ಕಿನ್ನಿಗೋಳಿ : ಧಾರ್ಮಿಕ ಆಚರಣೆಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ನಮ್ಮ ಪೂರ್ವಿಕರ ಆಚರಣೆಗಳು ನಂಬಿಕೆಗಳು ನಮ್ಮನ್ನು ಬೆಳೆಸಿ ಪೋಷಿಸಿ ಮಾರ್ಗದರ್ಶನ ನೀಡಿವೆ ಅವನ್ನು ಮುಂದುವರೆಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಬೆಂಗಳೂರು ಸತ್ಯ ಸಾಯಿ ಶಿಕ್ಷಣ ಸಂಸ್ಥೆಯ ಹಾಗೂ ವಿ.ನಾರಾಯಣ ಸಂಸ್ಥೆಯ ಮುಖ್ಯಸ್ಥ ಡಾ. ದೇವಿ ಪ್ರಸಾದ್ ಶೆಟ್ಟಿ ಹೇಳಿದರು. ಅವರು ಮಾ.21ರಂದು ಪಕ್ಷಿಕೆರೆ ಸಮೀಪದ ಪಂಜ ಕೋಯಿಕುಡೆ ಶ್ರೀ ಶನೈಶ್ಚರ ಮಂಡಳಿಯ ವಾರ್ಷಿಕ ಪೂಜಾ ಮಂಗಲೋತ್ಸವ ಕಾರ್ಯಕ್ರದಲ್ಲಿ ಮಾನನಾಡಿದರು.


ಮಂಡಳಿಯ ಗೌರವಾಧ್ಯಕ್ಷ ಪಂಜ ವಾಸುದೇವ ಭಟ್ ಶುಭಾಶಂಶನೆಗೈದರು. ಇದೇ ಸಂದರ್ಭದಲ್ಲಿ ಸ್ಥಳೀಯ ಎಸ್‌ಎಸ್ ಎಲ್‌ಸಿಯಲ್ಲಿ ಅಧಿಕ ಅಂಕ ಪಡೆದ ಸಾಧಕ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕರದಿಯಲ್ಲಿ ಗೌರವಿಸಲಾಯಿತು. ಪವರ್ ಲಿಪ್ಟಿಂಗ್‌ನಲ್ಲಿ ಪ್ರಶಸ್ತಿ ಪಡೆದ ಸಾಧಕಿ ಪ್ರಿಯಾ ಪ್ರಕಾಶ್ ಉಲ್ಯ ಅವರನ್ನು ಗೌರವಿಸಲಾಯಿತು.


ಪಂಜದ ಗುತ್ತು ಪ್ರವೀಣ್ ಆಳ್ವ , ನವೀನ್ ಶೆಟ್ಟಿನಲ್ಯ ಗುತ್ತು, ಚಂದ್ರಹಾಸ ಶೆಟ್ಟಿ ಮೊಗಪಾಡಿ, ವಿಠೋಭ ಭಜನಾ ಮಂದಿರದ ಅಧ್ಯಕ್ಷ ಭರತ್ ಶೆಟ್ಟಿ, ಜಯಶೆಟ್ಟಿ ಬಾಕಿಮಾರು ಗುತ್ತು, ರಘುರಾಮ ಶೆಟ್ಟಿಬಾಳಿಕೆ ಮನೆ, ಬಾಲಕೃಷ್ಣ ದೇವಾಡಿಗ ಪಂಜ, ಮಮತಾ ಶೆಟ್ಟಿ, ಸದಾನಂದ ಶೆಟ್ಟಿ ಕೊಯಿಕುಡೆ, ಕಾರ್ಯದರ್ಶಿ ಕಿರಣ್ , ಕೋಶಾಧಿಕಾರಿ ಪದ್ಮನಾಭ ಪೂಜಾರಿ ಪಂಜ ಮತ್ತಿತತರು ಉಸ್ಥಿರಿದ್ದರು.


ಮಂಡಳಿಯ ಅಧ್ಯಕ್ಷ ಸುರೇಶ್ ದೇವಾಡಿಗ ಪಂಜ ಸ್ವಾಗತಿಸಿದರು. ಸತೀಶ್ ಎಂ ಶೆಟ್ಟಿ ಪಂಜ ಬೈಲಗುತು ಕಾರ್ಯಕ್ರಮ ನಿರೂಪಿಸಿದರು.