ತೊಕ್ಕೊಟ್ಟು: ಸೈಕಲ್ ಅಂಗಡಿಯಲ್ಲಿ ಕ್ಯಾಶ್ ಪೆಟ್ಟಿಗೆಯಿಂದ ಹಣ ಕಳವು; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮಂಗಳೂರು: ತೊಕ್ಕೊಟ್ಟು ಫಾಸ್ಟ್ ಟ್ರ್ಯಾಕ್ ಸೈಕಲ್ ಶಾಪ್ ನ ಕ್ಯಾಶ್ ಪೆಟ್ಟಿಗೆಯಿಂದ ಹಣ ಕದ್ದ ಘಟನೆ ಇಂದು(ಡಿ.19) ಬೆಳಿಗ್ಗೆ ನಡೆದಿದೆ.

ರಸ್ತೆಬದಿಯಲ್ಲಿ ಪೊಲೀಸ್ ವಾಹನ ಬಂದು ನಿಂತ ವಿಚಾರ ತಿಳಿದುಕೊಳ್ಳಲು ಅಂಗಡಿ ಮಾಲೀಕರು, ಸಿಬ್ಬಂದಿಗಳು ತೆರಳಿದ್ದರು. ಈ ವೇಳೆ ಸುತ್ತಮುತ್ತಲ ಅಂಗಡಿಗಳಲ್ಲಿ ಯಾರೂ ಇಲ್ಲ ಎಂದು ಖಾತರಿಯಾದ ತಕ್ಷಣ ವ್ಯಕ್ತಿಯೊಬ್ಬ ಕ್ಯಾಶ್ ಪೆಟ್ಟಿಗೆಗೆ ಕೈ ಹಾಕಿ ಹಣವನ್ನು ತೆಗೆದಿರುವಂತಹ ಘಟನೆ ತೊಕ್ಕೊಟ್ಟಿನ ಅಮ್ಮ ಇಲೆಕ್ಟ್ರಾನಿಕ್ಸ್ ಪಕ್ಕದಲ್ಲಿರುವ ಫಾಸ್ಟ್ ಟ್ರ್ಯಾಕ್ ಸೈಕಲ್ ಶಾಪ್ ನಲ್ಲಿ ನಡೆದಿದೆ. ಕದ್ದಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

error: Content is protected !!