ಮಾಜಿ ಭಾರತೀಯ ಕ್ರಿಕೆಟ್ ನಾಯಕ ಎಂಎಸ್ ಧೋನಿ ಮತ್ತೊಮ್ಮೆ ಗಮನ ಸೆಳೆದಿದ್ದಾರೆ – ಕ್ರಿಕೆಟ್‌ಗಾಗಿ ಅಲ್ಲ, ಬದಲಾಗಿ ಅವರ ಫ್ಯಾಷನ್ ಆಯ್ಕೆಗಾಗಿ. ತಮ್ಮ ಸ್ಟೈಲಿಶ್ ಲುಕ್ ಮತ್ತು ಫ್ಯಾಷನ್ ಮೇಲೆ ಅತೀವ ಪ್ರೀತಿ ಹೊಂದಿರುವ ಧೋನಿ ಇತ್ತೀಚೆಗೆ ₹72,000 ಮೌಲ್ಯದ ಶರ್ಟ್ ಧರಿಸುವ ಮೂಲಕ ಸುದ್ದಿಗಳಲ್ಲಿದ್ದಾರೆ. ವಿಶೇಷವೆಂದರೆ ಈ ಡ್ರೆಸ್‌ನಲ್ಲಿ ಸಂಗೀತದ ಚಿಹ್ನೆಗಳಿವೆ.
ಧೋನಿ ಧರಿಸಿದ ನೇವಿ-ನೀಲಿ ಅರ್ಧ ತೋಳಿನ ಶರ್ಟ್ ಅದರ ಬೆಲೆಗೆ ಮಾತ್ರವಲ್ಲದೆ ಅದರ ವಿಶಿಷ್ಟ ವಿನ್ಯಾಸಕ್ಕೂ ಎಲ್ಲರ ಗಮನ ಸೆಳೆಯಿತು. ಈ ಶರ್ಟ್ ಸಂಗೀತ ಚಿಹ್ನೆಗಳು ಮತ್ತು ಪಿಯಾನೋ ಗ್ರಾಫಿಕ್ ಅನ್ನು ಒಳಗೊಂಡಿದ್ದು, ಅದು ಎದ್ದು ಕಾಣುತ್ತದೆ. ನೀಲಿ ಬಣ್ಣದ ವಾಶ್ಡ್ ಡೆನಿಮ್ ಜೀನ್ಸ್‌ನೊಂದಿಗೆ ಈ ಮ್ಯೂಸಿಕಲ್ ಶರ್ಟ್ ಧರಿಸಿರುವ ಧೋನಿ ಅವರ ಲುಕ್ಕಿಗೆ ಅಭಿಮಾನಿಗಳು ಫಿದಾ ಆಗಿದ್ದು, ಸ್ಟೈಲ್ ಐಕಾನ್ ಆಗಿ ಕಾಣುತ್ತಿದ್ದರು.
ದುಬಾರಿ ಉಡುಪಿನಲ್ಲಿರುವ ಧೋನಿಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಮತ್ತು ಅನುಯಾಯಿಗಳು ಅವರ ಫ್ಯಾಷನ್ ಸೆನ್ಸ್ ಅನ್ನು ಹೊಗಳುತ್ತಿದ್ದಾರೆ. ಈ ಶರ್ಟ್ ತಂಪಾಗಿ ಅನುಭವ ನೀಡುತ್ತದಂತೆ. ಅನೇಕ ಜನರು ಈಗ ಆನ್‌ಲೈನ್‌ನಲ್ಲಿ ಇದೇ ರೀತಿಯ ಶರ್ಟ್‌ಗಳಿಗಾಗಿ ಹುಡುಕುತ್ತಿದ್ದಾರೆ, ಆದರೆ ಕೆಲವರು ಅದೇ ವಿನ್ಯಾಸದ ಅಗ್ಗದ ಆವೃತ್ತಿಗಳನ್ನು ಸಹ ಖರೀದಿಸುತ್ತಿದ್ದಾರೆ.
ಅದಾಗ್ಯೂ ಕೆಲವರಿಗೆ ಮಾತ್ರ ಧೋನಿ ಡ್ರೆಸ್ ಕಂಡು ಹೊಟ್ಟೆ ಉರಿಯುಂಟಾಗಿದೆ. ಚಿರ ಯೌವ್ವನದ ಯುವಕರು ಧರಿಸುವ ಇಂಥಾ ಶರ್ಟ್ ಈ ಪ್ರಾಯದಲ್ಲಿ ಧರಿಸುವುದು ಸೂಕ್ತವೇ ಎಂದು ತಗಾದೆ ತೆಗೆದಿದ್ದಾರೆ.
ಧೋನಿ ಮತ್ತು ಅವರ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಧೋನಿ ಆರಂಭಿಕ ಬ್ಯಾಟ್ಸ್ ಮ್ಯಾನ್ ಆಗಿ ಬಂದಿದ್ದರೆ ಚೆನ್ನೈ ಈ ಬಾರಿಯೂ ಕಪ್ ಗೆಲ್ಲುತ್ತಿತ್ತು. ಆದರೆ ಮುಂದಿನ ಐಪಿಎಲ್‌ಗೆ ಧೋನಿ ಮರಳುತ್ತಾರೋ ಇಲ್ಲವೋ ಎಂಬುದು ಖಚಿತವಿಲ್ಲ.