ಪದ್ಮಭೂಷಣ ಪುರಸ್ಕೃತ ಕನ್ನಡದ ಹಿರಿಯ ಸಾಹಿತಿ ಎಸ್​.ಎಲ್​. ಭೈರಪ್ಪ ಇನ್ನಿಲ್ಲ !!

ಬೆಂಗಳೂರು: ಪರ್ವ ಕಾದಂಬರಿ ಖ್ಯಾತಿಯ, ಪದ್ಮಭೂಷಣ ಗೌರವ ಪುರಸ್ಕೃತ ನಾಡಿನ ಹಿರಿಯ ಸಾಹಿತಿ ಎಸ್​ಎಲ್ ಬೈರಪ್ಪ ಎಸ್​.ಎಲ್​. ಭೈರಪ್ಪ(94) ಅವರು ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಖಾಸಗಿ ಆಸ್ಪತ್ರೆ ರಾಷ್ಟ್ರೋತ್ಥಾನದಲ್ಲಿ ಚಿಕಿತ್ಸೆ ಫಲಿಸದೇ ಇಂದು (ಸೆ.24) ಕೊನೆಯುಸಿರೆಳೆದಿದ್ದಾರೆ.

ಬೈರಪ್ಪ ಅವರು ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಭಾಜನರಾಗಿದ್ದರು. ಇವರು ಮೂಲತಃ ಹಾಸನ ಜಿಲ್ಲೆಯ ಸಂತೇಶಿವಾರ ಗ್ರಾಮದವರು. ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಎಂಬುದು ಎಸ್‌.ಎಲ್. ಬೈರಪ್ಪ ಅವರ ಪೂರ್ಣ ಹೆಸರು. ಭೈರಪ್ಪ ಅವರು ತಮ್ಮ ಸ್ವಗ್ರಾಮದ ಕೆರೆಗಳಿಗೆ ನೀರು ತುಂಬಿಸಲು ಕೂಡ ಶ್ರಮಿಸಿದ್ದರು. ಬಾಲ್ಯದಲ್ಲಿ ಕಷ್ಟದಲ್ಲೇ ಬೆಳೆದು ವಿದ್ಯಾಭ್ಯಾಸ ಮಾಡಿದ್ದರು. ಮೈಸೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು ಪ್ರಧಾನಿ ಮೋದಿ ಅವರನ್ನು ಬೆಂಬಲಿಸುತ್ತಿದ್ದರು. ಭೈರಪ್ಪ ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಬೇಕೆಂದು ಅವರ ಓದುಗ ಅಭಿಮಾನಿಗಳು ಒತ್ತಾಯಿಸುತ್ತಿದ್ದರು. ಆದರೇ, ಜ್ಞಾನಪೀಠ ಪ್ರಶಸ್ತಿಗೆ ಪರ್ಯಾಯವಾದ ಸರಸ್ವತಿ ಸಮ್ಮಾನ್ ಪ್ರಶಸ್ತಿ ಭೈರಪ್ಪ ಅವರಿಗೆ ಬಂದಿತ್ತು.

ಭೈರಪ್ಪ ಅವರು ಪರ್ವ, ಆವರಣ, ಗೃಹಭಂಗ ಸೇರಿದಂತೆ ಅನೇಕ ಕಾದಂಬರಿಗಳನ್ನು ಬರೆದಿದ್ದರು. ಕಾದಂಬರಿಗಳಲ್ಲದೆ ಸೌಂದರ್ಯಮೀಮಾಂಸೆ, ತತ್ವಶಾಸ್ತ್ರದ ಕುರಿತು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೇ, ವಂಶವೃಕ್ಷ, ದಾಟು, ತಂತು, ಅಂಚು, ಪರ್ವ, ಗೃಹಭಂಗ, ಅನ್ವೇಷಣ, ಮಂದ್ರ, ಸಾರ್ಥ, ನಾಯಿನೆರಳು, ಧರ್ಮಶ್ರೀ, ದೂರಸರಿದರು, ಮತದಾನ ಮುಂತಾದವು ಅವರ ಕಾದಂಬರಿಗಳಾಗಿವೆ.

ಬೈರಪ್ಪ ಅವರಿಗೆ ಬಂದ ಪದವಿಗಳು ಮತ್ತು ಪ್ರಶಸ್ತಿಗಳು ಅಂದರೇ, ಭೈರಪ್ಪ ಅವರಿಗೆ 2010ರಲ್ಲಿ ಸರಸ್ವತಿ ಸಮ್ಮಾನ್, 2015ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್, 2016ರಲ್ಲಿ ಪದ್ಮಶ್ರೀ, ಮತ್ತು 2023ರಲ್ಲಿ ಪದ್ಮಭೂಷಣ ಪ್ರಶಸ್ತಿಗಳು ಲಭಿಸಿವೆ.

ಎಸ್. ಎಲ್. ಭೈರಪ್ಪ ಅವರು modernen ಕನ್ನಡ ಸಾಹಿತ್ಯಕಾರರಲ್ಲಿ ಒಬ್ಬ ಪ್ರಮುಖ ಕಾದಂಬರಿಕಾರ, ತತ್ವಜ್ಞಾನಿ ಮತ್ತು ಲೇಖಕ. ಅವರ ಕೃತಿಗಳು ಕನ್ನಡ ಸಾಹಿತ್ಯದಲ್ಲಿ ಜನಪ್ರಿಯವಾಗಿವೆ, ಇಂಗ್ಲೀಷ್ ಮತ್ತು ಇತರ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ.

error: Content is protected !!