ಮಂಗಳೂರು: ಬಡ ಮಧ್ಯಮ ವರ್ಗದ ಜನರಿಗೆ ಅನುಕೂಲ ಆಗಬೇಕೆಂಬ ನೆಲೆಯಲ್ಲಿ ವೆನ್ಲಾಕ್ ಆಸ್ಪತ್ರೆಯನ್ನು 70 ಕೋಟಿ ರೂ. ಗಳ ವೆಚ್ಚದಲ್ಲಿ ಎರಡು ಹಂತದಲ್ಲಿ ವಿಸ್ತರಿಸಲಾಗುವುದು. ಮೊದಲನೇ ಹಂತದಲ್ಲಿ 35 ಕೋಟಿ ವೆಚ್ಚದಲ್ಲಿ ನೂತನ ಎರಡು ಅಂತಸ್ತಿನ OPD ವಿಭಾಗವನ್ನು ನಿರ್ಮಾಣ ಮಾಡಲು ಸದ್ಯದಲ್ಲಿಯೇ ಟೆಂಡರ್ ಗೆ ಆಹ್ವಾನ ನೀಡಲಾಗುವುದು. ಈ ಕಟ್ಟಡದಲ್ಲಿ ಸೌರವಿದ್ಯುತ್ ಘಟಕವೂ ಇರಲಿದ್ದು, ಸಿಸಿ ಟಿವಿ ಅಳವಡಿಸಲಾಗುವುದು.

ವೆನ್ಲಾಕ್ ಆಸ್ಪತ್ರೆಯನ್ನು ಒಂದು ರೀತಿಯ ಮಾದರಿ ಆಸ್ಪತ್ರೆಯಾಗಿ ನಿರ್ಮಾಣ ಮಾಡುವುದು ಆರೋಗ್ಯ ಇಲಾಖೆಯ ಗುರಿಯಾಗಿದ್ದು, ಎಲ್ಲ ರೀತಿಯ ಸೌಲಭ್ಯ ದೊರೆಯಬೇಕು ಮತ್ತು ಸಾರ್ವಜನಿಕರಿಗೆ ಅನುಕೂಲವಾಗಬೇಕು ಎಂದು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
