ಸ್ನೇಹಿತೆಯ ಖಾಸಗಿ ಫೋಟೋ ಕದ್ದು ಬ್ಲ್ಯಾಕ್‌ಮೇಲ್:‌ ಕಿರುತೆರೆ ನಟಿ ಮೇಲೆ ಕೇಸ್

ಬೆಂಗಳೂರು : ಸ್ನೇಹಿತೆಯೊಬ್ಬಳ ಖಾಸಗಿ ಫೋಟೋ ಕದ್ದು, ಅದನ್ನು ಹಂಚುವುದಾಗಿ ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪದ ಮೇಲೆ ಕಿರುತೆರೆ ನಟಿಯೊಬ್ಬಳ ವಿರುದ್ಧ ದೂರು ದಾಖಲಾಗಿದೆ. ಹಲವು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿರುವ ಆಶಾ ಜೋಯಿಸ್‌ ಪ್ರಕರಣದ ಆರೋಪಿಯಾಗಿದ್ದು, ಈಕೆಯ ವಿರುದ್ಧ ಪಾರ್ವತಿ ಎಂಬುವವರು ದೂರು ನೀಡಿದ್ದಾರೆ.

ಖಾಸಗಿ ವಿಡಿಯೊ ಇಟ್ಟುಕೊಂಡು ಬ್ಲ್ಯಾಕ್​ಮೇಲ್; ನಟಿ ವಿರುದ್ಧ ಕೇಸ್‌

ಶೃಂಗೇರಿ ಶಾರದಾ ಪೀಠದ ಜೋಯಿಸರ ಕುಟುಂಬದವಳು ತಾನು ಎಂದು ಹೇಳಿಕೊಳ್ಳುತ್ತಿದ್ದ ಆಶಾ ಜೋಯಿಸ್‌, ಮಿಸ್‌ ಇಂಡಿಯಾ ಪ್ಲಾನೇಟ್‌ 2016 ರ ಸ್ಪರ್ಧಿಯಾಗಿದ್ದಳು. ಹಲವು ಕನ್ನಡ ಧಾರವಾಹಿಯಲ್ಲಿ ಪೋಷಕಪಾತ್ರದಲ್ಲಿ ನಟಿಸಿದ್ದಳು.

ಇದೇ ವೇಳೆ ಪಾರ್ವತಿ ಎಂಬ 61 ವರ್ಷದ ಹಿರಿಯ ಮಹಿಳೆಯೊಬ್ಬರೊಡನೆ ಆಶಾ ಜೋಯಿಸ್‌ ಸ್ನೇಹ ಬೆಳೆಸದಿದ್ದಳು. ತನ್ನ ಕಿರುತೆರೆ ನಟನೆಯ ಪ್ರಭಾವ ಹಾಗೂ ಶೃಂಗೇರಿ ಮೂಲದ ಬಗ್ಗೆ ಹೇಳಿಕೊಂಡು ಆಪ್ತಳಾಗಿದ್ದಳು. ಪಾರ್ವತಿಯವರು ತಾವು ಕೆಲಸ ಮಾಡುತ್ತಿದ್ದ ಶೆಲ್ಟರ್‌ ಮಾಲಿಕರೊಡನೆ ಮದುವೆಯಾಗಿದ್ದರು. ಈ ಸಂಗತಿ ತಿಳಿದಿದ್ದ ಆಶಾ ಇಬ್ಬರನ್ನೂ ಸುಲಿಗೆ ಮಾಡಲು ಸಂಚು ರೂಪಸಿದ್ದಳು. ಪಾರ್ವತಿಯವರ ಮೊಬೈಲ್‌ ನ್ನು ಲಪಟಾಯಿಸಿ ಅದರಲ್ಲಿದ್ದ ಖಾಸಗಿ ಫೋಟೋಗಳನ್ನು ಕದ್ದು , ಪಾರ್ವತಿಗೆ ಮಾಲಿಕರಿಂದ 2 ಕೋಟಿ ರೂ. ಹಣ ಕೊಡಿಸಲು ದುಂಬಾಲು ಬಿದ್ದಿದ್ದಳು. ಒಂದು ವೇಳೆ ಹಣ ನೀಡದಿದ್ದರೆ ಈ ಫೋಟೋಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಳು ಎಂದು ಆರೋಪಿಸಲಾಗಿದೆ.

ಪಾರ್ವತಿ ಹಾಗೂ ಅವರ ಪತಿಯೊಡನೆ ನಡೆದಿದ್ದ ವಾಯ್ಸ್‌ ಚಾಟ್‌, ಪ್ರೈವೇಟ್‌ ವಿಡಿಯೋಗಳು ಹಾಗೂ ಖಾಸಗಿ ಫೋಟೋಗಳನ್ನು ತನ್ನ ಬಳಿ ಇರಿಸಿಕೊಂಡು ಬ್ಲ್ಯಾಕ್‌ಮೇಲ್‌ ಶುರು ಮಾಡಿದ್ದ ಆಶಾ ವಿರುದ್ಧ ಈಗ ತಿಲಕ್‌ ನಗರ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ.

ತನ್ನ ಘನತೆಗೆ ಕುಂದುಂಟು ಮಾಡುವ ಉದ್ದೇಶದಿಂದ ತನ್ನ ಖಾಸಗಿ ಮಾಹಿತಿಯನ್ನು ಕದ್ದು ಬ್ಲಾಕ್‌ ಮಾಡುತ್ತಿದ್ದಾಳೆಂದು ಆರೋಪಿಸಿ ಆಶಾ ವಿರುದ್ದ ಪಾರ್ವತಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ.

✅Business Offer: TUZHAR ಮೂಲಕ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. ಕಡಿಮೆ ಹೂಡಿಕೆ, ಕಚ್ಛಾವಸ್ತು ಪೂರೈಕೆ, ಮಾರುಕಟ್ಟೆ ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಸುಗಂಧ ದ್ರವ್ಯ ವ್ಯಾಪಾರಿಗಳೊಂದಿಗೆ ಸುಗಂಧ ದ್ರವ್ಯ ವ್ಯವಹಾರ ಪ್ರಾರಂಭಿಸಿ ಸ್ವಾವಲಂಬಿಗಳಾಗಿ 📲 +918088947906

error: Content is protected !!