ಮಂಗಳೂರು : ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ಅನ್ನು ಫೈನಾನ್ಷಿಯಲ್ ಟೈಮ್ಸ್‌ನ ದಿ ಬ್ಯಾಂಕರ್ ಪತ್ರಿಕೆಯ Bank of the Year Awards 2025ನಲ್ಲಿ ‘ಭಾರತದ ಅತ್ಯುತ್ತಮ ಬ್ಯಾಂಕ್’ ಎಂದು ಘೋಷಿಸಲಾಗಿದೆ.

ಈ ಪ್ರಶಸ್ತಿ ಬ್ಯಾಂಕ್ ಆಫ್ ಬರೋಡಾದ ಶ್ರೇಷ್ಠ ಹಣಕಾಸು ಸಾಧನೆ, ನವೀನತೆ, ಡಿಜಿಟಲ್ ಪರಿವರ್ತನೆ ಮತ್ತು ಉನ್ನತ ಗ್ರಾಹಕ ಸೇವೆಗೆ ನೀಡಿದ ಮಾನ್ಯತೆಯಾಗಿದೆ. ಭಾರತೀಯ ಬ್ಯಾಂಕಿಂಗ್ ವಲಯದಲ್ಲಿ ಬ್ಯಾಂಕ್ ತೋರಿಸಿರುವ ನೇತೃತ್ವ ಹಾಗೂ ಪ್ರಗತಿಪರ ಪ್ರಯತ್ನಗಳನ್ನು ಇದು ಒತ್ತಿ ಹೇಳುತ್ತದೆ.
ಪ್ರಶಸ್ತಿ ಕುರಿತು ಪ್ರತಿಕ್ರಿಯಿಸಿದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದೇಬದತ್ತ ಚಾಂದ್ “ಈ ಮಾನ್ಯತೆ, ಬ್ಯಾಂಕ್ ಆಫ್ ಬರೋಡಾದ ಸ್ಥಿರ ಬೆಳವಣಿಗೆ ಮತ್ತು ಪರಿವರ್ತನೆ ಪಯಣವನ್ನು ಮತ್ತಷ್ಟು ದೃಢಪಡಿಸುತ್ತದೆ. ನಮ್ಮ ಗ್ರಾಹಕರ ವಿಶ್ವಾಸ, ಸಿಬ್ಬಂದಿಯ ನಿಷ್ಠೆ ಮತ್ತು ಭವಿಷ್ಯ ಸಿದ್ಧ ಸಂಸ್ಥೆಯ ನಿರ್ಮಾಣದ ಬದ್ಧತೆ ಈ ಪ್ರಶಸ್ತಿಯಲ್ಲಿ ಪ್ರತಿಫಲಿಸುತ್ತದೆ,” ಎಂದು ತಿಳಿಸಿದರು.
Bank of the Year Awards ವಿಶ್ವದ ಪ್ರಮುಖ ಹಣಕಾಸು ಸಂಸ್ಥೆಗಳನ್ನು ಗುರುತಿಸುವ ವೇದಿಕೆಯಾಗಿದ್ದು, ದೇಶವಾರು ಪ್ರಶಸ್ತಿಗಳು ಹಣಕಾಸು ಸಾಧನೆ, ತಂತ್ರಾತ್ಮಕ ಕ್ರಮಗಳು, ತಾಂತ್ರಿಕ ನವೀಕರಣ, ಸ್ಥಿರತೆಯ ಉಪಕ್ರಮಗಳು ಹಾಗೂ ಗ್ರಾಹಕ ಸೇವೆ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ನೀಡಲಾಗುತ್ತವೆ.