ಸುರತ್ಕಲ್: ಶ್ರೀಲಂಕಾದಲ್ಲಿ ಜುಲೈ 4 ರಿಂದ 10 ರ ವರೆಗೆ ನಡೆದ ಮಾಸ್ಟಸ್೯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಸ್ಪರ್ಧಿಸಿದ್ದ ಬಬಿತಾ ಶೆಟ್ಟಿ ಸುರತ್ಕಲ್ ಅವರು ಹೈಜಂಪ್ ನಲ್ಲಿ ಬೆಳ್ಳಿ, ರಿಲೇಯಲ್ಲಿ ಕಂಚು ಪದಕ ಪಡೆದಿದ್ದಾರೆ. ಶ್ರೀಲಂಕಾದ ಮಹೀಂದ್ರ ರಾಜಪಕ್ಷ ಮೈದಾನದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಭಾರತದಿಂದ ಒಟ್ಟು 46 ಕ್ರೀಡಾ ಪಟುಗಳು ಭಾಗವಹಿಸಿದ್ದರು.
ಬಬಿತಾ ಶೆಟ್ಟಿ ಅವರು ಸುರತ್ಕಲ್ ಬಂಟರ ಸಂಘದ ಮಹಿಳಾ ಕ್ರೀಡಾಕಾರ್ಯದರ್ಶಿಯಾಗಿದ್ದಾರೆ. ಕ್ರೀಡೆಯಲ್ಲಿ ಇವರು ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.
ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/JaPBl9THV4d0QHbJzEdgVQ?mode=r_t