
ಮಂಗಳೂರು: ಮಧ್ಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಸುರತ್ಕಲ್ ರೋಟರಿ ಕ್ಲಬ್ ಮುಖಾಂತರ ಎನ್. ಐ.ಟಿ.ಕೆ ಕ್ಯಾಂಪಸ್ ಕಿಡ್ಸ್ ವತಿಯಿಂದ ಸುಮಾರು 75 ಸಾವಿರ ವೆಚ್ಚದಲ್ಲಿ ಕುಡಿಯುವ ನೀರಿನ ಘಟಕವನ್ನು ಶಾಲೆಗೆ ನೀಡಿದ್ದು ಅದರ ಉದ್ಘಾಟನೆಯನ್ನು ರೋಟರಿ ವಲಯ ಸೇನಾನಿ ಸಂದೀಪ್ ರಾವ್ ಇಡ್ಯಾ ಮಾಡಿದರು.

ವೇದಿಕೆಯಲ್ಲಿ ಎನ್ ಐ ಟಿ ಕೆ ಕ್ಯಾಂಪಸ್ ಕಿಡ್ಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅರವಿಂದ್ ಭಟ್, ಸುರತ್ಕಲ್ ರೋಟರಿ ಕ್ಲಬ್ ಉಪಾಧ್ಯಕ್ಷ ರಮೇಶ್ ರಾವ್, ಕಾರ್ಯದರ್ಶಿ ರಾಮ್ ಮೋಹನ್, ಟಿ.ಎನ್ ಶ್ರೀಧರ್, ವಿದ್ಯಾಲಕ್ಷ್ಮೀ ಭಟ್, ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಕೋಶಾಧಿಕಾರಿ ವಿಠಲ ಶೆಟ್ಟಿ, ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ಅನಿಲ್ ಸಾಲ್ಯಾನ್, ಸದಸ್ಯರಾದ ಪರಮೇಶ್ವರ್, ರಿತೇಶ್ ಶೆಟ್ಟಿ, ಶಾಲೆಯ ಶಿಕ್ಷಕಿ ಮೇಬಲ್ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಪ್ರಪುಲ್ಲ ಪಂಜ ವಹಿಸಿದರು ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪುಷ್ಷರಾಜ್ ಶೆಟ್ಟಿ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು.
