ವಿದ್ಯುತ್‌ ತಂತಿ ತುಳಿದು ವೃದ್ಧೆ ಮೃತ್ಯು

ಮೂಡಬಿದ್ರೆ: ಕಡಿದು ಬಿದ್ದಿದ್ದ ವಿದ್ಯುತ್‌ ತಂತಿಯನ್ನು ತುಳಿದು ವೃದ್ಧೆ ಸ್ಥಳದಲ್ಲೇ ಮೃತಪಟ್ಟ ಘಟನೆ ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾಮ ಹೊಸಮಾರು ಪದವು ಬಂಗಾರುಗುಡ್ಡೆ ಎಂಬಲ್ಲಿ ಘಟನೆ ನಡೆದಿದೆ. ಕೃಷಿಕ ಕುಟುಂಬದ ಲಿಲ್ಲಿ ಡಿ’ಸೋಜಾ (64) ಮೃತಪಟ್ಟಿದ್ದಾರೆ. ಮೃತರು ಮೂವರು ಮಕ್ಕಳನ್ನು ಅಗಲಿದ್ದಾರೆ. ಲಿಲ್ಲಿ ಡಿ’ ಸೋಜಾ ಅವರು ಹಿಂಬದಿಯ ಬಾಗಿಲು ತೆರೆದು ಹೊರಗೆ ಕಾಲಿಟ್ಟಾಗ ಅಲ್ಲಿ ರಾತ್ರಿ ವೇಳೆ ಕಡಿದು ಬಿದ್ದಿದ್ದ ವಿದ್ಯುತ್‌ ತಂತಿಯನ್ನು ತಮಗರಿವಿಲ್ಲದೆ ಆಕಸ್ಮಿಕವಾಗಿ ತುಳಿದಿದ್ದು, ಇದರಿಂದ ವಿದ್ಯುತ್‌ ಸ್ಪರ್ಶವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮನೆ ಹಿಂಭಾಗದಲ್ಲಿ ಹಾದು ಹೋಗುವ ವಿದ್ಯುತ್ ಲೈನಿನ ಸರ್ವೀಸ್‌ ವಯರಿನಲ್ಲಿ ಸ್ಪಾರ್ಕ್‌ ಆಗುತ್ತಿರುವ ಬಗ್ಗೆ ನಿನ್ನೆ ಮಧ್ಯಾಹ್ನ ಲಿಲ್ಲಿ ಡಿ’ಸೋಜಾ ಅವರು ಮೆಸ್ಕಾಂ ಕಚೇರಿಗೆ ಫೋನ್‌ ಮಾಡಿ ತಿಳಿಸಿದ್ದರು. ಆದರೆ ಅದರ ದುರಸ್ತಿಗೆ ಮೆಸ್ಕಾಂ ಅಧಿಕಾರಿಗಳು ಗಮನ ಹರಿಸಿರಲಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

error: Content is protected !!