ಮೈಕಾಲ ಟ್ರೋಲ್ಸ್‌, ಟ್ರೋಲ್‌ ಅಬ್ರಹಾಂ, ಕರಾವಳಿ ಒಫಿಸಿಯಲ್ ಮೇಲೆ ಎಫ್‌ಐಆರ್

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕೋಮುದ್ವೇಷ ಉಂಟಾಗುವಂತೆ ಮಾಡಿರುವ ಪೋಸ್ಟ್‌ಗಳನ್ನು ಗಮನಿಸಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಹಾಗೂ ಬಂಟ್ವಾಳ ಗ್ರಾಮಾಂತರ ಠಾಣೆಗಳಲ್ಲಿ ಇನ್ಸ್ಟಾಗ್ರಾಂ ಟ್ರೋಲ್‌ ಪೇಜ್‌ಗಳ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ಇನ್‌ ಸ್ಟಾಗ್ರಾಂನ “Maikala trolls” ಎಂಬ ಹೆಸರಿನ ಖಾತೆಯಲ್ಲಿ ಯಾರೋ ಕಿಡಿಗೇಡಿಗಳು ಇತ್ತೀಚೆಗೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಯುವಕನ ಕೊಲೆಗೆ ಸಂಬಂಧಿಸಿದಂತೆ ಕೋಮುದ್ವೇಶವನ್ನುಂಟು ಮಾಡುವಂತಹ ಆಕ್ಷೇಪಾರ್ಹ ಸಂದೇಶಗಳನ್ನು ಪೋಸ್ಟ್ ಮಾಡಿದ್ದರು.. ಇದರಿಂದಾಗಿ ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗುವ ಸಾಧ್ಯತೆಗಳಿರುವುದರಿಂದ ಜೂ.2ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 47/2025 ಕಲಂ: 353(2), 55 ಜೊತೆಗೆ 103 ಭಾರತೀಯ ನ್ಯಾಯ ಸಂಹಿತ 2023 ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಅದೇ ರೀತಿ ಬಂಟ್ವಾಳದ ಕುರಿಯಾಳ ಗ್ರಾಮದ ಧನುಷ್‌ ಎಂಬವರು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ತನ್ನ ಫೋಟೋವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೊಲೆಗೀಡಾದ ಯುವಕನ ಜೊತೆಗೆ ಧನುಷ್‌ ಫೋಟೋ ತೆಗೆದಿದ್ದು, ಅದನ್ನು ಅವರು nstagramನಲ್ಲಿ ಪೋಸ್ಟ್ ಮಾಡಿದ್ದರು. ಈ ಫೋಟೋವನ್ನು ದುರುಪಯೋಗಪಡಿಸಿಕೊಂಡು ʻtroll Abraham ʼ ಮತ್ತು ʻ maikala trollʼ ಹಾಗೂ ‘’ ಕರಾವಳಿ ಒಫಿಸಿಯಲ್ “ ಎಂಬ instagram ಪೇಜ್‌ಗಳಲ್ಲಿ ಯಾರೋ ಕಿಡಿಗೇಡಿಗಳು ಪಿರ್ಯಾದಿದಾರರ ಮೇಲೆ ಕೋಮುದ್ವೇಷ ಭಾವನೆ ಉಂಟಾಗುವಂತಹ ಹಾಗೂ ಪಿರ್ಯಾದಿರವರನ್ನು ಕೊಲೆ ಪ್ರಕರಣದ ಅಪರಾಧಿಯಂತೆ ಬಿಂಬಿಸಲಾಗುವ ಬರಹಗಳೊಂದಿಗೆ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ ಕ್ರ 61/2025 ಕಲಂ: 353(1) (B) , 353(2) ರಂತೆ ಪ್ರಕರಣ ಪ್ರಕರಣ ದಾಖಲಾಗಿದೆ.

error: Content is protected !!