ಮೂಲ್ಕಿ: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಗೈದ ಆರೋಪದ ಮೇಲೆ ಯುವಕನೋರ್ವನನ್ನು ಮೂಲ್ಕಿ ಪೊಲೀಸರು ಪೋಕ್ಸೋ ಕೇಸಿನಡಿ ಬಂಧಿಸಿದ್ದಾರೆ. ಬಜ್ಪೆ ಸಮೀಪದ ಪ್ರೀತಮ್ ಪ್ರಕರಣದ ಆರೋಪಿ.
ಆರೋಪಿ ಪ್ರೀತಮ್ ಮೇ 25 ಭಾನುವಾರ ಪಕ್ಷಿಕೆರೆಯ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಹಾಸನದ ಉದಯಪುರಕ್ಕೆ ಕರೆದುಕೊಂಡು ಹೋಗಿದ್ದನು. ಬಾಲಕಿಯ ತಾಯಿ ತನ್ನ ಮಗಳ ಅಪಹರಣದ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೇ 29 ಗುರುವಾರ ಆರೋಪಿಯು ಬಾಲಕಿಯೊಂದಿಗೆ ಮಂಗಳೂರಿಗೆ ವಾಪಸ್ಸಾಗಿರುವ ಕುರಿತು ಮಾಹಿತಿ ಪಡೆದ ಮೂಲ್ಕಿ ಪೊಲೀಸರು, ಪ್ರೀತಮ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರೀತಮ್ ತನ್ನನ್ನು ಅಪಹರಿಸಿ ಅತ್ಯಾಚಾರ ಎಸಗಿರುವುದಾಗಿ ಬಾಲಕಿ ಪೊಲೀಸರಲ್ಲಿ ತಿಳಿಸಿದ್ದಾಳೆ. ಈ ಹೇಳಿಕೆಯ ಮೇರೆಗೆ ಪ್ರೀತಂ ವಿರುದ್ಧ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.