ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಗೆ ಉತ್ಸಾಹದಿಂದ ನಾಮಪತ್ರ ಸಲ್ಲಿಸಿದ “ಯುವ“ಪತ್ರಕರ್ತರು!

ಮಂಗಳೂರು: ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ(ರಿ)ದ ಚುನಾವಣೆಯು ನವೆಂಬರ್‌ 9ರಂದು ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರು ವಿವಿಧ ಸ್ಥಾನಗಳಿಗಾಗಿ ನಾಮಪತ್ರ ಸಲ್ಲಿಸಿರುವ ವಿವರಗಳನ್ನು ಚುನಾವಣಾಧಿಕಾರಿಗಳ ಕಚೇರಿ ಪ್ರಕಟಿಸಿದೆ. ಈ ಬಾರಿ ಯುವಪತ್ರಕರ್ತರೇ ಹೆಚ್ಚಾಗಿ ನಾಮಪತ್ರ ಸಲ್ಲಿಸಿರುವುದು ಕುತೂಹಲಕ್ಕೆ ಕಾರಣವಾಗಿದ್ದು, ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಈ ಪೈಕಿ ಎರಡು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂತೆಗೆದ ಬಳಿಕ ಸ್ಪಷ್ಟ ಚಿತ್ರಣ ಹೊರಬೀಳಲಿದೆ.
ಪ್ರಧಾನ ಕಾರ್ಯದರ್ಶಿಯ ಒಂದು ಸ್ಥಾನಕ್ಕೆ ರಾಜೇಶ್ ಕೆ. ಪೂಜಾರಿ ಹಾಗೂ ಕೋಶಾಧಿಕಾರಿಯ ಒಂದು ಸ್ಥಾನಕ್ಕೆ ವಿಜಯ ಪಡು ಮಾತ್ರ ನಾಮಪತ್ರ ಸಲ್ಲಿಸಿರುವುದರಿಂದ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ.
ರಾಜ್ಯ ಕಾರಕಾರಿಣಿ ಸಮಿತಿ ಸದಸ್ಯ ಸ್ಥಾನಕ್ಕೆ ಮಾಜಿ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ ಹಾಗೂ ಮುಹಮ್ಮದ್ ಅನ್ಸಾ‌ರ್ ಇನೋಳಿ ನಾಮಪತ್ರ ಸಲ್ಲಿಸಿದ್ದು ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಸಾಮಾನ್ಯವಾಗಿ ಈ ಸ್ಥಾನ ಅವಿರೋಧವಾಗಿ ಆಯ್ಕೆಯಾಗುತ್ತಿದ್ದರೂ ಈ ಬಾರಿ ಇಬ್ಬರು ಸ್ಪರ್ಧಿಸುವ ಮೂಲಕ ಹೊಸ ಕುತೂಹಲ ಮೂಡಿಸಿದ್ದಾರೆ.
ಇನ್ನುಳಿದಂತೆ ಅಧ್ಯಕ್ಷ ಸ್ಥಾನಕ್ಕೆ ಪುಷ್ಪರಾಜ್ ಬಿ.ಎನ್. ಹಾಗೂ ಶ್ರವಣ್ ಕುಮಾ‌ರ್ ಕೆ. ನೇರ ಅಖಾಡಕ್ಕಿಳಿದಿದ್ದು, ಇವರಿಬ್ಬರಲ್ಲಿ ಒಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ.
ಮೂರು ಹುದ್ದೆಗಳಿರುವ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಆಯ್ಕೆ ಬಯಸಿ ರಾಜೇಶ್ ಶೆಟ್ಟಿ, ವಿಲ್ಫ್ರೆಡ್ ಡಿಸೋಜಾ, ಮುಹಮ್ಮದ್ ಆರೀಫ್‌, ಐ.ಬಿ. ಸಂದೀಪ್ ಕುಮಾರ್, ಗಂಗಾಧರ ಕಲ್ಲಪಳ್ಳಿ ಕಣದಲ್ಲಿದ್ದಾರೆ. ಇದರಲ್ಲಿ ಮತಗಳು ಹಂಚಿಹೋಗುವುದರಿಂದ ಇಲ್ಲಿಯೂ ಕಣ ರಂಗಾಗಿಸಿದೆ.
ಮೂರು ಹುದ್ದೆಗಳಿರುವ ಕಾರ್ಯದರ್ಶಿ ಸ್ಥಾನಕ್ಕೆ ಎ.ಸಿದ್ದಿಕ್ ನೀರಾಜೆ, ರಾಜೇಶ್ ಕುಮಾರ್ ಡಿ., ಸುರೇಶ್ ಡಿ. ಪಳ್ಳಿ ಹಾಗೂ ಸತೀಶ್ ಇರಾ ಸ್ಪರ್ಧಿಸಿದ್ದಾರೆ. ಇಲ್ಲಿಯೂ ನಾಲ್ಕು ಮಂದಿ ಸ್ಪರ್ಧಿಸಿರುವುದರಿಂದ ಯಾರು ಆಯ್ಕೆಯಾಗುತ್ತಾರೆ ಎನ್ನುವುದು ಭಾರೀ ಕುತೂಹಲ ಮೂಡಿಸೊದೆ.
ಹದಿನೈದು ಹುದ್ದೆಗಳಿರುವ ಜಿಲ್ಲಾ ಕಾರಕಾರಿಣಿ ಸಮಿತಿ ಸದಸ್ಯರಾಗಿ ಆಯ್ಕೆ ಬಯಸಿ ಬರೋಬ್ಬರಿ 21 ಮಂದಿ ಸ್ಪರ್ಧಿಸಿದ್ದಾರೆ. ಸಂದೇಶ್ ಜಾರ, ಪ್ರಕಾಶ್ ಸುವರ್ಣ, ಸಂದೀಪ್ ಕುಮಾರ್ ಎಂ., ಲಕ್ಷ್ಮೀನಾರಾಯಣ ರಾವ್, ಹರೀಶ್ ಮೋಟುಕಾನ, ಶಶಿಧರ ಬಂಗೇರ, ದಿವಾಕರ ಪದ್ಮುಂಜ, ಕಿರಣ್ ಯು. ಸಿರ್ಸೀಕರ್, ಅಭಿಷೇಕ್ ಎಚ್‌.ಎಸ್., ಜಯಶ್ರೀ, ಮಂಜುನಾಥ್ ಕೆ.ಪಿ., ಭುವನೇಶ್ವರ ಜಿ., ಸಂದೀಪ್ ವಾಗ್ಲೆ, ಪ್ರವೀಣ್ ರಾಜ್ ಕೆ.ಎಸ್‌., ಹರೀಶ್ ಕೆ. ಆದೂರ್, ಲೋಕೇಶ್ ಸುರತ್ಕಲ್, ಗಿರೀಶ್ ಅಡ್ಡಂಗಾಯ, ಶೇಕ್ ಜೈನುದ್ದೀನ್, ಸಂದೀಪ್ ಸಾಲ್ಯಾನ್, ಅಶೋಕ್ ಶೆಟ್ಟಿ ಬಿ.ಎನ್. ಹಾಗೂ ಆರೀಫ್ ಕಲ್ಕಟ್ಟ ಕಣದಲ್ಲಿದ್ದಾರೆ.
ವಾರ್ತಾಧಿಕಾರಿ ಖಾದರ್‌ ಶಾ ಚುನಾವಣಾಧಿಕಾರಿಯಾಗಿದ್ದು, ಚುನಾವಣೆಗೆ ಮಾರ್ಗಸೂಚಿ ಪ್ರಕಟಗೊಳ್ಳಲಿದೆ. ಈಗಾಗಲೇ ಚುನಾವಣಾ ಅಖಾಡಕ್ಕಿಳಿದಿರುವ ಸ್ಪರ್ಧಾಳುಗಳು ಪ್ರಚಾರದಲ್ಲಿ ತೊಡಗಿದ್ದು, ಯಾವುದೇ ರಾಜಕೀಯ ಚುನಾವಣೆಗಿಂತಲೂ ಕಡಿಮೆ ಇಲ್ಲದಂತೆ ಈ ಬಾರಿ ಭಾರೀ ಕುತೂಹಲ ಮೂಡಿಸಿದೆ.

error: Content is protected !!