ಶೋಷಿತರ ಎದೆಯಲ್ಲಿ ಅಕ್ಷರಬೀಜ ಬಿತ್ತಿದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜನ್ಮದಿನದ ಸಂಭ್ರಮ

ಮಂಗಳೂರು: ನಗರದ ಗಾಂಧಿನಗರ ಉರ್ವಾ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಸಾಮರಸ್ಯ ಮಂಗಳೂರು ನೇತೃತ್ವದಲ್ಲಿ ಶೋಷಿತರ ಎದೆಗಳಲ್ಲಿ ಅಕ್ಷರದ ಬೀಜ ಬಿತ್ತಿದ ಮೊಟ್ಟ ಮೊದಲ ಶಿಕ್ಷಕಿ, ಸಮಾಜ ಸುಧಾರಕಿ, ಅಕ್ಷರ ದಾತೆ ಸಾವಿತ್ರಿ ಬಾಯಿ ಫುಲೆಯವರ ಜನ್ಮದಿನ ಪ್ರಯುಕ್ತ, ಅಕ್ಷರದವ್ವ ಕುರಿತು ಮಾಹಿತಿ ತರಬೇತಿ ನಡೆಸಲಾಯಿತು.

ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾಮರಸ್ಯ ಮಂಗಳೂರು ಅಧ್ಯಕ್ಷೆ ಶ್ರೀಮತಿ ಮಂಜುಳಾ ನಾಯಕ್ ರವರು ಉದ್ಘಾಟಿಸಿದರು.

ಸಾಮರಸ್ಯ ಮಂಗಳೂರು ಅಧ್ಯಕ್ಷೆ ಶ್ರೀಮತಿ ಮಂಜುಳಾ ನಾಯಕ್ ಹಾಗೂ ದಲಿತ ಪರ ಚಳುವಳಿಯ ಮುಖಂಡರಾದ ಶ್ರೀಯುತ ಮೋಹನಂಗಯ್ಯ ಸ್ವಾಮಿಯವರು ಸಾವಿತ್ರಿಬಾಯಿ ಫುಲೆರವರ ಕುರಿತು ಮಾಹಿತಿ ನೀಡಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಫ್ಲೇವಿ ಫೆರ್ನಾಂಡಿಸ್ ರವರಿಗೆ ಸಾವಿತ್ರಿಬಾಯಿ ಫುಲೆ ಜನ್ಮದಿನ ಪ್ರಯುಕ್ತ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯ ಸಮರ್ಥ ಭಟ್, ನ್ಯೂ ಫ್ರೆಂಡ್ಸ್ ಕಾಪಿಗುಡ್ಡೆ ಸ್ಥಾಪಕ ಅಧ್ಯಕ್ಷರಾದ ರಾಜೇಶ್ ದೇವಾಡಿಗ, ಸಾಮರಸ್ಯ ಮಂಗಳೂರು ಪದಾಧಿಕಾರಿಗಳಾದ, ಟಿಸಿ ಗಣೇಶ್, ಯೋಗೀಶ್ ನಾಯಕ್, ಶ್ರೀಮತಿ ಪೂರ್ಣಿಮಾ, ನಾಗೇಂದ್ರ ರಾವ್, ವಿದ್ಯಾ ಶೆಣೈ, ಶಾಲೆಯ ಮುಖ್ಯೋಪಾಧ್ಯಾಯಿನಿ ಫ್ಲೆವಿ ಫೆರ್ನಾಂಡಿಸ್, ಶಿಕ್ಷಕಾದ ಶರ್ಮಿಳಾ ಡಿಸೋಜ, ಜ್ಯೋತಿ ನಾಯಕ್, ರಾಜೇಶ್ವರಿ ಪ್ರಭು, ನಮಿತಾ ಬಿ, ಆಶಾ, ಸುಧಾ ಬಿ, ಜೆಸಿಂತಾ ಲಾಬಿ, ಗೌರವ ಶಿಕ್ಷಕರಾದ ಶೋಬಾ, ಬೇಬಿ ಶಕುಂತಲಾ ಮತ್ತಿತರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ನೀತ್ ಶರಣ್ ನಿರೂಪಿಸಿ, ಉಮ್ಮರ್ ಸಾಲತ್ತೂರು ಧನ್ಯವಾದ ಗೈದರು.

ಸವಾಲುಗಳನ್ನೆ ಮೆಟ್ಟಿಲಾಗಿಸಿಕೊಂಡು, ಜಡ್ಡುಗಟ್ಟಿದ ಸಮಾಜಕ್ಕೆ ಶಿಕ್ಷಣವೇ ಹರಿತ ಆಯುಧ ಎಂದು ಸಾರಿದ ತಾಯಿಗೆ ಶರಣು.

error: Content is protected !!