ನವದೆಹಲಿ: ವಾಣಿಜ್ಯ ಬಳಕೆಯ 19 ಕೆಜಿ ತೂಕದ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 15.50 ರೂ. ಹೆಚ್ಚಿಸಲಾಗಿದೆ. ಈ ದರ ಇಂದಿನಿಂದಲೇ ಜಾರಿಗೆ ಬರುವಂತೆ ತೈಲ ಮಾರುಕಟ್ಟೆ ಕಂಪನಿಗಳು ನಿರ್ಧರಿಸಿವೆ.
ಇದಕ್ಕೂ ಮೊದಲು, ಸೆ.01 ರಿಂದ, ತೈಲ ಕಂಪನಿಗಳು ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 51.50 ರೂ. ಕಡಿತಗೊಳಿಸಿತ್ತು. ಹೊಸ ಹಣಕಾಸು ವರ್ಷದಲ್ಲಿ ಜನರಿಗೆ ರಿಲೀಫ್ ನೀಡಲು ಏಪ್ರಿಲ್ 1ರಂದು ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿದ್ದವು. ಆದರೆ ಇದೀಗ ಏಪ್ರಿಲ್ ಮತ್ತು ಜುಲೈ 2025ರ ನಡುವೆ 19 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಗಳನ್ನು ದೆಹಲಿಯಲ್ಲಿ 138 ರೂ., ಕೋಲ್ಕತ್ತಾದಲ್ಲಿ 144 ರೂ., ಮುಂಬೈನಲ್ಲಿ 139 ರೂ. ಮತ್ತು ಚೆನ್ನೈನಲ್ಲಿ 141.5 ರೂ.ಗೆ ಇಳಿಸಲಾಗಿತ್ತು.
ಆದಾಗ್ಯೂ, ಏಪ್ರಿಲ್ 8ರಂದು 50 ರೂ. ಹೆಚ್ಚಿಸಿದ್ದ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕೇವಲ ವಾಣಿಜ್ಯ ಗ್ಯಾಸ್ ಬೆಲೆಯಲ್ಲಿ ಮಾತ್ರ ಏರಿಕೆಯಾಗಿದೆ ಎಂಬುದು ಇಲ್ಲಿ ಗಮನಾರ್ಹ.
ಎಲ್ಲೆಲ್ಲಿ? ಎಷ್ಟು ಹೆಚ್ಚಳ?
ನವದೆಹಲಿ: 19 ಕೆಜಿ ಸಿಲಿಂಡರ್ ಬೆಲೆ 1,595.50 ರೂ. (15.50 ರೂ. ಏರಿಕೆ)
ಕೋಲ್ಕತ: 19 ಕೆಜಿ ಸಿಲಿಂಡರ್ ಬೆಲೆ 1,700.50 ರೂ. (16.5 ರೂ. ಹೆಚ್ಚಳ)
ಮುಂಬೈ: 19 ಕೆಜಿ ಸಿಲಿಂಡರ್ 1,547 ರೂ. (15.50 ರೂ. ಏರಿಕೆ)
ಚೆನ್ನೈ: 19 ಕೆಜಿ ಸಿಲಿಂಡರ್ 1,754.50 ರೂ. (16.5 ರೂ. ಹೆಚ್ಚಳ)