ಬೆಂಗಳೂರು: ಬಿಜೆಪಿ ಜಾತಿಗಣತಿಗೆ ವಿರೋಧ ಮಾಡುವುದಿಲ್ಲ. ಜಾತಿಗಣತಿ ಹೆಸರಿನಲ್ಲಿ ಸಮಾಜ ಒಡೆಯೋದಕ್ಕೆ ಮಾತ್ರ ನಮ್ಮ ವಿರೋಧ ಇದೆ ಎಂದು ಬಿಜೆಪಿ ನಾಯಕ ಸಿ.ಟಿ ರವಿ ತಿಳಿಸಿದ್ದಾರೆ.
ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಬಿಜೆಪಿಗೆ ವಿರೋಧ ಮಾಡುತ್ತಿರುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, “ಜಾತಿಗಣತಿಗೆ ಬಿಜೆಪಿಯ ವಿರೋಧ ಇಲ್ಲ. ಜಾತಿ ಒಡೆಯೋದು, ಹೊಸ ಜಾತಿ ಸೃಷ್ಟಿ ಮಾಡೋದು, ಹಿಂದೂ ಜಾತಿಗಳನ್ನ ಕ್ರಿಶ್ಚಿಯನ್ ಜಾತಿಗೆ ಸಮೀಕರಣ ಮಾಡೋದು. ಹಿಂದೂಗಳನ್ನ ಒಡೆಯುವುದು, ಒಳ ಜಾತಿ ಒಡೆಯೋದಕ್ಕೆ ನಮ್ಮ ವಿರೋಧ ಇದೆ. ಸಮೀಕ್ಷೆಗೆ ವಿರೋಧ ಇಲ್ಲ” ಎಂದು ಸ್ಪಷ್ಟನೆ ನೀಡಿದರು.
“ನಾವು ಸಾಮಾಜಿಕ ನ್ಯಾಯದ ಪರ ಇದ್ದೇವೆ. ನಿಮಗೆ ಅದರ ಬದ್ಧತೆ ಇಲ್ಲ. ಕಾಂಗ್ರೆಸ್‌ನವರಿಗೆ ಬದ್ಧತೆ ಇಲ್ಲ. ಕಾಂಗ್ರೆಸ್‌ನವರಿಗೆ ಬದ್ಧತೆ ಇದ್ದಿದ್ದರೆ ಕಾಂತರಾಜು ವರದಿ ಯಾಕೆ ಕಸದ ಬುಟ್ಟಿಗೆ ಹಾಕುತ್ತಿದ್ದರು? ನಾಗಮೋಹನ್ ದಾಸ್ ವರದಿ ಯಾಕೆ ತಿಪ್ಪೇಗುಂಡಿಗೆ ಸೇರುತ್ತಿತ್ತು? ನಿಮಗೆ ಬದ್ಧತೆ ಇಲ್ಲ. ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳೋದು ಬಿಡೋದು ಅವರಿಗೆ ಬಿಟ್ಟಿದ್ದು. ಆದರೆ ಬಿಜೆಪಿ ನಿರ್ಣಯ ತೆಗೆದುಕೊಂಡಿದೆ, ಜಾತಿಗಣತಿಗೆ ನಮ್ಮ ವಿರೋಧವಿಲ್ಲ” ಎಂದರು.