ನವದೆಹಲಿ: ಭಾರತದ ಪರಮಾಣು ತ್ರಿವಳಿ ರಕ್ಷಣಾ ಸಾಮರ್ಥ್ಯ ಇನ್ನಷ್ಟು ಬಲಪಡಿಸಲು, ಮೂರನೇ ಸ್ಥಳೀಯ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆ ಐಎನ್ಎಸ್ ಅರಿಧಾಮನ್ ಅನ್ನು ಶೀಘ್ರದಲ್ಲೇ ನೌಕಾಪಡೆಗೆ ಸೇರಿಸಲು ಪ್ರಕ್ರಿಯೆ ವೇಗ ಪಡೆದುಕೊಂಡಿದೆ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ತ್ರಿಪಾಠಿ ತಿಳಿಸಿದ್ದಾರೆ.

ಈ ವರ್ಷದ ಆಗಸ್ಟ್‌ನಲ್ಲಿ ವಿಶಾಖಪಟ್ಟಣಂನಲ್ಲಿ ಎರಡನೇ ಎಸ್‌ಎಸ್‌ಬಿಎನ್ ಐಎನ್ಎಸ್ ಅರಿಘಾತ್ ಸೇವೆಯಲ್ಲಿದ್ದರೆ, ಈಗ ಅರಿಧಾಮನ್ ಸೇರ್ಪಡೆಯಿಂದ ಭಾರತ ಮೊದಲ ಬಾರಿಗೆ ಮೂರು ಕಾರ್ಯಾಚರಣೆಯ ಪರಮಾಣು ಕ್ಷಿಪಣಿ ಜಲಾಂತರ್ಗಾಮಿ ನೌಕೆಗಳನ್ನು ಹೊಂದುವ ದೇಶವಾಗಲಿದೆ. ಇದು ಭಾರತದ ಸಮುದ್ರ ಆಧಾರಿತ ಪರಮಾಣು ದಾಳಿ ತಡೆಗಟ್ಟುವ ಸಾಮರ್ಥ್ಯಕ್ಕೆ ಮಹತ್ವದ ಬಲ ಸಿಕ್ಕಂತಾಗಿದೆ.
ಸುಮಾರು ₹90,000 ಕೋಟಿ ವೆಚ್ಚದ ಅತ್ಯಾಧುನಿಕ ತಂತ್ರಜ್ಞಾನ ಹಡಗು (ATV) ಯೋಜನೆಯಡಿ ನಿರ್ಮಾಣಗೊಂಡಿರುವ ಅರಿಧಾಮನ್, ಮೊದಲ ಎರಡು ಎಸ್‌ಎಸ್‌ಬಿಎನ್‌ಗಳಿಗೆ ಹೋಲಿಸಿದರೆ ದೊಡ್ಡದು ಮತ್ತು ತಾಂತ್ರಿಕವಾಗಿ ಮುಂದುವರಿದ ಜಲಾಂತರ್ಗಾಮಿಯಾಗಿದೆ. ಪ್ರಸ್ತುತ ಇದು ಅಂತಿಮ ಸಮುದ್ರ ಪ್ರಯೋಗ ಹಂತದಲ್ಲಿದೆ.
ಅರಿಧಾಮನ್‌ನ ವಿಶೇಷತೆಗಳು
-ಸುಮಾರು 7,000 ಟನ್ ಸ್ಥಳಾಂತರ ಸಾಮರ್ಥ್ಯ
-ದೀರ್ಘ ಶ್ರೇಣಿಯ K-4 ಪರಮಾಣು ಕ್ಷಿಪಣಿಗಳನ್ನು ಹೆಚ್ಚುವರಿ ಸಂಖ್ಯೆಯಲ್ಲಿ ಸಾಗಿಸುವ ಸಾಮರ್ಥ್ಯ
-ಸಮುದ್ರದಲ್ಲಿ ದೀರ್ಘ ಸಮಯ ಅಡಗಿರುವ ಉಳಿಯುವ ಶಕ್ತಿ
-ಭಾರತದ “ಮೊದಲ ಬಳಕೆ ಇಲ್ಲ” ಪರಮಾಣು ನೀತಿಗೆ ಮತ್ತೊಂದು ಬಲ
-ನಾಲ್ಕನೇ ಎಸ್‌ಎಸ್‌ಬಿಎನ್ ಕೂಡ ನಿರ್ಮಾಣ ಹಂತದಲ್ಲಿದ್ದು, ಮುಂದಿನ ವರ್ಷಗಳಲ್ಲಿ ಭಾರತದ ಪರಮಾಣು ತಡೆಗಟ್ಟುವ ವಲಯವನ್ನು ಮತ್ತಷ್ಟು ಬಲಪಡಿಸಲಿದೆ.

ಭಾರತದ ಈ ಸಾಧನೆ ಗಮನಾರ್ಹವಾದರೂ, ಚೀನಾ ಹಾಗೂ ಅಮೆರಿಕಾದ ಪರಮಾಣು ನೌಕಾಪಡೆಗಳಿಗಿಂತ ಭಾರತದ SSBN ಪಡೆ ಇನ್ನೂ ಚಿಕ್ಕದಾಗಿದೆ ಯಾಕೆಂದರೆ
ಚೀನಾದಲ್ಲಿ
-ಆರು ಜಿನ್-ಕ್ಲಾಸ್ ಎಸ್‌ಎಸ್‌ಬಿಎನ್‌ಗಳು
-10,000 ಕಿಮೀ ವ್ಯಾಪ್ತಿಯ ಜೆಎಲ್-3 ಕ್ಷಿಪಣಿಗಳು
-ಆರು ಪರಮಾಣು ದಾಳಿ ಜಲಾಂತರ್ಗಾಮಿ (SSN)
ಅಮೆರಿಕಾದಲ್ಲಿ
-14 ಓಹಿಯೋ-ವರ್ಗದ ಎಸ್‌ಎಸ್‌ಬಿಎನ್‌ಗಳು
-53 ಪರಮಾಣು ದಾಳಿ ಜಲಾಂತರ್ಗಾಮಿ ನೌಕೆಗಳು
ಇದನ್ನು ಹೋಲಿಸಿದರೆ, ಅರಿಧಾಮನ್ ಸೇರ್ಪಡೆಯಿಂದ ಪರಮಾಣು ತಡೆಗಟ್ಟುವಿಕೆ ಸಾಮರ್ಥ್ಯ ಹೊಂದಿರುವ ದೇಶಗಳ ಪಟ್ಟಿಗೆ ಸೇರಲಿದೆ.