ನವದೆಹಲಿ: ಜಗತ್ತು ಇಂದು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗೆ ಇರುವ ಏಕೈಕ ಪರಿಹಾರ ಎಂದರೆ ಅದು ಭಾರತೀಯತೆಯಾಗಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ.
ಇಗ್ನೋ ಮತ್ತು ಅಖಿಲ ಭಾರತೀಯ ಅನುವರ್ತ್ ನ್ಯಾಸಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2000 ವರ್ಷಗಳ ಹಿಂದೆ ಪಾಶ್ಚಿಮಾತ್ಯ ವಿಚಾರಗಳನ್ನು ಆಧಾರಿಸಿದ ಸಂತೋಷ ಮತ್ತು ಸಂತೃಪ್ತವಾಗಿರಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. ಜಗತ್ತು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದು, ಇದಕ್ಕೆ ಉತ್ತರವಾಗಿ ಭಾರತವನ್ನು ನೋಡುತ್ತಿದೆ
ವಿಜ್ಞಾನ ಮತ್ತು ಆರ್ಥಿಕ ಪ್ರಗತಿಯಿಂದ ಈ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ಜಗತ್ತು ಐಷಾರಾಮಿಯಾಗುತ್ತಿದೆ. ಜನರ ಜೀವನವೂ ಸುಲಭಗೊಂಡಿದೆ. ಆದರೆ, ಇದು ದುಃಖವನ್ನು ಕೊನೆಗೊಳಿಸಿಲ್ಲ. ದೌರ್ಜನ್ಯ, ಬಡತನ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಬಡವರು ಮತ್ತು ಶ್ರೀಮಂತರ ನಡುವಣ ಅಂತರ ಹೆಚ್ಚಾಗುತ್ತಿದೆ.
ಮೊದಲ ವಿಶ್ವ ಯುದ್ಧದ ಬಳಿಕ ಅನೇಕರು ಶಾಂತಿಯ ಸಲಹೆ ನೀಡಿ ಅನೇಕ ಪುಸ್ತಕಗಳನ್ನು ಬರೆದರು. ಭವಿಷ್ಯದಲ್ಲಿ ಮತ್ತೆ ಯುದ್ಧ ನಡೆಯದಂತೆ ರಾಷ್ಟ್ರಗಳ ಒಕ್ಕೂಟವನ್ನು ರಚಿಸಲಾಯಿತಾದರೂ ಎರಡನೇ ಮಹಾಯುದ್ಧ ಪ್ರಾರಂಭವಾಯಿತು. ಯುಎನ್ಒ ರಚನೆಯಾಯಿತು. ಆದರೆ, ಇಂದು ನಾವು ಮೂರನೇ ವಿಶ್ವ ಯುದ್ದವಾದರೆ ಏನು ಗತಿ ಎಂದು ಯೋಚಿಸುತ್ತಿದ್ದೇವೆ ಎಂದರು.
ಧರ್ಮ ದೃಷ್ಟಿ ಭಾರತದ ಸ್ವಭಾವ: ಇಂದು ಜಗತ್ತು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಇರುವ ಏಕೈಕ ಪರಿಹಾರ ಎಂದರೆ ಭಾರತೀಯತೆಯೇ ಆಗಿದೆ. ಭಾರತದ ಅರ್ಥವೇನು? ಭಾರತೀಯತೆ ಎಂದರೆ ಪೌರತ್ವವಲ್ಲ. ಖಂಡಿತ, ಪೌರತ್ವ ಅಗತ್ಯ. ಆದರೆ, ಭಾರತಕ್ಕೆ ಸೇರಲು ಭಾರತದ ಸ್ವಭಾವ ಇರಬೇಕು. ಭಾರತದ ಸ್ವಭಾವ ಕುರಿತು ಇಡೀ ಜೀವನದ ಬಗ್ಗೆ ಯೋಚಿಸುತ್ತದೆ. ನಾಲ್ಕು ಪುರುಷಾರ್ಥಗಳಿವೆ (ಹಿಂದೂ ತತ್ವಶಾಸ್ತ್ರದಲ್ಲಿ ನಾಲ್ಕು ಗುರಿಗಳು) ಅದರಲ್ಲಿ ಮೋಕ್ಷ ಜೀವನದ ಅಂತಿಮ ಗುರಿಯಾಗಿದೆ. ಭಾರತದ ಸ್ವಭಾವವು ಧರ್ಮ ದೃಷ್ಟಿಯನ್ನು ಆಧರಿಸಿದೆ ಎಂದರು.
ಧರ್ಮದ ಶಿಸ್ತಿನಿಂದಾಗಿ ಭಾರತವು ಒಂದು ಕಾಲದಲ್ಲಿ ಅತ್ಯಂತ ಶ್ರೀಮಂತ ರಾಷ್ಟ್ರವಾಗಿತ್ತು. ಜಗತ್ತಿಗೆ ಅದು ತಿಳಿದಿದ್ದು, ಭಾರತವನ್ನು ಅವರು ಉತ್ತರವಾಗಿ ನೋಡುತ್ತಿದ್ದು, ಹೊಸ ಮಾರ್ಗವನ್ನು ತೋರಿಸುತ್ತದೆ ಎಂದು ಆಶಿಸುತ್ತಿದ್ದಾರೆ. ಇದನ್ನು ನಾವು ಜಗತ್ತಿಗೆ ಮಾರ್ಗವನ್ನು ತೋರಿಸಬೇಕು. ಇದಕ್ಕಾಗಿ ನಮ್ಮ ರಾಷ್ಟ್ರವನ್ನು ಸಿದ್ದಪಡಿಸಬೇಕಿದ್ದು, ನಮ್ಮ ಮತ್ತು ನಮ್ಮ ಕುಟುಂಬದಿಂದ ಪ್ರಾರಂಭಿಸಬೇಕು ಎಂದರು.
ನಮ್ಮ ದೈನಂದಿನ ಜೀವನದಲ್ಲಿ ದೃಷ್ಟಿ ಅಗತ್ಯವಾಗಿದೆ. ಪರಿವರ್ತನೆ ನಾವು ಸಜ್ಜಾಗಬೇಕಿದೆ. ಪಾಶ್ಚಿಮಾತ್ಯರು ಕಲಿಸಿದ ಇತಿಹಾಸವನ್ನು ನಾವು ಕಲಿತಿದ್ದೇವೆ. ನಮ್ಮ ದೇಶದ ಪಠ್ಯಪುಸ್ತಕದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂಬುದನ್ನು ಕೇಳಿದ್ದೇನೆ ಎಂದರು.