ವಿದ್ಯುತ್‌ ಕಂಬಕ್ಕೆ ಗುದ್ದಿದ ಬೈಕ್‌ ; ಸವಾರ ಸಾ*ವು

ಪುತ್ತೂರು: ವಿದ್ಯುತ್‌ ಕಂಬಕ್ಕೆ ಬೈಕ್‌ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿರುವ ಘಟನೆ ಕುಂಬ್ರ-ಬೆಳ್ಳಾರೆ ರಸ್ತೆಯ ತ್ಯಾಜ್ಯ ನಗರದಲ್ಲಿ ಮಂಗಳವಾರ (ಫೆ.03)ರಾತ್ರಿ ನಡೆದಿದೆ.

ಕುಂಬ್ರ ಶಾಲಾ ಬಳಿಯ ಭುವನ್ (33) ಮೃತ ಯುವಕ.

ಭುವನ್ ನಿಂತಿಕಲ್ಲಿನ ಬಾರ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮಂಗಳವಾರ ರಾತ್ರಿ ಕೆಯ್ಯೂರು ಕಡೆಗೆ ಹೋಗಿ ಮರಳಿ ಮನೆಗೆ ಬರುತ್ತಿದ್ದ ವೇಳೆ‌ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!