ಕಾರು ಮತ್ತು ಪಿಕಪ್ ನಡುವೆ ಅಪಘಾತ- ಓರ್ವನಿಗೆ ಗಂಭೀರ ಗಾಯ

ಸುಳ್ಯ: ಕಾರು ಮತ್ತು ಪಿಕಪ್ ನಡುವೆ ಅಪಘಾತ ಸಂಭವಿಸಿ ಅಪಘಾತದಲ್ಲಿ ಪಿಕಪ್ನಲ್ಲಿದ್ದ ಪ್ರಯಾಣಿಕನ ಕೈ ಮುರಿದ ಘಟನೆ ಆಲೆಟ್ಟಿ ಗ್ರಾಮದ ಪಾಲಡ್ಕ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಮಡಿಕೇರಿಯಿಂದ ಸುಳ್ಯ ಕಡೆ ಬರುತ್ತಿದ್ದ ಕಾರು ಹಾಗೂ ಸುಳ್ಯ ಕಡೆಯಿಂದ ಮಡಿಕೇರಿ ಕಡೆ ತೆರಳುತ್ತಿದ್ದ ಪಿಕಪ್ ನಡುವೆ ಅಪಘಾತ ನಡೆದಿದ್ದು, ಗಾಯಗೊಂಡ ವ್ಯಕ್ತಿಯನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ.

error: Content is protected !!