ಮಂಗಳೂರು: ಪತಿಷ್ಠಿತ ಅಶೋಕ್ ಲೇಲ್ಯಾಂಡ್ ಕಂಪೆನಿಯ ಮಂಗಳೂರು ಸರ್ವಿಸ್ ಸೆಂಟರ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಲಕ್ಷಾಂತರ ರೂಪಾಯಿ ನೀಡಿ ಟ್ರಕ್ ಖರೀದಿಸಿದ ಬಳಿಕ, ಸಣ್ಣ ದುರಸ್ತಿಗೂ ದಿನಗಟ್ಟಲೆ ವಾಹನ ತಡೆದು, ಮಾಲಕರಿಗೆ ತೊಂದರೆ ಉಂಟುಮಾಡಲಾಗುತ್ತಿದೆ ಎಂದು ಟ್ರಕ್ ಮಾಲಕ ಟ್ರಕ್ ಮಾಲಕ ತಲಪಾಡಿಯ ಅಬ್ದುಲ್ ಶಮೀರ್ ಎಂಬವರು ದೂರಿದ್ದು, ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಲು ಮುಂದಾಗಿದ್ದಾರೆ.

ನಾನು ಅಶೋಕ್ ಲೇ ಲ್ಯಾಂಡ್ ಕಂಪೆನಿಯ ಮಂಗಳೂರು ಸೆಂಟರ್‌ನಲ್ಲಿ ಟ್ರಕ್ ಖರೀದಿಸಿದ್ದೇನೆ. ಈ ಕಂಪೆನಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹಾಗೂ ಕೂಳೂರಿನಲ್ಲಿ ಸರ್ವಿಸ್ ಸೆಂಟರ್ ಮಾರಾಟ ಶಾಖೆಯನ್ನು ಹೊಂದಿದೆ. ಗ್ರಾಹಕರು ಟ್ರಕ್ ಎಲ್ಲೇ ಖರೀದಿಸಿದರೂ ಕೆಟ್ಟು ನಿಂತಾಗ ಸರ್ವಿಸ್ ಸೇವೆಯನ್ನು ಯಾವುದೇ ಶಾಖೆಯಲ್ಲಿ ನೀಡುವುದು ಕಂಪೆನಿಯ ಹಕ್ಕು. ಆದರೆ ಇಲ್ಲಿ ಮಾತ್ರ ಖರೀದಿಸಿದ್ದಲ್ಲಿಯೇ ಸರಿಪಡಿಸಿ ಎಂದು ಸರ್ವಿಸ್ ಒದಗಿಸದೆ ಗ್ರಾಹಕರನ್ನು ಅಲೆದಾಡಿಸಿ ಕಿರಿಕಿರಿ ಮಾಡುತ್ತಾರೆ ಹೀಗಾಗಿ ಕಂಕನಾಡಿ ಠಾಣೆಗೂ ದೂರು ನೀಡಿದ್ದಾಗಿ ಶಮೀರ್ ಹೇಳಿದ್ದಾರೆ.
ಮಂಗಳೂರಿನ ಟ್ರಕ್ ಮಾರಾಟ ಹಾಗೂ ಸರ್ವಿಸ್ ಶಾಖೆಯು ನಾನು ಕೂಳೂರು ಸೆಕ್ಟರಿನಿಂದ ಟ್ರಕ್ ಖರೀದಿಸಿರುವುದರಿಂದ ಸರ್ವಿಸ್ ನೀಡಲು ನಿರಾಕರಿಸಿದೆ. ಇದು ನನಗೆ ಮಾತ್ರವಲ್ಲ ಹಲವಾರು ಮಂದಿಗೆ ಈ ಸಮಸ್ಯೆಯ ಅರಿವಾಗಿದೆ. ಅಶೋಕ್ ಲೇಲ್ಯಾಂಡ್ ಕಂಪೆನಿಯು ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದೆ ತನ್ನ ಗ್ರಾಹಕರಿಗೆ ಅನ್ಯಾಯ ಮಾಡುತ್ತಿದೆ. ಮಾತ್ರವಲ್ಲ ಒಮ್ಮೆ ವಾಹನ ಖರೀದಿಸಿದ ಬಳಿಕ ಸರ್ವಿಸ್ ನೀಡಲು ಸತಾಯಿಸುತ್ತಿದೆ. ಹೀಗಾದರೆ ಇಂತಹ ಕಂಪೆನಿಯನ್ನು ನಂಬುವುದಾದರೂ ಹೇಗೆ ಎಂದು ಮಾಧ್ಯಮದ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸಣ್ಣ ದುರಸ್ತಿಗೆ ಮೂರ್ನಾಲ್ಕು ದಿನಗಳಾದರೂ ವಾಹನ ವಾಪಸ್ ಕೊಡದೆ ಟ್ರಕ್‌ನಲ್ಲಿದ್ದ ಸರಕುಗಳನ್ನು ಕೂಡ ಡೌನ್ಲೋಡ್ ಮಾಡಲಾಗದೆ ಬಾರಿ ನಷ್ಟವನ್ನು ಅನುಭವಿಸುತ್ತಿದ್ದೇವೆ. ಇದರ ವಿರುದ್ಧ ಪೊಲೀಸ್ ದೂರು ಹಾಗೂ ಮುಂದೆ ನ್ಯಾಯಾಲಯದ ಮೆಟ್ಟಿಲು ಕೂಡ ಹತ್ತಲಿದ್ದೇನೆ ಎಂದು ಶಮೀರ್ ಹೇಳಿದ್ದಾರೆ. ಒಟ್ಟಿನಲ್ಲಿ ವಾಹನ ಮಾರಾಟ ಹಾಗೂ ದುರಸ್ತಿ ಸೇವೆಯನ್ನು ನೀಡುವ ಕಂಪೆನಿಗಳು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡದೆ ಹೋದಲ್ಲಿ ಮುಂದಿನ ದಿನಗಳಲ್ಲಿ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಗ್ರಾಹಕರು ಎಚ್ಚರಿಕೆ ನೀಡಿದ್ದಾರೆ.