ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟ ಸಲಿಂಗ ಜೋಡಿ!

ಬಿಗ್​ಬಾಸ್: ಮಲಯಾಳಂ ಬಿಗ್​ಬಾಸ್​ ಸೀಸನ್ 7ರ ನಿರೂಪಣೆಯನ್ನು ಸೂಪರ್ ಸ್ಟಾರ್ ಮೋಹನ್ ಲಾಲ್ ವಹಿಸಿಕೊಂಡಿದ್ದು ಈ ಬಾರಿಯ ಸೀಸನ್ ನಲ್ಲಿ ಆಧಿಲಾ ನಜ್ರನ್ ಮತ್ತು ಫಾತಿಮಾ ನೋರಾ ಎಂಟ್ರಿ ಕೊಟ್ಟು ಎಲ್ಲರಿಗೂ ಶಾಕ್​ ಕೊಟ್ಟಿದ್ದಾರೆ.

ಕನ್ನಡ ಬಿಗ್​ಬಾಸ್​ ಸೀಸನ್ 12 ಶುರುವಾಗೋದಕ್ಕೆ ಕೆಲವು ದಿನಗಳು ಬಾಕಿ ಇದ್ದು, ಸದ್ಯದಲ್ಲೇ ಬಿಗ್​ಬಾಸ್​ ಪ್ರೋಮೋಗಳು ರಿಲೀಸ್​ ಆಗಲಿವೆ. ಈ ಬಗ್ಗೆ ಇನ್ನಷ್ಟೇ ಬಿಗ್​ಬಾಸ್​ ಟೀಮ್​ ಅಧಿಕೃತ ಮಾಹಿತಿ ನೀಡಬೇಕಿದೆ.

ಸಲಿಂಗ ಜೋಡಿಯಾದ ಆಥಿಲಾ ನಜ್ರನ್ ಮತ್ತು ಫಾತಿಮಾ ನೋರಾ ಮೂಲತಃ ಕೇರಳದವರಾಗಿದ್ದು, ಇವರ ಪ್ರೀತಿ ಎರಡು ಕುಟುಂಬಗಳ ವಿರೋಧದಿಂದ ಬೇರ್ಪಟ್ಟ ನಂತರ ಹೈಕೋರ್ಟ್ ಮೆಟ್ಟಿಲೇರಿದ ಈ ಜೋಡಿ, ಕಳೆದ ಮೇ ತಿಂಗಳಲ್ಲಿ ಕೋರ್ಟ್ ತೀರ್ಪಿನಿಂದ ಮತ್ತೆ ಒಂದಾಗಿದ್ದರು. ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದವು.

ಇದೀಗ ಈ ಜೋಡಿ ಮಲಯಾಳಂ ಬಿಗ್‌ಬಾಸ್‌ ಸೀಸನ್‌ 7ರಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಸಲಿಂಗ ಜೋಡಿ, ಅನುಮೋಲ್, ಆರ್ ಜೆ ಬಿನ್ಸಿ, ರೇಣು ಸುಧಿ, ಜಿಜೆಲ್ ಥಕ್ರಾಲ್, ಶೈತ್ಯ, ನೆವಿನ್, ಮುನ್ಷಿ ರಂಜಿತ್, ರೇನಾ ಫಾತಿಮಾ, ಒನೆಲ್ ಸಾಬು, ಅಕ್ಬರ್ ಖಾನ್ ಸೇರಿದಂತೆ ಒಟ್ಟು 19 ಸ್ಪರ್ಧಿಗಳು ‘ಬಿಗ್ ಬಾಸ್ ಮಲಯಾಳಂ 7’ ನಲ್ಲಿ ಭಾಗವಹಿಸಿದ್ದಾರೆ.

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19

error: Content is protected !!