ಜೂ.22: ಮೂಲ್ಕಿ ಕೊಲ್ನಾಡ್‌ನಲ್ಲಿ ಕೋಸ್ಟಲ್‌ ಫಿಲ್ಮ್‌ ಅವಾರ್ಡ್ಸ್

ಮಂಗಳೂರು: ಸತತ ನಾಲ್ಕನೇ ಬಾರಿಗೆನ ಸ್ಯಾಂಡಿಸ್‌ ಕಂಪೆನಿ‌ ಅರ್ಪಿಸುವ ಕೋಸ್ಟಲ್‌ ಫಿಲ್ಮ್‌ ಅವಾರ್ಡ್ಸ್ 2025 ಜೂನ್ 22 ರಂದು ಭಾನುವಾರ ಸಂಜೆ 3:00ಗೆ ಸರಿಯಾಗಿ ಮುಲ್ಕಿಯ ಸುಂದರರಾಮ ಶೆಟ್ಟಿ ಕನ್ವೆನ್ಸನಲ್ ಸೆಂಟರ್ ಕೊಲ್ನಾಡ್‌ನಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂದು ಆಯೋಜಕ, ಸ್ಯಾಂಡಿಸ್ ಕಂಪೆನಿ ಮಾಲಕ ಸಂದೇಶ ರಾಜ್ ಬಂಗೇರ ಹೇಳಿದರು.

ಮಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಕನ್ನಡ ಸಿನಿಮಾ ತಾರೆಯರಾದ ರಚನಾ ರೈ, ವ್ಯಂದ ಆಚಾರ್ಯ, ರೂಪೇಶ್ ಶೆಟ್ಟಿ, ಪೃಥ್ವಿ ಅಂಬ‌ರ್ ಹಾಗೂ ಮೋಹಕ ತಾರೆ ಸೋನಲ್ ಮೊಂತೆರೊ ಹಾಗೂ ತುಳು ಚಿತ್ರರಂಗದ ನಿರ್ಮಾಪಕರು, ತಂತ್ರಜರು ಹಿರಿಯ ಮತ್ತು ಕಿರಿಯ ನಟ ನಟಿಯರು ಮತ್ತು ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ. ಎಂದರು.

ತುಳು ಚಿತ್ರರಂಗದ ನಟ ನಟಿಯರಿಂದ, ಮತ್ತು ಸಿಸಿಲಿಂಗ್ ಗಾಯ್ಸ್ ತಂಡದಿಂದ ಅದ್ಭುತ ನೃತ್ಯ, ರಸಮಂಜರಿ ಹಾಗೂ ಕಾಮಿಡಿ ಕಾರ್ಯಕ್ರಮ ನಡೆಯಲಿದೆ ಎಂದರು.
ಪ್ರಸಿದ್ದ ನಿರೂಪಕರಾದ ಶರ್ಮಿಳಾ ಅಮೀನ್ ಮತ್ತು ವಿನೀತ್ ಕುಮಾರ್ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ. ಸಾಧನೆಗೈದ ಇಬ್ಬರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಈ ಬಾರಿ 2024 ರಲ್ಲಿ ತೆರೆಕಂಡಿರುವ ಒಟ್ಟು 8ಸಿನಿಮಾಗಳು ಸ್ಪರ್ಧೆಗೆ ಬಂದಿವೆ. ಲೈಫ್ ಟೈಮ್ ಅಚೀವೆಂಟ್ ಅವಾರ್ಡ್ ಹಾಗೂ ವರ್ಸಟೈಲ್ ಆಕ್ಟರ್ ಅವಾರ್ಡ್ ಸೇರಿ ಒಟ್ಟು 30 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಸರ್ವರಿಗೂ ಉಚಿತ ಪ್ರವೇಶ ಸಂದೇಶ್ ರಾಜ್ ಬಂಗೇರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಹಲವರಿದ್ದರು.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj

error: Content is protected !!