ದಯವಿಟ್ಟು ನನ್ನನ್ನು ಯಾರಾದರೂ ಕಾಪಾಡಿ!: ಶಾಕಿಂಗ್‌ ವಿಡಿಯೋ ಹಂಚಿಕೊಂಡ ಬಾಲಿವುಡ್‌ ನಟಿ

ಮುಂಬೈ: ಬಾಲಿವುಡ್ ನಟಿ ತನುಶ್ರೀ ದತ್ತಾ ಶಾಕಿಂಗ್ ವೀಡಿಯೋ ಹಂಚಿಕೊಂಡಿದ್ದಾರೆ. ನನ್ನ ಮನೆಯಲ್ಲೇ ನನಗೆ ಕಿರುಕುಳ ಕೊಡುತ್ತಿದ್ದಾರೆ. ಯಾರಾದರೂ ಕಾಪಾಡಿ ಎಂದು ವೀಡಿಯೋ ಮಾಡಿ ಅತ್ತಿದ್ದಾರೆ. ಕೆಲ ವರ್ಷಗಳಿಂದ ನನಗೆ ಹೀಗೆ ಹಿಂಸೆ ಕೊಡುತ್ತಿದ್ದಾರೆ. ಮನೆ ಕೆಲಸದವರನ್ನು ಸೇರಿಸಿಕೊಂಡರೆ ಅವ್ರು ನನ್ನ ವಸ್ತುಗಳನ್ನು ಕದಿಯುತ್ತಾರೆ ಎಂದು ತನುಶ್ರೀ ಹೇಳಿದ್ದಾರೆ.

तनुश्री दत्ता ने रोते हुए शेयर किया शॉकिंग वीडियो, कहा- मुझे मेरे ही घर में  परेशान किया जा रहा, कोई मेरी मदद करो - tanushree dutta shared a video while  crying and

ನಾನು ಈ ಕಿರುಕುಳದಿಂದ ಬೇಸತ್ತು ಹೋಗಿದ್ದೇನೆ. ಇದು 2018 ರಿಂದ ನಡೆಯುತ್ತಿದೆ. ಕೊನೆಗೆ ಬೇಸತ್ತು ಪೊಲೀಸರಿಗೆ ಫೋನ್ ಮಾಡಿದ್ದೆ. ದಯವಿಟ್ಟು ಯಾರಾದರೂ ನನಗೆ ಸಹಾಯ ಮಾಡಿ. ತಡವಾಗುವ ಮುನ್ನ ಏನಾದರೂ ಮಾಡಿ” ಎಂದು ಕ್ಯಾಪ್ಷನ್ ಬರೆದು ಇನ್‌ಸ್ಟಾಗ್ರಾಮ್‌ನಲ್ಲಿ ತನುಶ್ರೀ ದತ್ತಾ ವೀಡಿಯೋ ಪೋಸ್ಟ್ ಮಾಡಿದ್ದಾರೆ.

Tanushree Dutta

ನನ್ನ ಮನೆಯಲ್ಲೇ ನನಗೆ ಕಿರುಕುಳ ನೀಡಲಾಗುತ್ತಿದೆ. ಈ ಬಗ್ಗೆ ನಾನು ಪೊಲೀಸರಿಗೆ ಕರೆ ಮಾಡಿ ಹೇಳಿದ್ದೇನೆ. ಠಾಣೆಗೆ ಬಂದು ದೂರು ದಾಖಲಿಸುವಂತೆ ಪೊಲೀಸರು ನನಗೆ ಹೇಳಿದ್ದಾರೆ. ನನಗೆ ಆರೋಗ್ಯ ಸರಿಯಿಲ್ಲ. ಕಳೆದ ಐದು ವರ್ಷಗಳಿಂದ ತುಂಬಾ ಕಿರುಕುಳ ಅನುಭವಿಸುತ್ತಿದ್ದು, ನನ್ನ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ ಎಂದು ಹೇಳಿಕೊಂಡಿದ್ದಾರೆ.

বড় পর্দায় ঝড় তুলেছিলেন এক সময়ে। 'সাহসী' দৃশ্যে অভিনয়েও ছিল না ছুৎমার্গ। তুমুল জনপ্রিয়তা পেয়েও অন্তরালে চলে গিয়েছিলেন তনুশ্রী দত্ত।

ನನ್ನ ಮನೆಯ ಹೊರಗಿನಿಂದ ಜೋರಾದ ಶಬ್ದ ಕೇಳಿಬರುತ್ತದೆ. ಒಮ್ಮೊಮ್ಮೆ ಮನೆಯ ಬಾಗಿಲು ಬಡಿಯುತ್ತಾರೆ. ಮನೆ ಕೆಲಸಕ್ಕೆಂದು ಬಂದು ಕಳ್ಳತನ ಮಾಡುತ್ತಾರೆ. ಈ ಬಗ್ಗೆ ಕಟ್ಟಡದ ಆಡಳಿತ ಮಂಡಳಿಗೆ ತಿಳಿಸಿದ್ದೇನೆ. ಆದರೆ, ಅದರಿಂದ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

তবে দমে যাওয়ার পাত্রী নন তনুশ্রী। বহু বছর পর ঘুরে দাঁড়িয়েছেন তিনি। শোনা যাচ্ছে, বলিউডে প্রত্যাবর্তনের প্রস্তুতি নিচ্ছেন বঙ্গতনয়া।

ನನಗೆ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲಸದವರ ಮೇಲೂ ನಂಬಿಕೆ ಕಳೆದುಕೊಂಡಿದ್ದರಿಂದ ಕೆಲಸಕ್ಕಾಗಿ ಯಾರನ್ನು ನೇಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಸಮಸ್ಯೆ ನಡುವೆಯೇ ಮನೆಯ ಎಲ್ಲಾ ಕೆಲಸವನ್ನು ನಾನೇ ಮಾಡಿಕೊಳ್ಳುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಕಿರುಕುಳಗಳ ನಡುವೆಯೇ ನಾನು ಬದುಕು ಸಾಗಿಸುತ್ತಿದ್ದೇನೆ. ಇದರಿಂದ ನನ್ನ ಮನಸ್ಸನ್ನು ಬೇರೆಡೆ ಸೆಳೆಯಲು ಪ್ರಯತ್ನ ಮಾಡುತ್ತಿದ್ದೇನೆ. ಹೊರಗಿನ ಶಬ್ಧ ಕೇಳದಿರಲೆಂದು ಹೆಡ್‌ಫೋನ್‌ ಹಾಕಿಕೊಂಡೇ ಕುಳಿತುಕೊಳ್ಳುತ್ತೇನೆ ಎಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನನಗೆ ಸಹಾಯ ಬೇಕಿದೆ. ದಯವಿಟ್ಟು ಯಾರಾದರೂ ಸಹಾಯ ಮಾಡಿ ಎಂದು ಅಂಗಲಾಚಿದ್ದಾರೆ.

ಮನೆಯಲ್ಲೇ ಕಿರುಕುಳ ನೀಡುತ್ತಿದ್ದಾರೆ ಎಂದು ತನುಶ್ರೀ ದತ್ತಾ ಹೇಳಿದ್ರು, ಯಾರು ಕಿರುಕುಳ ಕೊಡುತ್ತಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಿಲ್ಲ. ಜಾರ್ಖಂಡ್ ಮೂಲದ ತನುಶ್ರೀ ಮಾಡೆಲ್ ಆಗಿ ಬಳಿಕ ಸಿನಿಮಾ ನಟಿಯಾಗಿ ಗುರ್ತಿಸಿಕೊಂಡಿದ್ದರು. ‘ಆಶಿಕ್ ಬನಾಯ ಅಪ್ನೆ’ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

 

error: Content is protected !!