ಬಹುಮಹಡಿ ಕಟ್ಟಡದಲ್ಲಿ ʻಸ್ಯಾಡ್‌ರೀಲ್ಸ್‌ʼ ಮಾಡುತ್ತಿದ್ದ ಯುವತಿ ಜಾರಿ ಬಿದ್ದು ಸಾವು

ಬೆಂಗಳೂರು: ತನ್ನ ಹನ್ನೆರಡು ವರ್ಷದ ಪ್ರೀತಿ ಮುರಿದು ಬಿದ್ದು ಮನನೊಂದಿದ್ದ ಯುವತಿ 13 ಅಂತಸ್ಥಿನ ನಿರ್ಮಾಣ ಹಂತದ ಕಟ್ಟಡ ಹತ್ತಿ ಸ್ಯಾಡ್‌ ರೀಲ್ಸ್‌ ಮಾಡುವಾಗ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ಆಂಧ್ರದ ಬೋಯಲ ನಂದಿನಿ (21) ಎಂದು ಗುರುತಿಸಲಾಗಿದೆ. ಚಿತ್ತೂರು ಮೂಲದ ನಂದಿನಿ ಬಿ.ಕಾಂ ಪದವೀಧರೆಯಾಗಿದ್ದು, ನಗರದ ಭುವನೇಶ್ವರಿ ಲೇಔಟ್‌ನ ಪಿಜಿಯೊಂದರಲ್ಲಿ ವಾಸಿಸುತ್ತಿದ್ದಳು. ರಿಲಯನ್ಸ್‌ ಮಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.

ಸ್ನೇಹಿತರೆಲ್ಲಾ ಸೇರಿ ನಿರ್ಮಾಣ ಹಂತದ ಕಟ್ಟಡದ ಬಳಿ ಪಾರ್ಟಿ ಮಾಡಲೆಂದು ಯುವತಿ ನಂದಿನಿ ಹೋಗಿದ್ದಳು. ಈ ಪಾರ್ಟಿಯಲ್ಲಿ ಪ್ರೀತಿ ವಿಚಾರಕ್ಕಾಗಿ ಮಾತುಕತೆ ನಡೆದು ಗಲಾಟೆ ಆಗಿದೆ. 12 ವರ್ಷದ ಲವ್ ಮುರಿದು ಬಿದ್ದಿತ್ತು. ಇದರಿಂದ ಬೇಸರಗೊಂಡಿದ್ದ ಯುವತಿ ಸ್ಯಾಡ್ ರೀಲ್ಸ್​ ಮಾಡಲು ಬರೋಬ್ಬರಿ 13 ಅಂತಸ್ಥಿತ ನಿರ್ಮಾಣ ಹಂತದ ಕೊನೆಯಲ್ಲಿದ್ದ ಕಟ್ಟಡ ಹತ್ತಿದ್ದಳು. ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್​ಗಾಗಿ ಬಿಡಲಾಗಿದ್ದ ಸ್ಥಳದಲ್ಲಿ ರೀಲ್ಸ್‌ ಮಾಡುತ್ತಿದ್ದಳು. ಆದರೆ ರೀಲ್ಸ್​ ಮಾಡುವಾಗ ತಾನು ಎಲ್ಲಿ ಇದ್ದೇನೆ ಎನ್ನುವುದು ಮರೆತ್ತಿದ್ದ ನಂದಿನಿ ಮೇಲಿನಿಂದ ಕೆಳಗೆ ಬಿದ್ದು ಯುವತಿ ಜೀವ ಬಿಟ್ಟಿದ್ದಾಳೆ.

ಪುತ್ರಿಯ ಸಾವಿನ ವಿಚಾರ ತಿಳಿದ ನಂದಿನಿ ಪೋಷಕರು ಬೆಂಗಳೂರಿಗೆ ಬಂದಿದ್ದು, ಮಗಳು ನಂದಿನಿ ಜತೆಗಿದ್ದ ಇಬ್ಬರು ಯುವಕರು ಹಾಗೂ ಸ್ನೇಹಿತೆಯನ್ನು ವಿಚಾರಣೆ ನಡೆಸುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!