ಆಗಸ್ಟ್ 10: ದುಬೈ ಬಿಸಿಎಫ್‌ನಿಂದ ವಿದ್ಯಾರ್ಥಿ ವೇತನ, ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ

ಮಂಗಳೂರು: ದುಬೈ ಬ್ಯಾರೀಸ್ ಕಲ್ಬರಲ್ ಫೋರಂ (ಬಿಸಿಎಫ್) ವತಿಯಿಂದ ಈ ವರ್ಷ ಪಿಯುಸಿಯಿಂದ ಪದವಿ, ಸ್ನಾತಕೋತ್ತರ ಪದವಿ ತನಕದ ಸುಮಾರು 300ಕ್ಕೂ ಹೆಚ್ಚು ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಹಾಗೂ ದಕ ಉಡುಪಿ ಜಿಲ್ಲೆಯ ಹಲವು ಮಹಿಳೆಯರಿಗೆ ಸ್ವ ಉದ್ಯೋಗಕ್ಕಾಗಿ ಉಚಿತ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ ನಾಳೆ(ಆ.10) ಮಂಗಳೂರಿನ ಜಪ್ಪಿನಮೊಗರಿನಲ್ಲಿರುವ ಪ್ರೆಸ್ಟೀಜ್ ಇಂಟ‌ರ್ ನ್ಯಾಶನಲ್ ಸ್ಕೂಲ್‌ನಲ್ಲಿ 11 ಗಂಟೆಯಿಂದ ನಡೆಯಲಿದೆ ಎಂದು ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕರೆದ ಸುದ್ದಿಗೋಷ್ಠಿಯ ಸಂಸ್ಥೆಯ ಹೇಳಿದರು.

ಯುಎಇ ಲಂಡನ್ ಅಮೇರಿಕನ್ ಸಿಟಿ ಕಾಲೇಜಿನ ನಿರ್ದೇಶಕ, ಬಿಸಿಎಫ್‌ನ ಪ್ರಧಾನ ಕಾರ್ಯದರ್ಶಿ ಡಾ. ಪ್ರೊ. ಕಾಪು ಮೊಹಮ್ಮದ್ ಮಾತನಾಡಿ, ಆರ್ಥಿಕವಾಗಿ ಹಿಂದುಳಿದಿರುವ ಕೌಟುಂಬಿಕ ಹಿನ್ನಲೆಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದುಬೈ ಬ್ಯಾರೀಸ್ ಕಲ್ಬರಲ್ ಫೋರಂ ಕಳೆದ 24 ವರ್ಷಗಳಿಂದ 14000 ಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಿದೆ. ಈ ಬಾರಿಯೂ ಯಾವುದೇ ಜಾತಿ, ಮತ, ಬೇಧವಿಲ್ಲದೆ ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳಿಗೆ ವಿದ್ಯಾರ್ಥಿ ವಿತರಣೆ ನೀಡಲಾಗುವುದು. ಅದರೊಂದಿಗೆ ಕಾರ್ಯಕ್ರಮದ ಆರಂಭದಲ್ಲಿ ಬಿಸಿನೆಸ್‌ ಸೆಮಿನಾರ್‌ ನಡೆಯಲಿದ್ದು, ಇದರಲ್ಲಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇವರಿಗೆ ಪ್ರಮಾಣ ಪತ್ರ ನೀಡಲಾಗುವುದು. ಸಂಸ್ಥೆಯ ಸ್ಥಾಪಕ ಅಧ್ಯಕ್ಷ ತುಂಬೆ ಮೊಯ್ದೀನ್‌ ಅವರ ವತಿಯಿಂದ ಡಾಕ್ಟರ್‌ ಆಫ್‌ ಮೆಡಿಸಿನ್‌ ಪ್ರೋಗ್ರಾಂ ಮಾಡುವ ಇಬ್ಬರು ವಿದ್ಯಾರ್ಥಿಗಳಿಗೆ ಸಂಪೂರ್ಣ ವಿದ್ಯಾರ್ಥಿ ವೇತನ ಸಿಗಲಿದೆ. ಈ ವಿದ್ಯಾರ್ಥಿಗಳಿಗೆ ಉಚಿತ ವೀಸಾ, ಉಚಿತ ಶಿಕ್ಷಣ, ಊಟ, ವಸತಿ ವ್ಯವಸ್ಥೆ ಅಲ್ಲದೆ 500 ದಿರಮ್ಸ್‌ ಪಾಕೆಟ್‌ ಮನಿಯನ್ನು ಅವರ ಶಿಕ್ಷಣ ಮುಗಿಯುವ 6 ವರ್ಷಗಳ ತನಕ ಸಿಗಲಿದೆ. ಇದರಲ್ಲಿ ಆಯ್ಕೆಯಾಗಬೇಕಾದ ವಿದ್ಯಾರ್ಥಿಗಳು ನಮ್ಮ ಸಂಸ್ಥೆ ವತಿಯಿಂದ ನಡೆಸಲಿರುವ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಿದೆ. ರಫಾ ರಫೀ ಎನ್ನುವ ವಿದ್ಯಾರ್ಥಿ ಇಲ್ಲಿ ಸೆಲೆಕ್ಟ್‌ ಆಗಿದ್ದು, ಆಕೆ ಮೂರು ವರ್ಷ ಯುಎಇ ಹಾಗೂ 3 ವರ್ಷ ಉಜ್ಬೆಕಿಸ್ತಾನದಲ್ಲಿ ಶಿಕ್ಷಣ ಪೂರೈಸಿದ್ದು, ಈಕೆಗೆ ಸುಮಾರು 1.5 ಕೋಟಿ ಹಣ ಖರ್ಚು ಮಾಡಲಾಗಿದೆ ಎಂದು ವಿವರಿಸಿದರು. ಅದೇ ರೀತಿ ಬಿಸಿಎಫ್ ವತಿಯಿಂದ ನಮ್ಮ ಸಂಸ್ಥೆಯ ಮುಮ್ತಾಜ್‌ ಅಲಿಯ ಅವರ ಸ್ಮರಣಾರ್ಥ 5 ವಿಶೇಷ ಸ್ಕಾಲರ್‌ಶಿಪ್‌ ಕಾರ್ಯಕ್ರಮವಿದ್ದು, ಇವರ ಆಯ್ಕೆಯೂ ನಾಳೆ ನಡೆಯಲಿದೆ ಎಂದು ತಿಳಿಸಿದರು.


ಮಾಜಿ ಶಾಸಕ ಮೊಯ್ದೀನ್‌ ಬಾವಾ ಮಾತಾಡಿ, ಬಿಸಿಎಫ್‌ ಸಂಸ್ಥೆಯ ಸದಸ್ಯರು ವಿದೇಶದಲ್ಲಿ ವ್ಯವಹಾರ ಮಾಡುತ್ತಿದ್ದು, ಪ್ರತೀ ವರ್ಷ ನಮ್ಮ ಊರಿನ ಜಾತಿ, ಮತ, ಬೇಧವಿಲ್ಲದೆ ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವಂತಹಾ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಇದೇ ಸಂಸ್ಥೆಯ ವತಿಯಿಂದ ವಿದೇಶದಲ್ಲಿ ಸಿಲುಕಿದ ಭಾರತೀಯರನ್ನು 5 ಜೆಟ್‌ ವಿಮಾನಗಳ ಮೂಲಕ ಊರಿಗೆ ಕರೆಸುವ ಕೆಲಸ ಮಾಡಿದ್ದಾರೆ ಎಂದರು.

ನಾಳಿನ ಕಾರ್ಯಕ್ರಮದಲ್ಲಿ ವೃತ್ತಿ ಮಾರ್ಗದರ್ಶನ ಶಿಬಿರವೂ ನಡೆಯಲಿದೆ. ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸಲಿದ್ದು, ಸಭಾಧ್ಯಕ್ಷತೆಯನ್ನು ಬಿಸಿಎಫ್ ಅಧ್ಯಕ್ಷರಾದ ಡಾ. ಬಿ.ಕೆ ಯೂಸುಫ್ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ದಕ ಜಿಲ್ಲಾಧಿಕಾರಿ ಹೆಚ್.ವಿ ದರ್ಶನ್, ಜಿಲ್ಲಾಧಿಕಾರಿ, ದ.ಕ. ಜಿಲ್ಲೆ ಹಾಗೂ ಎನ್.ಆರ್.ಫೋರಂ ಯು.ಎ.ಇ. ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ, ಮಾಜಿ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಬಿ.ಎಂ ಫಾರೂಕ್ ಹಾಜಿ ಎಸ್.ಎಂ. ರಶೀದ್, ಹಾಜಿ ಡಾ. ಯು.ಟಿ ಇಪ್ಟಿಕಾರ್, ಸೆನೆಟ್ ಸದಸ್ಯರು, ಕೆ ಮಹಮ್ಮದ್ ಹಾರಿಸ್, ಎಂ.ಡಿ ಮುಕ್ಕ ಸೀಫುಡ್, ಜನಾಬ್ ಶೇಖ್ ಮೊದೀನ್ ಕರ್ನಿರೆ, ಜನಾಬ್ ಅಬ್ದುಲ್ಲ ಮಾದುಮೂಲೆ, ಟ್ರಸ್ಟಿ ಇಂಡಿಯನ್ ಹೈಸ್ಕೂಲ್, ಆಬುದಾಭಿ, ಜನಾಬ್ ಇಬ್ರಾಹಿಂ ಗಡಿಯಾರ್, ಚೇರೈನ್, ಗಡಿಯಾರ್ ಗ್ರೂಪ್. ಜನಾಬ್ ಅಬೂಸಾಲಿಹ್, ನಫೀಸ್ ಗ್ರೂಪ್, ಶ್ರೀಮತಿ ಕೌಸರ್ ನಿಝಾರ್. ಡೈರೆಕ್ಟರ್ ಪ್ರೆಸಿಡೆನ್ಸಿ ಗ್ರೂಪ್ ಆಫ್ ಇನ್ಸಿಟ್ಯೂಶನ್ಸ್, ಬೆಂಗಳೂರು, ಮಿಸ್ಟಾ ವುಮೆನ್ಸ್ ಕಾಲೇಜಿನ ಪ್ರಾಂಶುಪಾಲರಾದ ಝಾಹಿದ ಜಲೀಲ್ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಲಿದ್ದಾರೆ. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ ಮತ್ತು ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಆಯೋಜಕರು ಇದೇ ಸಂದರ್ಭದಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಮ್. ಇ. ಮೂಳೂರು (ಜೈರ್‌ ಮ್ಯಾನ್ ಬಿಸಿಎಫ್ ಸ್ಕಾಲರ್‌ಶಿಪ್ ಕಮಿಟಿ), ಅಬ್ದುಲ್ ಲತೀಫ್ ಮುಲ್ಕಿ (ಉಪಾಧ್ಯಾಕ್ಷರು, ಬಿಸಿಎಫ್)
ಇಬ್ರಾಹಿಂ ಗಡಿಯಾರ್ (ಚೀಫ್ ಅಡ್ಡೆಸರ್, ಬಿ.ಸಿ.ಎಫ್), ಅಬೂಸ್ವಾಲಿಹ್ ಹುಸೈನ್ (ಚೀಫ್ ಅಡ್ಡೆಸರ್, ಬಿ.ಸಿ.ಎಫ್), ಉಸ್ಮಾನ್ ಮೂಳೂರು (ಎಕ್ಸಿಕ್ಯೂಟಿವ್ ಮೆಂಬರ್, ಬಿ.ಸಿ.ಎಫ್), ಅಶ್ರಫ್ ಸತ್ತಿಕಲ್ (ಎಕ್ಸಿಕ್ಯೂಟಿವ್ ಮೆಂಬರ್, ಬಿ.ಸಿ.ಎಫ್), ಎಂ. ಅಬ್ದುಲ್ ರಝಾಕ್ ಮುಟ್ಟಿಕಲ್ (ಎಕ್ಸಿಕ್ಯೂಟಿವ್ ಮೆಂಬರ್, ಬಿ.ಸಿ.ಎಫ್), ಹುಸೈನ್ ಸತ್ತಿಕಲ್ (ಎಕ್ಸಿಕ್ಯೂಟಿವ್ ಮೆಂಬರ್, ಬಿ.ಸಿ.ಎಫ್) ಮತ್ತಿತರಿದ್ದರು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!