ಮಂಗಳೂರು: ನೆಹರೂ ಮೈದಾನ ಬಳಿಯ ಆರ್‌ಟಿಒ ಕಚೇರಿಗೆ ಭಾನುವಾರ (ಡಿಸೆಂಬರ್ 14) ರಾತ್ರಿ ಬಾಂಬ್ ಬೆದರಿಕೆಯ ಇಮೇಲ್ ಬಂದಿದೆ. ಈ ಮೇಲ್‌ನಲ್ಲಿ ಐದು ವಿಭಿನ್ನ ಸ್ಥಳಗಳಲ್ಲಿ ಸ್ಫೋಟಕ ವ್ಯವಸ್ಥೆ ಇಟ್ಟಿರುವಂತೆ ಕಿಡಿಗೇಡಿಗಳು ಬೆದರಿಕೆ ನೀಡಿದ್ದಾರೆ.

ಕಚೇರಿಯ ಅಧಿಕಾರಿಗಳು ಸೋಮವಾರ ಮಧ್ಯಾಹ್ನ ಈ ಮೆಸೇಜ್‌ನ್ನು ಗಮನಿಸಿ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇದೀಗ ಮಂಗಳೂರು ಪೊಲೀಸ್ ಎಎಸ್‌ಸಿ ಮತ್ತು ಬಿಡಿಡಿಎಸ್ ತಂಡ ಕಚೇರಿ ಹಾಗೂ ಅದರ ಸುತ್ತಲೂ ತಪಾಸಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ಪರಿಶೀಲನೆಯಿಂದ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ.
ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ ಮತ್ತು ಸಾರ್ವಜನಿಕರಿಗೆ ಯಾವುದೇ ಆತಂಕ ಪಡಬಾರದೆಂದು ಸೂಚಿಸಿದ್ದಾರೆ. ತಪಾಸಣೆ ಪ್ರಕ್ರಿಯೆ ಮುಂದುವರಿಯುತ್ತಿದ್ದು, ಬೆದರಿಕೆಯ ಹಿನ್ನೆಲೆ ಹಾಗೂ ಕಿಡಿಗೇಡಿಗಳ ಗುರುತು ಹುಡುಕಲು ಕಾರ್ಯಾಚರಣೆ ಮುಂದಾಗಿದೆ.