ಮೆದುಳು ತಿನ್ನುವ ಅಮೀಬಾ ಪ್ರಕರಣಗಳು ಹೆಚ್ಚಳ: ಕರ್ನಾಟಕಕ್ಕೆ ಕೇರಳ ನೀಡಿದ ಎಚ್ಚರಿಕೆ ಏನು?

ತಿರುವನಂತಪುರಂ:ಕೇರಳದಲ್ಲಿ ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (PAM) (ಮೆದುಳು ತಿನ್ನುವ ಅಮೀಬಾ) ಪ್ರಕರಣಗಳು ಹೆಚ್ಚುತ್ತಿದ್ದು, ರಾಜ್ಯ ಆರೋಗ್ಯ ಇಲಾಖೆ ಇತ್ತೀಚಿನ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 12ರ ವರದಿ ಪ್ರಕಾರ, ರಾಜ್ಯದಲ್ಲಿ ಒಟ್ಟು 66 ದೃಢಪಟ್ಟ ಪ್ರಕರಣಗಳು ಪತ್ತೆಯಾಗಿದ್ದು, 17 ಮಂದಿ ಮೃತಪಟ್ಟಿದ್ದಾರೆ.

ಕೇರಳವು ಈ ಪ್ರಕರಣಗಳ ಕುರಿತು ಕರ್ನಾಟಕ ಮತ್ತು ತಮಿಳುನಾಡಿನ ಆರೋಗ್ಯ ಇಲಾಖೆಗಳಿಗೆ ಮಾಹಿತಿ ಹಂಚಿಕೊಂಡಿದೆ. ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಕರ್ನಾಟಕ ಮೂಲದ ಮೂವರಲ್ಲಿ ಮತ್ತು ಕಣ್ಣೂರಿನಲ್ಲಿ ತಮಿಳುನಾಡು ಮೂಲದ ಒಬ್ಬರಲ್ಲಿ ಪ್ರಕರಣ ಪತ್ತೆಯಾಗಿದೆ. ಎರಡೂ ರಾಜ್ಯಗಳು ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.

ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಸೋಂಕಿತರ ವಿವರಗಳಲ್ಲಿ ಗೊಂದಲಗಳು ಸೃಷ್ಟಿಯಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 12ರವರೆಗಿನ ಅಂಕಿ ಅಂಶಗಳನ್ನು ಕೇರಳ ಆರೋಗ್ಯ ಇಲಾಖೆ ಪ್ರಕಟಿಸಿದ್ದು, ಅದರಲ್ಲಿ ಪ್ರಕರಣಗಳ ಕುರಿತಂತೆ ಸ್ಪಷ್ಟ ಮಾಹಿತಿ ನೀಡಲಾಗಿದೆ.

ದೃಢಪಟ್ಟ ಪ್ರಕರಣಗಳು – 66
ಸಾವುಗಳು – 17
ಶಂಕಿತ ಪ್ರಕರಣಗಳು – 42
ಶಂಕಿತ ಸಾವುಗಳು – 14

ಕೇರಳ: ಮೆದುಳು ತಿನ್ನುವ ಅಮೀಬಾಕ್ಕೆ 17 ಬಲಿ, 66 ಮಂದಿಗೆ ತಗುಲಿದ ಸೋಂಕು!

ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳುವಂತೆ, ಕೇರಳವು ಪ್ರಕರಣಗಳನ್ನು ಬೇಗನೆ ಪತ್ತೆಹಚ್ಚುವುದರಿಂದ ಅನೇಕ ಜೀವಗಳನ್ನು ಉಳಿಸಲು ಸಾಧ್ಯವಾಗಿದೆ. ಅಪರೂಪದ ಈ ಕಾಯಿಲೆ ಕಲುಷಿತ ನೀರಿನಲ್ಲಿ ಕಂಡುಬರುವ ಅಮೀಬಾದಿಂದ ಉಂಟಾಗುತ್ತದೆ. ಜನರು ಕಲುಷಿತ ನೀರಿನ ಸಂಪರ್ಕಕ್ಕೆ ಬಾರದಂತೆ ಎಚ್ಚರಿಕೆ ನೀಡಿದ್ದಾರೆ.

ಆದರೆ, ವಿರೋಧ ಪಕ್ಷದ ನಾಯಕ ವಿ.ಡಿ. ಸತೀಸನ್ ಆರೋಗ್ಯ ಇಲಾಖೆಯನ್ನು ಟೀಕಿಸಿ, “ಇಲಾಖೆಯೇ ವೆಂಟಿಲೇಟರ್‌ನಲ್ಲಿದೆ” ಎಂದು ಆರೋಪಿಸಿದರು.

ಪ್ರಸ್ತುತ ಪರಿಸ್ಥಿತಿಯಲ್ಲಿ ಮಲಪ್ಪುರಂನ 10 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದ್ದು, ಆಕೆ ಕೋಝಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಒಟ್ಟು 11 ಮಂದಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಮನಾಟ್ಟುಕ್ಕರ ಮೂಲದ ಒಬ್ಬ ವ್ಯಕ್ತಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆರೋಗ್ಯ ಇಲಾಖೆ ಜನರಿಗೆ ಎಚ್ಚರಿಕೆ ನೀಡಿದ್ದು, ಕಲುಷಿತ ನೀರಿನಲ್ಲಿ ಈಜುವುದು ಅಥವಾ ಸ್ನಾನ ಮಾಡುವುದು ತಪ್ಪಿಸಿಕೊಳ್ಳಬೇಕು ಎಂದು ಮನವಿ ಮಾಡಿದೆ.

ಕೇರಳ: ಮಾರಕ ಮೆದುಳು ತಿನ್ನುವ ರೋಗಕ್ಕೆ ಬಾಲಕಿ ಬಲಿ, ಹಲವರು ಗಂಭೀರ

error: Content is protected !!