ಪಟಾಕಿ ಪ್ರಿಯರಿಗೆ ಬಿಗ್‌ಶಾಕ್: ದೇಶಾದ್ಯಂತ ಪಟಾಕಿ ನಿಷೇಧಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ: ದೆಹಲಿಯವರು ದೇಶದ ಗಣ್ಯ ನಾಗರಿಕರು ಎಂಬ ಕಾರಣಕ್ಕೆ ಮಾಲಿನ್ಯವನ್ನು ನಿಗ್ರಹಿಸುವ ನೀತಿ ಕೇವಲ ದೆಹಲಿಯಲ್ಲಿ ಮಾತ್ರ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ(ಸೆ.12) ಅಭಿಪ್ರಾಯಪಟ್ಟಿದೆ.

ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಏಪ್ರಿಲ್ 3ರಂದು ಜಾರಿಗೆ ಬಂದ ಪಟಾಕಿ ಮಾರಾಟ, ಸಂಗ್ರಹಣೆ ಮತ್ತು ತಯಾರಿಕೆ ನಿಷೇಧವನ್ನು ರಾಷ್ಟ್ರವ್ಯಾಪಿ ಮಟ್ಟದಲ್ಲಿ ಅನುಷ್ಠಾನಗೊಳಿಸುವ ಕುರಿತು ಸಿಎಕ್ಯೂಎಂಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಎರಡು ವಾರಗಳಲ್ಲಿ ಉತ್ತರ ನೀಡುವಂತೆ ಕೋರಿದೆ.

ಈ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಎನ್‌ಸಿಆರ್ ನಗರಗಳಿಗೆ ಶುದ್ಧ ಗಾಳಿಯನ್ನು ಪಡೆಯುವ ಹಕ್ಕಿದ್ದರೆ, ಇತರ ನಗರಗಳ ಜನರಿಗೆ ಏಕೆ ಅವಕಾಶವಿಲ್ಲ ಎಂದು ಕೇಳಿದರು. ‘ಯಾವುದೇ ನೀತಿ ಇದ್ದರೂ, ಅದು ಪ್ಯಾನ್-ಇಂಡಿಯಾ ಮಟ್ಟದಲ್ಲಿರಬೇಕು. ದೆಹಲಿಯು ದೇಶದ ಗಣ್ಯ ವರ್ಗ ಎಂಬ ಕಾರಣಕ್ಕಾಗಿ ನಾವು ಅವರಿಗೆ ಮಾತ್ರ ನೀತಿಯನ್ನು ರೂಪಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

ಈ ನಡುವೆ, ದೇಶದಾದ್ಯಂತದ ಪಟಾಕಿ ವ್ಯಾಪಾರಿಗಳು ಮತ್ತು ಗ್ರಾಹಕರಲ್ಲಿ ಈ ನಿರ್ಧಾರವು ಗಮನಾರ್ಹ ಚರ್ಚೆಯನ್ನು ಉಂಟುಮಾಡಿದೆ. ಪರಿಸರ ಸಂರಕ್ಷಣೆ ಮತ್ತು ಸಾಂಸ್ಕೃತಿಕ ಆಚರಣೆಗಳ ನಡುವಿನ ಸಮತೋಲನ ಕಾಯ್ದುಕೊಳ್ಳುವುದು ಈ ವಿವಾದದ ಮುಖ್ಯ ಅಂಶವಾಗಿದೆ.

error: Content is protected !!