ದೀಪಾವಳಿ ಸಂಭ್ರಮ 2025: ಫುಡ್ ಫೆಸ್ಟ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ

ಸುರತ್ಕಲ್: ಶಾಸಕರಾದ ಡಾಕ್ಟರ್ ಭರತ್ ಶೆಟ್ಟಿ ಸಹಕಾರದಲ್ಲಿ ಕರಾವಳಿ ಸೇವಾ ಪ್ರತಿಷ್ಠಾನ ವತಿಯಿಂದ ಸುರತ್ಕಲ್ ನಲ್ಲಿ ಎರಡು ದಿನಗಳ ಕಾಲ ನಡೆದ ದೀಪಾವಳಿ ಸಂಭ್ರಮ 2025, ಫುಡ್ ಫೆಸ್ಟ್ ಎಲ್ಲರ ಕಣ್ಮನ ಸೆಳೆಯಿತು.

ಶಾಸಕ ಭರತ್ ಶೆಟ್ಟಿ, ಸ್ಥಳೀಯರನ್ನ ಜತೆಗೂಡಿಸಿಕೊಂಡು ದೀಪಾವಳಿ ಸಂಭ್ರಮವನ್ನು ಕುಟುಂಬ ಸಮೇತವಾಗಿ ಆಚರಿಸುವ ನಿಟ್ಟಿನಲ್ಲಿ ಕಳೆದ ಐದು ವರ್ಷಗಳಿಂದ ವೈವಿಧ್ಯಮಯವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಸಾಂಪ್ರದಾಯಿಕವಾಗಿ ಬಜನಾ ಸ್ಪರ್ಧೆ, ಗೂಡು ದೀಪ ಸ್ಪರ್ಧೆ, ಗೋಪೂಜೆ, ಆಹಾರ ಮೇಳ, ದೀಪಾವಳಿ ನೈಟ್ಸ್ ಮತ್ತಿತರ ಕಾರ್ಯಕ್ರಮಗಳು ಕರಾವಳಿ ಸೇವಾ ಪ್ರತಿಷ್ಠಾನದ ಯುವಕರ ಪರಿಶ್ರಮದಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ ಎಂದು ನುಡಿದರು.

ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಲಂಚುಲಾಲ್, ಭರತ್ ರಾಜ್ ಕೃಷ್ಣಾಪುರ, ತಿಲಕ್ ರಾಜ್ ಕೃಷ್ಣಾಪುರ, ಮಹಾಬಲ ಪೂಜಾರಿ ಕಡಂಬೋಡಿ, ಕರಾವಳಿ ಸೇವಾ ಪ್ರತಿಷ್ಠಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.

       

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಖ್ಯಾತ ಗಾಯಕರುಗಳಿಂದ ರಸ ಸಂಜೆ, ವೈವಿಧ್ಯಮಯ ಡ್ಯಾನ್ಸ್ ವೀಕ್ಷಕರನ್ನು ಮನರಂಜಿಸಿತು.

error: Content is protected !!