ಹಾಸನದ ಲಾರಿ ಅಪಘಾತ: ಬಳ್ಳಾರಿ ಯುವಕ ಸೇರಿ 9 ಜನ ಮೃತ

ಬಳ್ಳಾರಿ: ಹಾಸನದ ಮೊಸಳೆ ಹೊಸಳ್ಳಿಯಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆಯ ನಡೆಯುತ್ತಿದ್ದ ವೇಳೆ ಲಾರಿ ಹರಿದು ಒಂಬತ್ತು ಮಂದಿ ಮೃತಪಟ್ಟಿದ್ದು, ಅದರಲ್ಲಿ ಬಳ್ಳಾರಿಯ ಎಂಜಿನಿಯರ್ ವಿದ್ಯಾರ್ಥಿ ಪ್ರವೀಣ್ ಕೂಡ ಓರ್ವ ಇಂದು ಆತನ ಮೃತದೇಹವನ್ನು ಹಾಸನದಿಂದ ಬಳ್ಳಾರಿಗೆ ತರಲಾಗಿದ್ದು ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.

ಅಪಘಾತದಲ್ಲಿ ಮೃತಪಟ್ಟ ಏಳು ಮಂದಿ ಮೊಸಳೆ ಹೊಸಳ್ಳಿಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಪ್ರವೀಣನ ದೇಹವನ್ನು ಬಳ್ಳಾರಿಗೆ ತರಲಾಗಿದೆ. ಅವನ ತಾಯಿ ಸುಶೀಲಮ್ಮನ ಆಕ್ರಂದನ ಮುಗಿಲು‌ ಮುಟ್ಟಿದೆ.

ತಂದೆ ಇಲ್ಲದ ಮಗನ ಓದುವ ಕನಸಿಗೆ ತನ್ನ ಜೀವ ಪಣವಾಗಿಟ್ಟಿದ್ದ ತಾಯಿ, ಕಿತ್ತು ತಿನ್ನುವ ಬಡತನದಲ್ಲಿ ಆಸ್ಪತ್ರೆಯಲ್ಲಿ ಅಡುಗೆ ಕೆಲಸ ಮಾಡಿ ಮಗನನ್ನು ಓದುಸುತ್ತಿದ್ದರು ಇದರ ಬೆನ್ನಲ್ಲೇ ಈ ದುರ್ಘಟನೆ ಸಂಭವಿಸಿ ಮಗನನ್ನೇ ಕಿತ್ತುಕೊಂಡಿದೆ. ಈ ದುರ್ಘಟನೆಯಿಂದ ನಾಗಲಕೇರಿ ಪ್ರದೇಶದಲ್ಲಿ ದುಃಖದ ಅಲೆ ಸೃಷ್ಟಿಯಾಗಿದೆ.

error: Content is protected !!