ನವೋದಯ ಸಮಾಜದಲ್ಲಿ ಗಮನಾರ್ಹ ಬದಲಾವಣೆ ತಂದಿದೆ: ರಾಜ್ಯಪಾಲ ಗೆಹ್ಲೋಟ್

ನವೋದಯ ಸ್ವಸಹಾಯ ಗುಂಪುಗಳ ‘ರಜತ ಸಂಭ್ರಮ’: ಗೋಲ್ಡ್ ಫಿಂಚ್ ಸಿಟಿಯಲ್ಲಿ “ಮಹಿಳಾ ಶಕ್ತಿ” ಪ್ರದರ್ಶನ!

ಮಂಗಳೂರು: ಒಂದು ಐತಿಹಾಸಿಕ ಕಾರ್ಯಕ್ರಮವನ್ನು ಇಂದಿಲ್ಲಿ ಆಯೋಜನೆ ಮಾಡಲಾಗಿದೆ. ಇದರ ಸೂತ್ರಧಾರ ರಾಜೇಂದ್ರ ಕುಮಾರ್ ಅವರನ್ನು ನಾವು ಅಭಿನಂದಿಸಲೇಬೇಕಿದೆ. ಮಹಿಳೆಯರಲ್ಲಿ ಸ್ವಾವಲಂಬಿ ಜೀವನ ನಿರ್ವಹಣೆಗೆ ನೆರವು ನೀಡುತ್ತಿರುವ ಸ್ವಸಹಾಯ ಯೋಜನೆ 25 ವರ್ಷಗಳನ್ನು ಪೂರೈಸಿ ಸಮಾಜದಲ್ಲಿ ಗಮನಾರ್ಹ ಬದಲಾವಣೆ ತಂದಿದೆ. ಮಹಿಳೆಯರು ಇದೇ ರೀತಿ ಸಶಕ್ತಗೊಳ್ಳಬೇಕು ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನುಡಿದರು.


ಅವರು ಇಂದು ಬೆಳಿಗ್ಗೆ ಮಂಗಳೂರಿನ ಬಂಗ್ರಕೂಳೂರು ಗೋಲ್ಡ್‌ ಪಿಂಚ್‌ ಸಿಟಿಯಲ್ಲಿ ಆಯೋಜಿಸಿದ ನವೋದಯ ಸ್ವಸಹಾಯ ಗುಂಪುಗಳ ‘ರಜತ ಸಂಭ್ರಮ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತಾಡಿದರು.


ಸಮಾವೇಶದ ಉದ್ಘಾಟನೆ ನೆರವೇರಿಸಿ ಮಾತಾಡಿದ ರಾಜ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, “25 ವರ್ಷಗಳ ಹಿಂದೆ ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಸಹಕಾರ ಸಚಿವನಾಗಿದ್ದಾಗ ಇದೇ ದೀಪವನ್ನು ಬೆಳಗಿಸಿದ್ದೆ. ಆ ದೀಪವು ಇಂದು ನಿಮ್ಮೆಲ್ಲರ ಮನೆ ಮನಗಳನ್ನು ಬೆಳಗಿಸಿದೆ. ಮಹಿಳೆಯರ ಶಕ್ತಿಯನ್ನು ನಾನಿಲ್ಲಿ ನೋಡುತ್ತಿದ್ದೇನೆ. ಮಹಿಳೆಯರಿಗೆ ಆರ್ಥಿಕ ಶಕ್ತಿಯನ್ನು ತುಂಬಲು ರಾಜೇಂದ್ರ ಕುಮಾರ್ ಅವರಂತಹ ಜನನಾಯಕ ಈ ಯೋಜನೆಯನ್ನು ಜಾರಿಗೆ ತಂದರು. ಇಷ್ಟು ದೊಡ್ಡ ಪ್ರಮಾಣದಲ್ಲಿ ಸೇರಿರುವ ಮಹಿಳಾ ಶಕ್ತಿಯನ್ನು ಕಣ್ತುಂಬಿಕೊಳ್ಳುವುದೇ ನನ್ನ ಭಾಗ್ಯವಾಗಿದೆ. ಲಕ್ಷಾಂತರ ಮಂದಿ ಸ್ತ್ರೀಯರು ಸ್ವಸಹಾಯ ಗುಂಪುಗಳಲ್ಲಿ ತೊಡಗಿಕೊಂಡು ಮನೆ, ಗ್ರಾಮವನ್ನು ಬೆಳಗಿಸಿದ್ದಾರೆ. ಅವರಿಗೆ ಅಭಿನಂದನೆಗಳು.
ಆಶೀರ್ವಚನದ ಮಾತನ್ನಾಡಿದ ಪೇಜಾವರ ಅಧೋಕ್ಷಜ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು, “ಬದುಕನ್ನು ಪ್ರೀತಿಸುವ ಮಾತೆಯರನ್ನು ಮುಂದಿಟ್ಟುಕೊಂಡು ಸಮಾಜವನ್ನು ಕಟ್ಟುವ ಕೆಲಸವನ್ನು ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮಾಡಿದ್ದಾರೆ. ದ್ವೇಷ ಅಸೂಯೆಯನ್ನು ಬದಿಗಿಟ್ಟು ನಾವು ಸರಕಾರಕ್ಕೆ ಬೆಂಬಲ ನೀಡಬೇಕು.


ವೇದಿಕೆಯಲ್ಲಿ ವಿಧಾನಸಭಾ ಸ್ಪೀಕರ್ ಯ.ಟಿ.ಖಾದರ್, ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಇಫ್ಕೊ ಅಧ್ಯಕ್ಷ ಉದಯ್ ಶಂಕರ್ ಆವಸ್ಥಿ, ಮುರುಗೇಶ್ ಆರ್. ನಿರಾಣಿ, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಉಡುಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಕಾರ್ಕಳ ಶಾಸಕ ಸುನೀಲ್ ಕುಮಾರ್, ಕಿರಣ್ ಕೊಡ್ಗಿ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಐವನ್ ಡಿಸೋಜ, ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ, ಪುತ್ತೂರು ಶಾಸಕ ಅಶೋಕ್ ರೈ, ಬೆಳ್ಳಿ ಪ್ರಕಾಶ್, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಹಿರಿಯ ಉದ್ಯಮಿ ಜಯವರ್ಮ ಬಳ್ಳಾಲ್, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ, ಮೂಲ್ಕಿ ಶಾಸಕ ಉಮಾನಾಥ್ ಕೋಟ್ಯಾನ್, ಆಳ್ವಾಸ್ ಫೌಂಡೇಶನ್ ಅಧ್ಯಕ್ಷ ಮೋಹನ್ ಆಳ್ವ, ಭೋಜೇಗೌಡ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮಾಜಿ ಸಚಿವ ರಮಾನಾಥ್ ರೈ, ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮಿಥುನ್ ರೈ, ಇನಾಯತ್ ಅಲಿ, ಸಂಜೀವ ಮಠಂದೂರು, ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ, ಪ್ರಸಾದ್ ಕಾಂಚನ್, ರಕ್ಷಿತ್ ಶಿವರಾಮ್, ಅದಾನಿ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ಬ್ಯಾಂಕ್ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.

ಸಮಾವೇಶದ ವಿಶೇಷತೆ:
ಸಮಾವೇಶದಲ್ಲಿ 1.5 ಲಕ್ಷಕ್ಕೂ ಮಿಕ್ಕಿ ಮಹಿಳೆಯ ಸಮವಸ್ತ್ರ ಧರಿಸಿ ಭಾಗವಹಿಸಿದ್ದು ರಾಜ್ಯದಲ್ಲಿಯೇ ಪ್ರಥಮವಾಗಿತ್ತು.
ಪ್ರತಿಯೊಬ್ಬರಿಗೂ ಊಟ, ಉಪಹಾರ, ನೀರು, ಬಿಸ್ಕೆಟ್ ವ್ಯವಸ್ಥೆ ಮಾಡಲಾಗಿತ್ತು. 3000 ಬಸ್‌, 7000 ಕಾರ್‌ಗಳನ್ನು ಬುಕ್ಕಿಂಗ್‌ ಮಾಡಲಾಗಿತ್ತು.

ಸೈನಿಕರ ಕಲ್ಯಾಣ ನಿಧಿಗೆ 3 ಕೋಟಿ ರೂ. ದೇಣಿಗೆ: ಡಾ.ಎಂ.ಎನ್.ರಾಜೇಂದ್ರ ಕುಮಾರ್
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತಾಡಿದ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಸೈನಿಕರ ಕಲ್ಯಾಣ ನಿಧಿಗೆ ವೈಯಕ್ತಿಕವಾಗಿ 3 ಕೋಟಿ ರೂ. ನೀಡುವುದಾಗಿ ಹೇಳಿದರು. “ಮಹಿಳೆಯರು ಸಶಕ್ತ ರಾದರೆ ದೇಶ ಸಶಕ್ತವಾಗುತ್ತದೆ. ಮಹಿಳೆಯರು ಒಗ್ಗಟ್ಟಾಗಿ ಇರಬೇಕು. ಅವರಲ್ಲಿ ಬೇಧಭಾವ ಇರಬಾರದು ಎಲ್ಲರೂ ಸಮಾನರಾಗಿ ಬಾಳುವಂತಾಗಬೇಕು ಎಂಬ ಉದ್ದೇಶದಿಂದ 6 ಬಾರಿ ಸಮವಸ್ತ್ರವನ್ನು ನೀಡಿದ್ದೇನೆ ಎಂದರು.

error: Content is protected !!