ಕದ್ರಿ ಪಂಜುರ್ಲಿಯನ್ನು ವಾರಾಹಿ ಪಂಜುರ್ಲಿ ಮಾಡಿದ್ದು ಯಾರು? ಬಾರೆಬೈಲು ಪಂಜುರ್ಲಿ ಕ್ಷೇತ್ರದ ರವಿಪ್ರಸನ್ನರ ಎಲ್ಲಾ ಆರೋಪಗಳಿಗೆ ತಮ್ಮಣ್ಣ ಶೆಟ್ಟಿ ಕೌಂಟರ್!

ಮಂಗಳೂರು: ಬಾರೆಬೈಲ್‌ ವಾರಾಹಿ ಪಂಜುರ್ಲಿ ಕ್ಷೇತ್ರದಲ್ಲಿ ಕಾಂತಾರ ಚಾಪ್ಟರ್-1‌ ಯಶಸ್ವಿಗೆ ರಿಷಭ್ ಶೆಟ್ಟಿ ಸಲ್ಲಿಸಿದ ಹರಕೆಯ ನೇಮದಲ್ಲಿ ಎಣ್ಣೆ ಬೂಳ್ಯ, ದೈವ ರಿಷಭ್ ಶೆಟ್ಟಿ ಮಡಿಲಲ್ಲಿ ಮಲಗಿರುವುದು, ದೈವಕ್ಕೆ ನೇಮ ಸಲ್ಲಿಸಿದ ಕುರಿತಾಗಿ ಉಂಟಾದ ವಿವಾದ ಕುರಿತಂತೆ ದೈವಾರಾಧನೆ ವಿಮರ್ಶಕ ತಮ್ಮಣ್ಣ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿ ಮಾಧ್ಯಮಗಳಲ್ಲಿ ಚರ್ಚೆ ನಡೆಸಿದ್ದರು.
ಇದರಿಂದ ಕ್ರುದ್ಧರಾಗಿದ್ದ ಕದ್ರಿ ವಾರಾಹಿ ಪಂಜುರ್ಲಿ ಕ್ಷೇತ್ರದ ಆಡಳಿತ ಮಂಡಳಿಯ ಗೌರವಾಧ್ಯಕ್ಷ ರವಿಪ್ರಸನ್ನ ಸಿ.ಕೆ ಅವರು, ದೈವ ಪರಿಚಾರಕರು, ಊರವರ ಜೊತೆ ಸೇರಿ ಸ್ಪಷ್ಟೀಕರಣ ನೀಡಿದ್ದರು. ಅಲ್ಲದೆ ತಮ್ಮಣ್ಣ ಶೆಟ್ಟಿ ವಿರುದ್ಧ ಗಂಭೀರ ಆರೋಪ ಮಾಡಿದ್ದ ಅವರು “ತಮ್ಮಣ್ಣ ಕೊಂಡಾಣ, ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದಿಂದ ಚಿನ್ನ ಕದ್ದಿದ್ದಾರೆ” ಎಂದಿದ್ದರು.

ʻಬಾರಬೈಲ್ ವಾರಾಹಿ ಪಂಜುರ್ಲಿ ನೇಮದ ಕಟ್ಟುಕಟ್ಟಲೆಯಲ್ಲಿ ಲೋಪ ಆಗಿಲ್ಲ: ʻದೇವಸ್ಥಾನದ ಚಿನ್ನ ಕದ್ದವರು ದೈವಗಳ ಬಗ್ಗೆ ಮಾತಾಡೋದು ಸರಿಯಾ?ʼ

 

ರವಿಪ್ರಸನ್ನರ ಆರೋಪಗಳಿಗೆ ತಮ್ಮಣ್ಣ ಶೆಟ್ಟಿ ಮಂಗಳೂರಿನ ಪ್ರೆಸ್‌ ಕ್ಲಬ್‌ ನಲ್ಲಿ ತಿರುಗೇಟು ನೀಡಿದ್ದಲ್ಲದೆ ಪ್ರತಿಸವಾಲನ್ನೂ ಹಾಕಿದ್ದಾರೆ. ಅಲ್ಲದೆ ಕಾಂತಾರ ಚಿತ್ರದ ನಿರ್ಮಾಪಕರ ವಿರುದ್ಧವೂ ಕಿಡಿ ಕಾರಿದ್ದಾರೆ. ವಾರಾಹಿ ಪಂಜುರ್ಲಿಯಲ್ಲಿ ʻವಾರಾಹಿʼ ಎಲ್ಲಿಂದ ಬಂದಿತು ಎಂದು ಸವಾಲು ಹಾಕಿದ್ದಾರೆ. ತಾನು ಚಿನ್ನ ಕದ್ದಿದ್ದು ಸಾಬೀತಾದರೆ ಭವಿಷ್ಯದಲ್ಲಿ ಏನು ಮಾಡಲಿದ್ದೇನೆ ಎನ್ನುವ ಬಗ್ಗೆಯೂ ರವಿಪ್ರಸನ್ನಗೆ ಸವಾಲು ಹಾಕಿದ್ದು, ಅವರಿಗೂ ಒಂದು ಸವಾಲು ಒಡ್ಡಿದ್ದಾರೆ. ಹಾಗಾದರೆ ತಮ್ಮಣ್ಣ ಶೆಟ್ಟಿಯ ರಿಪ್ಲೈ ಹೇಗಿತ್ತು ಎಂದು ತಿಳಿಯಲು ಈ ಲಿಂಕ್‌ ಕ್ಲಿಕ್‌ ಮಾಡಿ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ.

error: Content is protected !!