ಗಳಲ್ಲಿ ಜಿಮ್‌ ಕ್ಯಾರಿಯ ಸ್ಫೋಟಕ ರೀಲ್ಸ್‌ಗಳಿವೆ. ಇವುಗಳಲ್ಲಿ ಹೆಚ್ಚಿನವುಗಳು ಎಐ ಆಧಾರಿತವಾಗಿದ್ದರೆ ಪ್ರತಿಶತ 20ರಷ್ಟು ನಿಜವಿರಬಹುದು.

ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿರುವ ಕೆಲವು ʻಸ್ಲೋ ಮೋಷನ್’ ರೀಲ್ಸ್‌ಗಳನ್ನು ಗಮನಿಸಿದರೆ ಮೈ ಜುಂ ಎನ್ನುತ್ತದೆ. ಜಿಮ್ ಕ್ಯಾರಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ನಗುವಾಗ, ಒಂದು ಕ್ಷಣ ಅವರ ಕಣ್ಣಿನ ಗುಡ್ಡೆಗಳು ಸಂಪೂರ್ಣ ಕಪ್ಪಾಗುತ್ತವೆ (Black Eyed People) ಅಥವಾ ಅವರ ಚರ್ಮದ ಕೆಳಗೆ ಯಾವುದೋ ವಿಚಿತ್ರ ಜೀವಿಯ ಚಲನವಲನಗಳು ಕಂಡಂತಾಗುತ್ತವೆ! ರೀಲ್ಸ್ ಕ್ರಿಯೇಟರ್‌ಗಳ ಪ್ರಕಾರ, ಜಿಮ್ ಕ್ಯಾರಿ ಕೇವಲ ಮನುಷ್ಯನಲ್ಲ, ಆತ ಒಬ್ಬ ʻರೆಪ್ಟಿಲಿಯನ್ ಶೇಪ್ ಶಿಫ್ಟರ್’ (ಸರೀಸೃಪದಂತೆ ರೂಪ ಬದಲಿಸುವವ). ಈ ನಿಗೂಢ ಶಕ್ತಿಗಳು ಮನುಷ್ಯರ ರೂಪ ಧರಿಸಿ ನಮ್ಮ ನಡುವೆಯೇ ಇವೆ ಅನ್ನೋದು ಈ ಇಂಟರ್ನೆಟ್ ಜಾಲದ ಭೀಕರ ವಾದ!

ಆತ್ಮವಿಲ್ಲದ ದೇಹ: ಮೆಟ್ರಿಕ್ಸ್‌ನಿಂದ ಹೊರಬಂದ ಗ್ಲಾಡಿಯೇಟರ್!
ಒಂದು ರೀಲ್ಸ್‌ನಲ್ಲಿ ಜಿಮ್ ಕ್ಯಾರಿ, “ನಾನು ಈ ಪ್ರಪಂಚದಲ್ಲಿ ಇಲ್ಲ, ನಾನು ಕೇವಲ ಒಂದು ಶಕ್ತಿಯ ಸಂವಹನ ಅಷ್ಟೇ” ಎಂದು ಹೇಳುವಾಗ ಅವರ ಹಿಂದೆ ಕಾಣುವ ನೆರಳು ವಿಚಿತ್ರವಾಗಿ ವರ್ತಿಸುತ್ತದೆ ಎಂಬ ಚರ್ಚೆ ಜೋರಾಗಿದೆ. ಇನ್ಸ್ಟಾಗ್ರಾಂನ ಕಾನ್ಸ್ಪಿರಸಿ ಥಿಯರಿಸ್ಟ್‌ಗಳ ಪ್ರಕಾರ, ಜಿಮ್ ಕ್ಯಾರಿ ʻಸಿಮ್ಯುಲೇಶನ್’ ಅಥವಾ ʻಮೆಟ್ರಿಕ್ಸ್’ ಅನ್ನು ಬೇಧಿಸಿ ಹೊರಬಂದಿದ್ದಾರೆ. ಹಾಲಿವುಡ್ ಎಂಬುದು ಮನುಷ್ಯರನ್ನು ಗುಲಾಮರನ್ನಾಗಿ ಇಟ್ಟಿರುವ ಒಂದು ಮಾಯಾಪ್ರಪಂಚ, ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಜಿಮ್ ಕ್ಯಾರಿಯನ್ನು ಹುಚ್ಚನೆಂದು ಬಿಂಬಿಸಲಾಗುತ್ತಿದೆ ಎಂಬುದು ಅಲ್ಲಿನ ಯುವ ಸಮೂಹದ ನಂಬಿಕೆ.

24 ಸೆಕೆಂಡ್‌ಗಳ ಆ ವಿಚಿತ್ರ ಸನ್ನೆ
ರೀಲ್ಸ್‌ಗಳಲ್ಲಿ ಪದೇ ಪದೇ ಹರಿದಾಡುತ್ತಿರುವ ಮತ್ತೊಂದು ವಿಡಿಯೋ ಎಂದರೆ, ಜಿಮ್ ಕ್ಯಾರಿ ತನ್ನ ಕಿವಿ ಮುಟ್ಟಿಕೊಳ್ಳುವ ಮತ್ತು ಕುತ್ತಿಗೆಯನ್ನು ಸವರುವ ವಿಧಾನ. ಇಲ್ಯುಮಿನಾತಿ ಭಾಷೆಯಲ್ಲಿ ಇದು “ನನಗೆ ಪ್ರಾಣಾಪಾಯವಿದೆ” ಅಥವಾ “ನಾನು ಈಗ ರಹಸ್ಯಗಳನ್ನು ಹೇಳಲಾರೆ” ಎಂಬ ಕೋಡ್ ಸಂದೇಶವಂತೆ! ಇನ್ಸ್ಟಾಗ್ರಾಂನಲ್ಲಿರುವ ʻಟ್ರುತ್ ಸೀಕರ್ಸ್’ ಎಂಬ ಗ್ರೂಪ್‌ಗಳು ಈ ಪ್ರತಿಯೊಂದು ಸಣ್ಣ ಸನ್ನೆಯನ್ನೂ ಡಿಕೋಡ್ ಮಾಡುತ್ತಾ, ಜಿಮ್ ಕ್ಯಾರಿ ಒಂದು ದೊಡ್ಡ ಜಾಗತಿಕ ರಹಸ್ಯದ ಸುಳಿಯಲ್ಲಿ ಸಿಲುಕಿದ್ದಾರೆ ಎಂದು ಸಾರುತ್ತಿದ್ದಾರೆ. ಜಿಮ್‌ ಕ್ಯಾರಿಯನ್ನು ಪಾತಾಳದಲ್ಲಿ ಅಡಗಿಸಿಡಲಾಗಿದ್ದು ಅಥವಾ ಬಂಧಿಸಿಡಲಾಗಿದ್ದು, ಯಾವುದೋ ಯಾಂತ್ರಿಕ ಪ್ರಯೋಗ ಮಾಡಲಾಗುತ್ತಿದೆ ಎನ್ನುವ ವಾದವಿದೆ.

ಇನ್ಸ್ಟಾಗ್ರಾಂನ ಆ ಫಿಲ್ಟರ್‌ಗಳು ಮತ್ತು ಮ್ಯೂಸಿಕ್‌ಗಳ ಅಬ್ಬರದ ನಡುವೆ ಜಿಮ್ ಕ್ಯಾರಿ ಒಬ್ಬ ‘ಸೂಪರ್ ಹ್ಯೂಮನ್’ ಆಗಿ ಅಥವಾ ʻಕರಾಳ ಶಕ್ತಿಗಳ ಬಲಿಪಶು’ವಾಗಿ ಕಾಣುತ್ತಿದ್ದಾರೆ. ಆ ರೀಲ್ಸ್‌ಗಳು ತೋರಿಸುತ್ತಿರುವ ಸತ್ಯಾಂಶ ಎಷ್ಟು ಅನ್ನೋದು ಯಾರಿಗೂ ಗೊತ್ತಿಲ್ಲ, ಆದರೆ ಆ 15 ಸೆಕೆಂಡ್‌ನ ವಿಡಿಯೋಗಳು ನಮ್ಮ ಮನಸ್ಸಿನಲ್ಲಿ ಹುಟ್ಟಿಸುವ ಭಯ ಮತ್ತು ಕುತೂಹಲ ಮಾತ್ರ ಹಳೆಯ ಕಾಲದ ಹಾರರ್ ಕಥೆಗಳಿಗಿಂತಲೂ ಪವರ್‌ಫುಲ್ ಆಗಿದೆ.

ಎಲಾನ್ ಮಸ್ಕ್‌ನಿಂದ ಹಿಡಿದು ಮಾರ್ಕ್ ಜುಕರ್‌ಬರ್ಗ್‌ವರೆಗೆ, ಅಮೆರಿಕದ ಮಾಜಿ ಅಧ್ಯಕ್ಷರಿಂದ ಹಿಡಿದು ಇಂಗ್ಲೆಂಡ್ ರಾಜಮನೆತನದವರೆಗೆ ಎಲ್ಲರೂ ಈ ರಹಸ್ಯ ಸಮಾಜದ ಮುದ್ರೆ ಹೊತ್ತಿದ್ದಾರೆ ಎಂಬುದು ಇಂಟರ್ನೆಟ್ ಲೋಕದ ಭೀಕರ ವಾದ. ಇವರನ್ನೆಲ್ಲಾ ‘ಪಪಿಟ್ಸ್’ ಅಥವಾ ಕೈಗೊಂಬೆಗಳು ಅಂತ ಕರೆಯಲಾಗುತ್ತೆ, ಇವರ ದಾರವನ್ನು ಎಳೆಯುತ್ತಿರುವ ಆ ಅಸಲಿ ಮಾಂತ್ರಿಕರು ಯಾರು ಅನ್ನೋದೇ ಈಗಿರೋ ದೊಡ್ಡ ಮಿಸ್ಟರಿ!

ಈ ಪಿತೂರಿ ಸಿದ್ಧಾಂತಗಳ ಪ್ರಕಾರ, ಜಗತ್ತಿನಲ್ಲಿ ನಡೆಯುವ ದೊಡ್ಡ ಯುದ್ಧಗಳು, ಸಾಂಕ್ರಾಮಿಕ ರೋಗಗಳು ಅಥವಾ ಆರ್ಥಿಕ ಕುಸಿತಗಳು ಯಾವುದೂ ಆಕಸ್ಮಿಕವಲ್ಲ! ಇವೆಲ್ಲವೂ ಇಲ್ಯುಮಿನಾತಿಯ ʻನ್ಯೂ ವರ್ಲ್ಡ್ ಆರ್ಡರ್’ (New World Order) ಯೋಜನೆಯ ಭಾಗ. ಶ್ರೀಮಂತ ಉದ್ಯಮಿಗಳು ಮತ್ತು ಪ್ರಭಾವಿ ರಾಜಕಾರಣಿಗಳು ಒಂದೇ ಕಡೆ ಸೇರಿ ರಹಸ್ಯವಾಗಿ ಸಭೆ ನಡೆಸಿ ಸಾಮಾನ್ಯ ಜನರ ಜನಸಂಖ್ಯೆಯನ್ನು ಹೇಗೆ ನಿಯಂತ್ರಿಸಬೇಕು ಮತ್ತು ಜಗತ್ತಿನ ಸಂಪತ್ತನ್ನು ಹೇಗೆ ಲೂಟಿ ಮಾಡಬೇಕು ಅನ್ನೋದಕ್ಕೆ ಸ್ಕೆಚ್ ಹಾಕ್ತಾರೆ ಅನ್ನೋದು ಈ ಥಿಯರಿಗಳ ಸಾರಾಂಶ.

error: Content is protected !!