ಮಂಗಳೂರು: ಮಂಗಳೂರು ಮತ್ತು ರಾಮೇಶ್ವರ ನಡುವೆ ವಾರಕ್ಕೊಮ್ಮೆ ರೈಲು ಸಂಚಾರ ಇಂದಿನಿಂದ(ಮಾ.14) ಆರಂಭಗೊಳ್ಳಲಿದ್ದು, ರಾಮೇಶ್ವರ ಮತ್ತು ಮಂಗಳೂರು ನಡುವಿನ ಸಂಚಾರ ಶನಿವಾರ(ಮಾ.15) ಆರಂಭಗೊಳ್ಳಲಿದೆ.

ಮಂಗಳೂರು ಸೆಂಟ್ರಲ್-ರಾಮೇಶ್ವರ ವೀಕ್ಲಿ ಎಕ್ಸ್ ಪ್ರಸ್ (16622) ಮಂಗಳೂರು ಸೆಂಟ್ರಲ್ ನಿಂದ ಪ್ರತಿ ಶನಿವಾರ ರಾತ್ರಿ 7.30ಕ್ಕೆ ಹೊರಟು ಮರುದಿನ ಬೆಳಗ್ಗೆ 10.50ಕ್ಕೆ ರಾಮೇಶ್ವರ ತಲುಪಲಿದೆ.


ರಾಮೇಶ್ವರ-ಮಂಗಳೂರು ಸೆಂಟ್ರಲ್ ವೀಕ್ಲಿ ಎಕ್ಸ್ ಪ್ರಸ್(16621) ಪ್ರತಿ ರವಿವಾರ ಅಪರಾಹ್ನ 3.30ಕ್ಕೆ ರಾಮೇಶ್ವರದಿಂದ ಹೊರಟು ಮರುದಿನ ಬೆಳಗ್ಗೆ 6.55ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ ಎಂದು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಪ್ರಕಟನೆ ತಿಳಿಸಿದೆ.
