ಮಂಗಳೂರಿನಲ್ಲಿ ಕೊಂಕಣಿ ಲೇಖಕ ವಲ್ಲಿ ವಗ್ಗ ಅವರೊಂದಿಗೆ ಸಾಹಿತ್ಯ ಮಂಥನ

ಮಂಗಳೂರು: ಕೊಂಕಣಿ ಲೇಖಕ್ ಸಂಘ–ಕರ್ನಾಟಕದ ಆಶ್ರಯದಲ್ಲಿ ಆಯೋಜಿಸಲಾದ ಖ್ಯಾತ ಕೊಂಕಣಿ ಲೇಖಕ ಶ್ರೀ ವಲ್ಲಿ ವಗ್ಗ ( ವಲೇರಿಯನ್ ಡಿಸೋಜ) ಅವರೊಂದಿಗಿನ ಸಾಹಿತ್ಯ ಮಂಥನ ಕಾರ್ಯಕ್ರಮವು ನವೆಂಬರ್ 30, ಭಾನುವಾರ ಮಂಗಳೂರಿನ ಸಂದೇಶ ಸಭಾಭವನದಲ್ಲಿ ನೆರವೇರಿತು.

ಕಾರ್ಯಕ್ರಮದ ಆರಂಭದಲ್ಲಿ ಶ್ರೀ ವಲ್ಲಿ ವಗ್ಗ ಅವರಿಗೆ ಹೂಗುಚ್ಛ ನೀಡಿ ಡಾ. ಎಡ್ವರ್ಡ್ ನಜ್ರೆತ್ ಸ್ವಾಗತ ಕೋರಿದರು. ನಂತರ ಮಾತನಾಡಿದ ವಗ್ಗ ಅವರು ತಮ್ಮ ಬಾಲ್ಯ, ಶಿಕ್ಷಣ, ವೃತ್ತಿ ಜೀವನ, ಕೊಂಕಣಿ ಭಾಷೆಯಲ್ಲಿ ಬರವಣಿಗೆಯ ಆಸಕ್ತಿ ಹೇಗೆ ಮೂಡಿತು, ಕಥೆಗಳ ಪ್ರಕಟಣಾ ಪ್ರಯಾಣ, ಓದುಗರಿಂದ ಪಡೆದ ಪ್ರೋತ್ಸಾಹ ಹಾಗೂ ಅನುವಾದ ಕ್ಷೇತ್ರದಲ್ಲಿನ ತಮ್ಮ ಅನುಭವಗಳನ್ನು ವಿವರವಾಗಿ ಹಂಚಿಕೊಂಡರು.

ನಂತರ ನಡೆದ ಸಂವಾದ ಕಾರ್ಯಕ್ರಮವನ್ನು ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ಹೆನ್ರಿ ಮಸ್ಕರೇನಸ್ ಯಶಸ್ವಿಯಾಗಿ ನಡೆಸಿಕೊಟ್ಟರು. ಸಂವಾದದಲ್ಲಿ ಲೇಖಕರಾದ ಎಚ್. ಆರ್. ಅಳ್ವ, ಕಾನ್ಸೆಪ್ಟ್ ಆಳ್ವ, ರಿಚ್ಚರ್ಡ್ ಪಿರೇರಾ, ಜೆಮ್ಮ ಪಡೀಲ್, ಡೊಲ್ಫಿ ಕಾಸ್ಸಿಯಾ, ‘ದಿರ್ವೆಂ’ ಪತ್ರಿಕೆಯ ಸಂಪಾದಕ ಜೋನ್ ಮೊನಿಸ್, ಮ್ಯಾಕ್ಸಿಂ ರೊಡ್ರಿಗಸ್ ಹಾಗೂ ಅನೇಕರು ಭಾಗವಹಿಸಿ ಕಾರ್ಯಕ್ರಮದ ಮಾನ್ಯತೆಯನ್ನು ಹೆಚ್ಚಿಸಿದರು.

ಸಂಘದ ಸಂಚಾಲಕ ರಿಚಾರ್ಡ್ ಮೊರಾಸ್, ಸಮಿತಿ ಸದಸ್ಯರಾದ ಡೊಲ್ಫಿ ಕಾಸ್ಸಿಯಾ, ಡಾ. ಎಡ್ವರ್ಡ್ ನಜ್ರೆತ್ ಮತ್ತು ಹೆನ್ರಿ ಮಸ್ಕರೇನಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಲೇಖಕಿ ಲವಿ ಗಂಜಿಮಠ ಶಿಷ್ಟವಾಗಿ ನಿರ್ವಹಿಸಿದರು.

ಸುಮಾರು 55ಕ್ಕೂ ಹೆಚ್ಚು ಲೇಖಕಮಿತ್ರರು ಮತ್ತು ಕೊಂಕಣಿ ಭಾಷಾ ಪ್ರೇಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂಥನಕ್ಕೆ ಸಾರ್ಥಕತೆ ನೀಡಿದರು.

error: Content is protected !!