ಮಂಗಳೂರಿನಲ್ಲಿ ‘ಖಾದಿ ಉತ್ಸವʼ: ಉದ್ಯಮ ಆರಂಭಿಸುವವರಿಗೆ ವಿಶೇಷ ಆಫರ್‌!

ಮಂಗಳೂರು: ಖಾದಿ ಗ್ರಾಮೋದ್ಯೋಗ ಇನ್ನಷ್ಟು ವಿಸ್ತರಿಸಬೇಕು ಎಂದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಪ್ರಯತ್ನ ಮಾಡುತ್ತಿದೆ. ಅವರ ಪ್ರಯತ್ನಕ್ಕೆ ಪೂರಕವಾಗಿ ಮಂಗಳೂರಿನಲ್ಲಿ ಖಾದಿ ಉದ್ಯಮ ಬಲಿಷ್ಠವಾಗಲು ಸಂಘ ಸಂಸ್ಥೆಗಳ ಜೊತೆ ಮಾತನಾಡಿ ಸಹಕಾರ ಕೇಳಿ ನಿಮ್ಮೊಂದಿಗೆ ಸಹಕರಿಸುವ ಕಾರ್ಯವನ್ನು ನೂರಕ್ಕೆ ನೂರು ಮಾಡುತ್ತೇನೆ. ಧರ್ಮಸ್ಥಳ ಸ್ವಸಹಾಯ ಸಂಘ, ನವೋದಯ ತಂಡದ ಜೊತೆ ಮಾತುವಕತೆ ನಡೆಸಿ, ಜಿಲ್ಲಾಡಳಿತದ ಸಹಯೋಗದೊಂದಿಗೆ ಬ್ಯಾಂಕ್‌ಗಳ ಸಹಕಾರದೊಂದಿಗೆ ಖಾದಿ ಉದ್ಯಮವನ್ನು ನಗರದಲ್ಲಿ ಬಲಿಷ್ಠಗೊಳಿಸುವ ಯೋಜನೆ ರೂಪಿಸಲಾಗುವುದು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಹೇಳಿದರು.

ರಾಜ್ಯ ಸರ್ಕಾರ, ಜಿಲ್ಲಾ ಪಂಚಾಯತ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ‘ಖಾದಿ ಉತ್ಸವ – 2025’ ಅಕ್ಟೋಬರ್‌ 15ರಿಂದ ಅಕ್ಟೋಬರ್‌ 24ರವರೆಗೆ ಮಂಗಳೂರಿನ ಲಾಲ್ಬಾಗ್‌ನ ದಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಆರಂಭಗೊಂಡ ಖಾದಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ದೀಪ ಬೆಳಗಿಸಿ ಉದ್ಘಾಟಿ ಮಾತನಾಡಿದರು.

ಗ್ರಾಮೋದ್ಯೋಗ ವಿಸ್ತರಣೆಯಾಗಬೇಕು, ಇದರೊಂದಿಗೆ ಸಂಘ ಸಂಸ್ಥೆಗಳೂ ಕೈ ಜೋಡಿಸಬೇಕು. ಜನರು ಖಾದಿ ವಸ್ತುಗಳನ್ನು ಉಪಯೋಗಿಸಿ ಭಾರತದ ಪ್ರಾಚೀನ ಕರಕುಶಲ ಉದ್ಯಮಕ್ಕೆ ಸಹಕಾರ ನೀಡಬೇಕು ಎಂದು ಕಾಮತ್‌ ವಿನಂತಿಸಿದರು.. ವೋಕಲ್ ಫಾರ್ ಲೋಕಲ್, ಮೇಕನ್ ಇನ್ ಇಂಡಿಯಾ ಮೂಲಕ ದೇಸೀ ಉದ್ಯಮಗಳ ಬೆಳವಣಿಗೆಗೆ ಮೋದಿ ಸರ್ಕಾರ ಸಹಕಾರ ನೀಡುತ್ತಿದೆ. ನಮ್ಮ ಉತ್ಪನ್ನಗಳು ವಿಸ್ತರಣೆಯಾಗಲು ಅವರಿಗೆ ಮಾರುಕಟ್ಟೆ ಸಹಕಾರ, ಬ್ಯಾಂಕ್‌ಗಳು ಸಹಕಾರ ನೀಡಬೇಕು ಎಂದು ಅವರು ವಿನಂತಿಸಿದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಡಿಬಿ ನಟೇಶ್, ಖಾದಿ ಸ್ವಾಭಿಮಾನ ಮತ್ತು ಸ್ವಾಲಂಬನೆಯ ಸಂಕೇತವಾಗಿದೆ. ಬ್ರಿಟಿಷರ ಕಾಲದಲ್ಲಿ ಸಂಪೂರ್ಣವಾಗಿ ನೆಲಕಚ್ಚಿದ್ದ ಉದ್ಯಮವನ್ನು ಮಹತ್ಮಾ ಗಾಂಧೀಜಿ ಅವರು ಗುರುತಿಸಿ ಅನೇಕ ಜನರಿಗೆ ಸ್ವಾವಲಂಬನೆಯ ಬದುಕು ಕಟ್ಟಿಸಿಕೊಟ್ಟರು. ಈ ಉದ್ಯಮವನ್ನು ಪ್ರಾರಂಭಿಸುವ ಆಸಕ್ತರಿಗೆ ಖಾದಿ ಮಂಡಳಿ ಸಂಪೂರ್ಣ ಸಹಕಾರ ನೀಡಲಿದೆ. ಮಂಗಳೂರಿನಲ್ಲಿ ಯಾರಾದರೂ ಈ ಉದ್ಯಮ ಮಾಡಲಿಚ್ಛಿಸಿದರೆ ಪಿಎಂಇಜಿ(ಮುದ್ರಾ) ಯೋಜನೆಯ ಮೂಲಕ ಲೋನ್‌ ಕೊಡಿಸುವ ವ್ಯವಸ್ಥೆ ಮಂಡಳಿ ಮಾಡಲಿದೆ. ಆಸಕ್ತರು ವೆಬ್‌ಸೈಟ್‌ ಮೂಲಕ ಅರ್ಜಿ ಹಾಕಿದರೆ ಏಜೆಂಟರು ಈ ಬಗ್ಗೆ ನಮಗೆ ಮಾಹಿತಿ ನೀಡುತ್ತಾರೆ. ಇದನ್ನು ಗಮನಿಸಿ 20 ಲಕ್ಷದಿಂದ 50 ಲಕ್ಷದವರೆಗೆ ಸಬ್ಸಿಡಿಯೊಂದಿಗೆ ಲೋನ್‌ ಕೊಡಿಸಲಾಗುವುದು. ಜೊತೆ ಅವರಿಗೆ ಸೂಕ್ತ ತರಬೇತಿಯನ್ನೂ ನೀಡಲಾಗುವುದು. ಅಲ್ಲದೆ ಖಾದಿಗೆ ಬೇಕಾದ ಉಲ್ಲನ್‌ ಹಾಗೂ ಸಿಲ್ಕನ್ನು ಡಿಸ್ಕೌಂಟ್‌ ದರದಲ್ಲಿ ನೀಡಲಾಗುವುದು ಎಂದು ಹೇಳಿದರು.

ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ರಿಬ್ಬನ್‌ ಕತ್ತರಿಸುವ ಮೂಲಕ ಮಾರಾಟ ಹಾಗೂ ಪ್ರದರ್ಶನಕ್ಕೆ ಚಾಲನೆ ನೀಡಿದರು. ಗಣಪತಿ ದೇವರ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಖಾದಿ ಗ್ರಾಮೋದ್ಯೋಗ ಅಧಿಕಾರಿ ಆರ್ ಯೋಗೇಶ್, ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಂಜಿತ್ ಮತ್ತಿತರರು ಉಪಸ್ಥಿತರಿದ್ದರು.

ಮಂಗಳೂರಿನ ಲಾಲ್ಬಾಗ್‌ನ ದಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ. ಸ್ಥಳೀಯ ಹಾಗೂ ಹೊರ ರಾಜ್ಯ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಖಾದಿ, ಹಸ್ತಕಲಾ, ಹಸ್ತಕೃತಿ, ಗ್ರಾಮೀಣ ಉತ್ಪನ್ನಗಳು ಮತ್ತು ಪರಿಸರ ಸ್ನೇಹಿ ವಸ್ತುಗಳು ಪ್ರದರ್ಶನ ಹಾಗೂ ನಿಗದಿತ ದರದಲ್ಲಿ ಮಾರಾಟ ವ್ಯವಸ್ಥೆ ಕಲ್ಪಿಸಲಾಗಿದೆ.

✅Business Offer: TUZHAR ಮೂಲಕ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. ಕಡಿಮೆ ಹೂಡಿಕೆ, ಕಚ್ಛಾವಸ್ತು ಪೂರೈಕೆ, ಮಾರುಕಟ್ಟೆ ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಸುಗಂಧ ದ್ರವ್ಯ ವ್ಯಾಪಾರಿಗಳೊಂದಿಗೆ ಸುಗಂಧ ದ್ರವ್ಯ ವ್ಯವಹಾರ ಪ್ರಾರಂಭಿಸಿ ಸ್ವಾವಲಂಬಿಗಳಾಗಿ 📲 +918088947906

error: Content is protected !!