ಕಾರಿಗೆ ಟ್ರಕ್ ಢಿಕ್ಕಿ: ಸಚಿವೆ ಅಪಾಯದಿಂದ ಪಾರು

ಫಿರೋಜಾಬಾದ್: ಟ್ರಕ್ ಚಾಲಕನೊಬ್ಬ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವೆ ಬೇಬಿ ರಾಣಿ ಮೌರ್ಯ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದ ಘಟನೆ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಶುಕ್ರವಾರ ರಾತ್ರಿ (ಅ 24) ನಡೆದಿದೆ. ಅದೃಷ್ಟವಶಾತ್ ಸಚಿವೆ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.

ರಾಜ್ಯ ಮಹಿಳಾ ಕಲ್ಯಾಣ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹತ್ರಾಸ್‌ನಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಲಕ್ನೋಗೆ ಹಿಂತಿರುಗುತ್ತಿದ್ದಾಗ ಫಿರೋಜಾಬಾದ್‌ನ ಬಳಿ ರಾತ್ರಿ 8:40 ರ ಸುಮಾರಿಗೆ ಸಚಿವೆಯ ಕಾರಿನ ಮುಂದೆ ಪ್ರಯಾಣಿಸುತ್ತಿದ್ದ ಟ್ರಕ್ ಹಠಾತ್ ಟೈರ್ ಸ್ಫೋಟಗೊಂಡು ಅನಿಯಂತ್ರಿತವಾಗಿ ಸ್ಕಿಡ್ ಆಗಿ ಕಾರಿಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ ಎಂದು ಸಿರ್ಸಗಂಜ್‌ನ ಎಸ್‌ಡಿಎಂ ಅನಿವೇಶ್ ಕುಮಾರ್ ತಿಳಿಸಿದ್ದಾರೆ.

ಸಚಿವೆ ಮೌರ್ಯ ತಮ್ಮ ಎಕ್ಸ್ ಖಾತೆಯಲ್ಲಿ “ಪರಮಪಿತ ಪರಮೇಶ್ವರ ಮತ್ತು ನಿಮ್ಮೆಲ್ಲರ ಅನಂತ ಕೃಪೆಯಿಂದ ನಾನು ಸುರಕ್ಷಿತವಾಗಿದ್ದೇನೆ, ನನ್ನ ಪ್ರೀತಿಯ ಹಿತೈಷಿಗಳೆ” ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.

error: Content is protected !!