ಉತ್ತರ ಪ್ರದೇಶ: ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ನಿವಾಸಿ ಸಂಜು ಪತ್ನಿ(ಸುಮನ್)ಯ ಮೇಲೆ ಹಲ್ಲೆ ನಡೆಸಿ ತನ್ನದೇ ಎಂಟು ತಿಂಗಳ ಮಗುವನ್ನು ತಲೆ ಕೆಳಗಾಗಿಸಿ ಊರಿಡೀ ಸುತ್ತು ಬಂದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಪಾಪಿ ತಂದೆಯ ಕೃತ್ಯದಿಂದ ಮಗುವಿನ ಸೊಂಟದ ಮೂಳೆ ಮುರಿದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
ಆರೋಪಿ ಸಂಜು 2023ರಲ್ಲಿ ಸುಮನ್ ಎಂಬಾಕೆಯನ್ನು ಮದುವೆಯಾಗಿ, ವರದಕ್ಷಿಣೆ ತರುವಂತೆ ಆಕೆಯನ್ನು ಪೀಡಿಸಲು ಶುರು ಮಾಡಿದ್ದಾನೆ, ಇದು ಮುಂದುವರೆದು ಪತ್ನಿಯ ಮೇಲೆ ಹಲ್ಲೆ ನಡೆಸುವ ಹಂತಕ್ಕೂ ಬಂದಿತ್ತು. ಸಂಜು ತನ್ನ ಪತ್ನಿಗೆ ಎರಡು ಲಕ್ಷ ಹಣದ ಜೊತೆಗೆ ಒಂದು ಕಾರು ನೀಡುವಂತೆ ಮಾನಸಿಕ ಹಿಂಸೆ ನೀಡುತ್ತಿದ್ದ. ಇತ್ತೀಚಿಗೆ ಒಂದು ದಿನ ವರದಕ್ಷಿಣೆ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ ಈ ವೇಳೆ ಆರೋಪಿ ಸಂಜು ಕೋಪಗೊಂಡು ತನ್ನ ಎಂಟು ತಿಂಗಳ ಮಗುವನ್ನು ತಲೆ ಕೆಳಗಾಗಿಸಿ ನೇತು ಹಾಕಿ ಊರಿಡೀ ಸುತ್ತು ಬಂದಿದ್ದಾನೆ ಇದನ್ನು ಊರಿನ ಕೆಲ ಜನ ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿ ಪತಿ ವಿರುದ್ಧ ಪತ್ನಿ ಹಾಗೂ ಆಕೆಯ ಮನೆಯವರು ದೂರು ನೀಡಿದ್ದಾರೆ, ಆದರೆ ಪೊಲೀಸರು ಮಾತ್ರ ಆರೋಪಿ ಪತಿಯನ್ನು ಇದುವರೆಗೂ ಬಂಧಿಸಿಲ್ಲ ಎಂದು ಪತ್ನಿ ಆರೋಪಿಸಿದ್ದಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19