ನ.1: ” ರಜತ ರಂಗು” ಸಂಭ್ರಮದಲ್ಲಿ ಕನ್ನಡ ಕಣ್ಮನಗಳ ಕಲರವ

ಮಂಗಳೂರು: ಬೆಳ್ಳಿ ಹಬ್ಬ ” ರಜತ ರಂಗು” ಸಂಭ್ರಮದಲ್ಲಿರುವ ಕಲ್ಲಚ್ಚು ಪ್ರಕಾಶನ ಮಂಗಳೂರು ಇದರ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ” ಕನ್ನಡ ಕಣ್ಮನಗಳ ಕಲರವ” ಸಮಾರಂಭ ನವಂಬರ 1 ರಂದು ಶನಿವಾರ ಸಂಜೆ 4.00 ಗಂಟೆಗೆ ಮಂಗಳೂರಿನ ಹೋಟೆಲ್ ವುಡ್ ಲ್ಯಾಂಡ್ಸ್ ಸಭಾಂಗಣದಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ಕಲ್ಲಚ್ಚು ರಾಜ್ಯೋತ್ಸವ ಪುರಸ್ಕಾರವನ್ನು ಪ್ರದೀಪ ನಾಯಕ್ ಮದ್ದಡ್ಕರವರಿಗೆ ಪ್ರದಾನ ಮಾಡಲಾಗುವುದು. ಹಿರಿಯ ಕವಿ ರಾಮಚಂದ್ರ ಬೈಕಂಪಾಡಿ ಉದ್ಘಾಟಿಸುವರು. ಉಪನ್ಯಾಸಕ ಕರುಣಾಕರ ಬಳ್ಕೂರು ರಾಜ್ಯೋತ್ಸವ ಸಂದೇಶ ನೀಡಲಿದ್ದು ಸಾಹಿತಿಗಳಾದ ಶಮೀಮ ಕುತ್ತಾರ್ ಮತ್ತು ಇಜಾಕ್ ಡಿಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

✅Business Offer✅: TUZHAR ಸುಗಂಧ ದ್ರವ್ಯದೊಂದಿಗೆ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. 💰ಕಡಿಮೆ ಹೂಡಿಕೆ, 📦ಕಚ್ಛಾವಸ್ತು ಪೂರೈಕೆ, 📈 ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಜೊತೆ ನಿಮ್ಮ ಸ್ವಂತ ವ್ಯವಹಾರ ಪ್ರಾರಂಭಿಸಿ. 📲 +918088947906 🌐 www.tuzharperfumes.com

ಕರಾವಳಿಯ ಹಿರಿ – ಕಿರಿ ಸಾಹಿತ್ಯ ಮತ್ತು ಪೂರಕ ಕ್ಷೇತ್ರದ ಅನೇಕ ಸಾಧಕರು ಮಾತು ಮಂಥನ, ಕಥೆ ಕವಿತೆಯಲ್ಲಿ ಪಾಲ್ಗೊಳ್ಳಲಿದ್ದು ಆಸಕ್ತರಿಗೆ ಮುಕ್ತ ಪ್ರವೇಶ ಇದೆ ಎಂದು ಸಾಹಿತಿ ಪ್ರಕಾಶಕ ಮಹೇಶ ಆರ್ ನಾಯಕ್ ತಿಳಿಸಿದ್ದಾರೆ.

error: Content is protected !!