
ಕೋಲ್ಕತ್ತಾ: ಪತಿ ಹಾಗೂ ಪತ್ನಿ ಮಧ್ಯೆ ಕಾರಿನ EMI ಪಾವತಿಸುವ ವಿಚಾರವಾಗಿ ಜಗಳ ಶುರುವಾಗಿದ್ದು, ಕೊನೆಗೆ ಕೊಲೆಯಿಂದ ಅಂತ್ಯಗೊಂಡಿ ಘಟನೆ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಸಣ್ಣದೊಂದು ಮನಸ್ತಾಪದಿಂದಾಗಿ ಪತಿಯೇ ಪತ್ನಿಯನ್ನ ಬೆಂಕಿ ಹಚ್ಚಿ ಕೊಲೆ ಮಾಡಿರುವ ಕೂಚ್ ಬೆಹಾರ್‌ನಲ್ಲಿರುವ ಎಂಜೆಎನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ರಸೂತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಛಂದಾ ರಾಯ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಛಂದಾ ಮನೆಯಿಂದ ಕೂಗುತ್ತಾ ಹೊರಗೆ ಓಡಿಹೋಗಿದ್ದಳು, ಬೆಂಕಿ ಹೊತ್ತಿಕೊಂಡಿದ್ದರಿಂದ ಜನರು ಭಯಭೀತರಾಗಿದ್ದರು. ನಿವಾಸಿಗಳು ಆಕೆಯನ್ನು ಎಂಜೆಎನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಿದ್ದಾರೆ, ಆದರೆ ಅಲ್ಲಿಗೆ ತಲುಪುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆಂದು ವೈದ್ಯರು ಘೋಷಿಸಿದ್ದಾರೆ.

ಛಂದಾ ಅವರು ಕಳೆದ ಮೂರುವರೆ ವರ್ಷಗಳಿಂದ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದು, ಪತಿ ರಂಜಿತ್ ರಾಯ್, ವೃತ್ತಿಯಲ್ಲಿ ಚಾಲಕರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನ EMI ಪಾವತಿಗೆ ಸಂಬಂಧಿಸಿದಂತೆ ದಂಪತಿ ಆಗಾಗ ಜಗಳವಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಗಳು ತಿಳಿಸಿವೆ.
ಪೊಲೀಸ್ ಮೂಲಗಳ ಪ್ರಕಾರ, ರಂಜಿತ್ ಜೀವನ ಸಾಗಿಸಲು ವಾಹನವನ್ನು ಖರೀದಿಸಿದ್ದರು. ಸಾಲ ಮರುಪಾವತಿಗೆ ಸಂಬಂಧಿಸಿದ ವಿವಾದಗಳು ದಂಪತಿ ನಡುವೆ ಪದೇ ಪದೇ ಜಗಳಗಳಿಗೆ ಕಾರಣವೆಂದು ವರದಿಯಾಗಿದೆ.

ದಂಪತಿ ನಡುವಿನ ವಿವಾದಗಳು ಈ ಹಿಂದೆ ಮಹಿಳಾ ಪೊಲೀಸ್ ಠಾಣೆಗೆ ತಲುಪಿದ್ದವು, ಆದರೆ ಆ ಸಮಯದಲ್ಲಿ ಯಾವುದೇ ಔಪಚಾರಿಕ ದೂರು ದಾಖಲಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ರಂಜಿತ್ ಕೂಡ ಸುಟ್ಟ ಗಾಯಗಳಾಗಿದ್ದು, ಪ್ರಸ್ತುತ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಮೇಲೆ ನಿಗಾ ಇಡಲಾಗಿದ್ದು, ಅವರ ಸ್ಥಿತಿ ಸ್ಥಿರವಾದ ನಂತರ ಹೇಳಿಕೆಯನ್ನು ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.