‘ಬಿಗ್ ಬಾಸ್’ ಖ್ಯಾತಿಯ ನಿವೇದಿತಾ ಗೌಡರ ರೀಲ್ಸ್ ಈ ಬಾರಿ ಹುಚ್ಚಾಪಟ್ಟೆ ವೈರಲ್ ಆಗಿದೆ. ಈ ಬಾರಿ ಆಕೆ ಪುಟ್ಟ ಬಟ್ಟೆ ತೊಟ್ಟು ಪುಟಾಣಿ ಮಗುವಿನಂತೆ ಕುಣಿದಿದ್ದು, ಇದನ್ನು ನೋಡಿದ ಹುಡುಗರು ಭಾರೀ ಸಂತೋಷ ಪಟ್ಟಿದ್ದಾರೆ.
ಶಾರ್ಟ್ ಡ್ರೆಸ್ ಧರಿಸಿ ಸಿನಿಮಾ ಹಾಡೋದಕ್ಕೆ ಸಖತ್ ಆಗಿ ಸೊಂಟ ಬಳುಕಿಸಿ ʻವಾವ್ʼ ಎನಿಸಿಕೊಂಡಿದ್ದಾರೆ.
ದಿನದಿಂದ ದಿನಕ್ಕೆ ನಿವೇದಿತಾ ಬೋಲ್ಡ್ ಅವತಾರ ತಾಳುತ್ತಿದ್ದಾರೆ. ಸದಾ ಒಂದಲ್ಲಾ ಒಂದು ರೀಲ್ಸ್ ಹಾಗೂ ಫೋಟೋಶೂಟ್ ಮೂಲಕ ಅವರು ಚರ್ಚೆಗೆ ಗ್ರಾಸವಾಗುತ್ತಲೇ ಇರುತ್ತಾರೆ.
ಈಗ ಶಾರ್ಟ್ ಆಗಿರೋ ಬಟ್ಟೆ ಧರಿಸಿ ರೊಮ್ಯಾಂಟಿಕ್ ಹಾಡೋದಕ್ಕೆ ಹೆಜ್ಜೆ ಹಾಕಿದ್ದಾರೆ. ‘ಕೆಂಪೇಗೌಡ’ ಸಿನಿಮಾದ ‘ತರ ತರ ಹಿಡಿಸಿದೆ ಮನಸ್ಸಿಗೆ ನೀನು’ ಎಂಬ ಹಾಡು ಮಸ್ತ್ ಆಗಿ ಕುಣಿದಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಮತ್ತೆ ಲವ್ ಆಯ್ತಾ ಎಂದೆಲ್ಲಾ ನಟಿಗೆ ಕಾಲೆಳೆದಿದ್ದಾರೆ. ಮಾಜಿ ಪತಿ ಚಂದನ್ ಶೆಟ್ಟಿ ಜೊತೆಗಿನ ‘ಮುದ್ದು ರಾಕ್ಷಸಿ’ ಸಿನಿಮಾವನ್ನು ನಿವೇದಿತಾ ಶೂಟಿಂಗ್ ಮುಗಿಸಿ ಕೊಟ್ಟಿದ್ದಾರೆ. ಸದ್ಯದಲ್ಲೇ ಚಿತ್ರತಂಡ ರಿಲೀಸ್ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದೆ.
ಚಂದನ್ ಶೆಟ್ಟಿಗೆ ಡೈವೋರ್ಸ್ ಕೊಟ್ಟ ಬಳಿಕ ನಿವೇದಿತಾ ಗೌಡ ಬಿಂದಾಸ್ ಆಗಿ ರೀಲ್ಸ್‌ಗೆ ಹೆಜ್ಜೆ ಹಾಕುತ್ತಿದ್ದಾರೆ.