ಬ್ರಹ್ಮಾವರ: ಮದುವೆಗೆ ನಿರಾಕರಿಸಿದ ಯುವತಿಗೆ ಚೂರಿ ಇರಿದ ಯುವಕ

ಉಡುಪಿ : ಮದುವೆಗೆ ನಿರಾಕರಿಸಿದ ಕಾರಣಕ್ಕೆ ತಾನು ಪ್ರೀತಿಸಿದ ಪಕ್ಕದ ಮನೆಯ ಯುವತಿಗೆ ಯುವಕನೋರ್ವ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ಇಂದು ಬೆಳಿಗ್ಗೆ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆಯಲ್ಲಿ ನಡೆದಿದೆ.

ಕೊಕ್ಕರ್ಣೆಯ ರಕ್ಷಿತಾ ಪೂಜಾರಿ( 24) ಚಾಕು ಇರಿತಕ್ಕೊಳಗಾದ ಯುವತಿ. ಈಕೆಯ ಪಕ್ಕದ ಮನೆಯ ನಿವಾಸಿ ಕಾರ್ತಿತ್‌ ಚೂರಿ ಇರಿದ ಆರೋಪಿ.

ಕಾರ್ತಿಕ್ ಪಕ್ಕದ ಮನೆಯ ರಕ್ಷಿತಾಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ಮನೆಯಲ್ಲಿ ಮದುವೆಗೆ ಆಕ್ಷೇಪ ಬಂದಿತ್ತು. ಮನೆಯಲ್ಲಿ ಮದುವೆಗೆ ಒಪ್ಪದ ಕಾರಣ ಯುವತಿ ಕೂಡಾ ಆತನ ನಂಬರ್ ಬ್ಲಾಕ್ ಮಾಡಿದ್ದಳು ಎನ್ನಲಾಗಿದೆ. ಈ ಎಲ್ಲ ಕಾರಣದಿಂದ ಕಾರ್ತಿಕ್‌ ಕೋಪಗೊಂಡಿದ್ದ.

ಯುವತಿ ಮನೆಯಿಂದ ಬಸ್ ನಿಲ್ದಾಣ ಬಳಿ ಕೆಲಸಕ್ಕೆಂದು ಹೋಗುತ್ತಿದ್ದ  ಸಂದರ್ಭ ಬೈಕ್‌ನಲ್ಲಿ ಬಂದ ಕಾರ್ತಿಕ್ ಆಕೆಗೆ ಇರಿದಿದ್ದಾನೆ ಎನ್ನಲಾಗಿದೆ.‌ ಇವತ್ತು ಯುವತಿಯ ಹುಟ್ಟುಹಬ್ಬವಾಗಿದ್ದು ಹುಟ್ಟಿದ ದಿನವೇ ಯುವತಿಯನ್ನು ಕೊಲೆಗೈಯುವ ಉದ್ದೇಶದಿಂದ ಯುವತಿಗೆ ಚಾಕು ಚುಚ್ಚಿ ಯುವಕ ಬೈಕ್ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ರಕ್ಷಿತಾಳ ಎದೆ ಹಾಗೂ ಕತ್ತಿಗೆ ಗಂಭೀರ ಗಾಯವಾಗಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

error: Content is protected !!