
ಸುರತ್ಕಲ್: ಮೂರುನಾಡು ಮಾಗಣೆ ಬ್ರಹ್ಮಸ್ಥಾನ ಕುತ್ತೆತ್ತೂರು-ಸೂರಿಂಜೆ ಇದರ ಪುನರ್‌ನಿರ್ಮಾಣದ ವಿಜ್ಞಾಪನಾ ಪತ್ರವನ್ನು ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು ಸಾವಿರದ ಎಂಟುನೂರು ವರ್ಷಗಳ ಪುರಾತನ ಇತಿಹಾಸ ಇರುವ ಐತಿಹಾಸಿಕ ಬ್ರಹ್ಮಸ್ಥಾನವು ಮೂರುನಾಡು ಮಾಗಣೆಯ ಪ್ರತಿಯೊಬ್ಬ ಭಕ್ತಾದಿಗಳಿಗೂ ಸಂಬಂಧಿಸಿದ್ದು. ಅಜೀರ್ಣಾವಾಸ್ಥೆಯಲ್ಲಿರುವ ಬ್ರಹ್ಮ ಸನ್ನಿಧಿಯ ಜೀರ್ಣೋದ್ದಾರ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಆದಷ್ಟು ಶೀಘ್ರ ಬ್ರಹ್ಮಸ್ಥಾನ ನಿರ್ಮಾಣಗೊಂಡು ಪ್ರತಿಯೊಬ್ಬರಿಗೂ ದೇವರ ಕೃಪೆ ಸಿಗುವಂತಾಗಲಿ ಎಂದು ಆಶಿಸಿದರು.
ಬ್ರಹ್ಮಸ್ಥಾನ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಸಂತೋಷ್ ಶೆಟ್ಟಿ ಬ್ರಹ್ಮಸ್ಥಾನ ಮಾತನಾಡಿ ಬ್ರಹ್ಮಸ್ಥಾನ ಜೀರ್ಣೋದ್ದಾರಕ್ಕೆ ಸರ್ವರು ಸಹಕಾರ ನೀಡಿ ಆದಷ್ಟು ಶೀಘ್ರ ಬ್ರಹ್ಮಸ್ಥಾನ ನಿರ್ಮಾಣ ಆಗುವಂತಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಅಶೋಕ ಪೈವ ಹೆಗ್ಗಡೆ, ಹಯವದನ ಭಟ್, ನಾರಾಯಣ ಶೆಟ್ಟಿ ಬ್ರಹ್ಮಸ್ಥಾನ ಮೊದಲಾದವರು ಉಪಸ್ಥಿತರಿದ್ದರು. ಜಯಪ್ರಕಾಶ್ ಸೂರಿಂಜೆ ವಂದಿಸಿದರು.