ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣ ಎಸ್‌ಐಟಿ ತನಿಖೆಯ ಭಾಗವಾಗಿ ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ಇಂದು(ಅ.8) ಮಧ್ಯಾಹ್ನ ಸುಮಾರು 12:45ಕ್ಕೆ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆಗಮಸಿದ್ದಾರೆ.
ಎಸ್.ಐ.ಟಿ ಕಚೇರಿಯಲ್ಲಿ ಬರುಡೆ ಪ್ರಕರಣದ ಕುರಿತು ಅಧಿಕಾರಿಗಳು ತನಿಖೆ ಮಾಡಿದ ಬಗ್ಗೆ ಸಭೆ ನಡೆಸಲಿದ್ದು, ವರದಿಯ ಮಾಹಿತಿ ಸಂಗ್ರಹಿಸಿದ ಬಳಿಕ ಮುಂದಿನ ತನಿಖೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಪ್ರಮುಖವಾಗಿ ಷಡ್ಯಂತ್ರ ರೂಪಿಸಿದವರ ವಿಚಾರಣೆಯ ಜತೆಗೆ ಒಂದಷ್ಟು ಮಂದಿಯನ್ನು ವಶಕ್ಕೆ ಪಡೆಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಮೊಹಾಂತಿಯವರು ಕಳೆದ ಕೆಲ ದಿನಗಳಲ್ಲಿ ನಡೆದ ವಿಚಾರಣೆಗಳು, ಇತರ ಬೆಳವಣಿಗೆಗಳ ಕುರಿತು ಮಾಹಿತಿ ಸಂಗ್ರಹಿಸಲಿದ್ದಾರೆ. ಈಗಾಗಲೇ ಆ್ಯಂಬುಲೆನ್ಸ್ ಚಾಲಕರಿಬ್ಬರ ವಿಚಾರಣೆ ನಡೆದಿದ್ದು, ತನಿಖೆಗೆಯ ಭಾಗವಾಗಿ ಮುಂದೆ ಯಾರ ವಿಚಾರಣೆ ನಡೆಯಬೇಕು ಎನ್ನುವುದು ತೀರ್ಮಾನವಾಗಲಿದೆ. ಕೆಲವೊಂದು ಯುಟ್ಯೂಬರ್‌ಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು, ಅವರು ಯಾರೂ ವಿಚಾರಣೆಗೆ ಹಾಜರಾಗಿಲ್ಲ.
ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಷಡ್ಯಂತ್ರ ರೂಪಿಸಿದವರ ಪಟ್ಟಿ ಎಸ್‌ಐಟಿಯ ಮುಂದಿದ್ದು, ಅದರಲ್ಲಿ ಯಾರನ್ನು ವಿಚಾರಣೆ ನಡೆಸಬೇಕು, ಅಗತ್ಯವಿದ್ದರೆ ಯಾರನ್ನು ವಶಕ್ಕೆ ಪಡೆಯಬೇಕು ಅಥವಾ ಬಂಧಿಸಬೇಕು ಎನ್ನುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.